ಬೆಂಗಳೂರು: ಪ್ರಧಾನಿ ಮೋದಿ ಕುರಿತು ರಚಿಸಲಾದ ಗೀತೆಯ ಸಿ.ಡಿಯನ್ನು ಬಿಡುಗಡೆಗೊಳಿಸುವ ಮೂಲಕ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಆಚರಿಸಲಾಯಿತು.
ನರೇಂದ್ರ ಮೋದಿ ಕೆಲಸ ಕಾರ್ಯವನ್ನು ಕುರಿತು ಗಾಯಕಿ ರಮ್ಯಾ ವಶಿಷ್ಠ ಗೀತೆ ರಚಿಸಿ ದನಿ ನೀಡಿದ್ದರು. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಿ.ಡಿ ರಿಲೀಸ್ ಮಾಡಲಾಯ್ತು.
ಬಳಿಕ ಗೀತೆಯನ್ನು ಸ್ವತಃ ಹಾಡುವ ಮೂಲಕ ರಮ್ಯಾ ವಶಿಷ್ಠ ತಮ್ಮ ಕನಸು ನನಸಾದ ಪರಿಯನ್ನು ಹೇಳಿಕೊಂಡರು. ಆರು ವರ್ಷದಿಂದ ಮೋದಿ ಬಗೆಗೆ ಬರೆದು ಹಾಡಿದ ಗೀತೆ ಬಿಡುಗಡೆಗೆ ಮಾಡಲು ಕಾಯುತ್ತಿದ್ದೆ. ಮೋದಿ ಜನ್ಮದಿನದಂದು ಹಾಡಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ರು.