ETV Bharat / state

ಕೊರೊನಾ ಬಗ್ಗೆ ಸಂದೇಹವೇ?: ನಾಳೆಯಿಂದ ವೈದ್ಯರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ

ಕೊರೊನಾ ಸೋಂಕಿನ ಲಕ್ಷಣಗಳು, ಸಂಬಂಧಿತ ಆರೋಗ್ಯ ಸಮಸ್ಯೆಗಳು ಹಾಗೂ ಈ ಕುರಿತ ಯಾವುದೇ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಸಾರ್ವಜನಿಕರು ನುರಿತ ವೈದ್ಯರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಬಹುದು. ಈ ವೇಳೆ ರೋಗದ ಲಕ್ಷಣಗಳನ್ನು ಬರೆದುಕೊಳ್ಳುವ ವೈದ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡವರು. ಅಗತ್ಯ ಇದ್ದಲ್ಲಿ ಕರೆಯನ್ನು ತಜ್ಞ ವೈದ್ಯರಿಗೆ ವರ್ಗಾಯಿಸಿ ಹೆಚ್ಚಿನ ಮಾಹಿತಿಯನ್ನೂ ಒದಗಿಸಲಿದ್ದಾರೆ.

ಡಾ. ಅಶ್ವತ್ಥನಾರಾಯಣ
ಡಾ. ಅಶ್ವತ್ಥನಾರಾಯಣ
author img

By

Published : Mar 31, 2020, 9:01 PM IST

ಬೆಂಗಳೂರು: ಕೋವಿಡ್-19 ಸಂಬಂಧಿತ ಮಾಹಿತಿ ಪಡೆಯಲು ಮತ್ತು ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಜನರೇ ನೇರವಾಗಿ ವೈದ್ಯರೊಂದಿಗೆ ದೂರವಾಣಿ ಮೂಲಕ ಸಂವಹನ ನಡೆಸಲು ಅನುಕೂಲವಾಗುವ 'ಟೆಲಿ ಕನ್ಸಲ್ಟೇಷನ್‌' ಯೋಜನೆಗೆ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ನಾಳೆ ಚಾಲನೆ ನೀಡಲಿದ್ದಾರೆ.

ಪ್ರಾಯೋಗಿಕವಾಗಿ ಉಪ ಮುಖ್ಯಮಂತ್ರಿಯವರ ಸ್ವಕ್ಷೇತ್ರ ಮಲ್ಲೇಶ್ವರದಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶವಿದೆ. 'ಟೆಲಿ ಮೆಡಿಸಿನ್‌' ಅಂದರೆ ದೂರವಾಣಿ ಮೂಲಕ ವೈದ್ಯರ ನಡುವೆ ಪರಸ್ಪರ ಮಾಹಿತಿ ವಿನಮಯಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ವೈದ್ಯರ ಜತೆ ಜನಸಾಮಾನ್ಯರು ದೂರವಾಣಿ ಸಮಾಲೋಚನೆ ನಡೆಸಲು ಅವಕಾಶ ಇರಲಿಲ್ಲ. ಈ ಸಂಬಂಧ ಕಾನೂನು ತಿದ್ದುಪಡಿ ತಂದು ಆದೇಶ ಹೊರಡಿಸಲಾಗಿದ್ದು, ವೈದ್ಯರ ಜತೆ ಜನರೇ ನೇರವಾಗಿ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ನಿರ್ವಹಣೆ ಹೇಗೆ? :

ಕೊರೊನಾ ಸೋಂಕಿನ ಲಕ್ಷಣಗಳು, ಸಂಬಂಧಿತ ಆರೋಗ್ಯ ಸಮಸ್ಯೆಗಳು ಹಾಗೂ ಈ ಕುರಿತ ಯಾವುದೇ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಸಾರ್ವಜನಿಕರು ನುರಿತ ವೈದ್ಯರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಬಹುದು. ಈ ವೇಳೆ ರೋಗ ಲಕ್ಷಣಗಳನ್ನು ಬರೆದುಕೊಳ್ಳುವ ವೈದ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡವರು. ಅಗತ್ಯ ಇದ್ದಲ್ಲಿ ಕರೆಯನ್ನು ತಜ್ಞ ವೈದ್ಯರಿಗೆ ವರ್ಗಾಯಿಸಿ ಹೆಚ್ಚಿನ ಮಾಹಿತಿಯನ್ನೂ ಒದಗಿಸಲಿದ್ದಾರೆ.

ಪೋರ್ಟಿಯಾ ಮೆಡಿಕಲ್‌ ಸಂಸ್ಥೆ ಈ ಸೇವೆ ಒದಗಿಸುತ್ತಿದ್ದು, ವೈದ್ಯರ ತಂಡ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಂದ ಕರೆ ಸ್ವೀಕರಿಸಿ ಸೂಕ್ತ ಮಾರ್ಗದರ್ಶನ ನೀಡಲಿದೆ. ಜತೆಗೆ, ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿಂದಲೂ ವೈದ್ಯರ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.