ETV Bharat / state

ಕೊತ್ವಾಲ್​ಗೆ ಕಾಫಿ ಟೀ ಕೊಟ್ಟವರಿಗೆ ನನ್ನ ಬಗ್ಗೆ ಮಾತಾಡೋ ಅರ್ಹತೆ ಇಲ್ಲ: ಡಿಸಿಎಂ ಡಿಕೆಶಿಗೆ ಅಶ್ವತ್ಥನಾರಾಯಣ ತಿರುಗೇಟು - ನನ್ನ ಮಣ್ಣು ನನ್ನ ದೇಶ

Ashwath Narayan counter to DCM: ನವರಂಗಿ ನಾರಾಯಣ ಎಂದಿರುವ ಡಿ ಕೆ ಶಿವಕುಮಾರ್​ ಹೇಳಿಕೆ ವಿರುದ್ಧ ಅಶ್ವತ್ಥ ನಾರಾಯಣ್​ ಕಿಡಿ ಕಾರಿದ್ದಾರೆ.

Ashwath Narayan in 'My Soil my country' program
ನನ್ನ ಮಣ್ಣು ನನ್ನ ದೇಶ' ಕಾರ್ಯಕ್ರಮದಲ್ಲಿ ಅಶ್ವತ್ಥ ನಾರಾಯಣ
author img

By ETV Bharat Karnataka Team

Published : Sep 6, 2023, 1:26 PM IST

ಬೆಂಗಳೂರು: ಆಲೂಗೆಡ್ಡೆ ಹಾಕಿ ಬಂಗಾರ ತೆಗೆಯೋ ಇತಿಹಾಸ ಇರೋರಿಗೆ ನನ್ನ ಬಗ್ಗೆ ಮಾತಾಡಲು ಅರ್ಹತೆಯೂ ಇಲ್ಲ, ಯೋಗ್ಯತೆಯೂ ಇಲ್ಲ ಎಂದು ನವರಂಗಿ ನಾರಾಯಣ ಎಂಬ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಡಿಸಿಎಂ ಡಾ ಅಶ್ವತ್ಥನಾರಾಯಣ ಖಾರವಾಗಿಯೇ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ 'ನನ್ನ ಮಣ್ಣು ನನ್ನ ದೇಶ' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊತ್ವಾಲ್ ಹಿಂಬಾಲಕರು ನನ್ನ ಬಗ್ಗೆ ಮಾತಾಡ್ತಾರಾ? ಎಂದು ಮತ್ತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು. ಡಿ ಕೆ ಶಿವಕುಮಾರ್ ಅವರ ಹಿನ್ನೆಲೆ ನೋಡಿ.. ಭಗವಂತನೋ, ಜನರ ಆಶೀರ್ವಾದದಿಂದಲೋ ಅವರು ಒಂದು ಸ್ಥಾನಕ್ಕೆ ಬಂದಿದ್ದಾರೆ. ಇಂತಹ ಅಹಂಕಾರದ ಮಾತುಗಳನ್ನು ಬಿಡಿ, ಕೊತ್ವಾಲ್ ಹಿಂಬಾಲಕರು, ಕೊತ್ವಾಲ್​ಗೆ ಕಾಫಿ ಟೀ ಕೊಟ್ಟವರು ನನ್ನ ಬಗ್ಗೆ ಮಾತನಾಡ್ತಾರೆ. ಆಲೂಗೆಡ್ಡೆ ಹಾಕಿ ಬಂಗಾರ ತೆಗೆಯೋ ಇತಿಹಾಸ ಇರೋರು, ಇವರಿಗೆ ನನ್ನ ಬಗ್ಗೆ ಮಾತಾಡಲು ಅರ್ಹತೆಯೂ ಇಲ್ಲ, ಯೋಗ್ಯತೆಯೂ ಇಲ್ಲ ಎಂದು ನವರಂಗಿ ನಾರಾಯಣ ಎಂಬ ಮಾತಿಗೆ ಟಾಂಗ್​ ಕೊಟ್ಟರರು.

ಮೆಡಿಕಲ್ ಕಾಲೇಜು ಸ್ಥಳಾಂತರದ ಬಗ್ಗೆ ಪ್ರತಿಭಟನೆ ವಿಚಾರ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅಶ್ವತ್ಥನಾರಾಯಣ, ಕೆಂಗಲ್ ಹನುಮಂತಯ್ಯ ಹೆಸರಿನಲ್ಲಿ ರಾಮನಗರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಆಗಬೇಕಿತ್ತು. ಕನಕಪುರದ ಜನರು ಕೂಡ ಇವರಿಗೆ ಛೀ ತೂ ಎಂದು ಛೀಮಾರಿ ಹಾಕುತ್ತಿದ್ದಾರೆ. ರಾಮನಗರ ಜನತೆಗೆ ಅಗೌರವ ತೋರಿದ್ದಾರೆ. ಸರ್ಕಾರದಲ್ಲಿ ಪವರ್ ಫುಲ್ ಅಂತಾರೆ. ರಾಮನಗರದಿಂದ ಕಳ್ಳತನ ಮಾಡಿಕೊಂಡು ಹೋಗೋದನ್ನು ಯಾರು ಒಪ್ಪೋದಿಲ್ಲ. ಜನರು ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಹಿಂದೂ ಧರ್ಮದ ಬಗ್ಗೆ ಪರಮೇಶ್ವರ್ ವಿವಾದಾತ್ಮಕ ಹೇಳಿಕೆ ವಿಚಾರ ಮಾತನಾಡಿದ ಮಾಜಿ ಸಚಿವ ಅಶ್ವತ್ಥನಾರಾಯಣ್, ಅಹಂಕಾರ, ದುರಹಂಕಾರದ ಮಾತಿಗೆ ಅವರೇ ಭಸ್ಮರಾಗುತ್ತಾರೆ. ಸನಾತನ ಧರ್ಮವನ್ನೇ ಇಡೀ ವಿಶ್ವ ಒಪ್ಪಿದೆ. ತಪ್ಪನ್ನು ತಪ್ಪು ಅಂತಾ ಹೇಳುವ ಧೈರ್ಯ ಇವರಿಗಿಲ್ಲ. ದುರಹಂಕಾರಿಗಳಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : ಸನಾತನ ಧರ್ಮ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ.. ದೇಶದ ಜನತೆಯ ಕ್ಷಮೆಯಾಚಿಸುವಂತೆ ಅಶ್ವತ್ಥ್​ ನಾರಾಯಣ್ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.