ETV Bharat / state

ಕೋವಿಡ್​ ನಿಯಮ ಉಲ್ಲಂಘನೆ: ಡ್ರೋನ್ ಪ್ರತಾಪ್​ ಪೊಲೀಸರ ವಶಕ್ಕೆ‌

author img

By

Published : Aug 3, 2020, 7:13 PM IST

ಜೂನ್ 20 ರಂದು ಸಾಂಸ್ಥಿಕ ಕ್ವಾರಂಟೈನ್ ಅವಧಿಯಲ್ಲಿರುವಾಗಲೇ ವಕೀಲರನ್ನು ತನ್ನ ಹೊಟೇಲ್​ಗೆ‌ ಕರೆಸಿಕೊಂಡು ಒಂದು ಗಂಟೆ ಕಾಲ ಪ್ರತಾಪ್ ಮಾತನಾಡಿಸಿದ್ದ. ಈ ಹಿನ್ನೆಲೆ ಕೋವಿಡ್​ ನಿಯಮ ಉಲ್ಲಂಘನೆಯ ಬಗ್ಗೆ ದೂರು ದಾಖಲಾಗಿತ್ತು. ಈಗ ಪ್ರತಾಪ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡ್ರೋನ್ ಪ್ರತಾಪ್​ನನ್ನು ವಶಕ್ಕೆ‌ ಪಡೆದ ಅಶೋಕ‌ ನಗರ ಪೊಲೀಸರು

ಬೆಂಗಳೂರು: ಕ್ವಾರಂಟೈನ್ ನಿಯಮ ಪಾಲಿಸದ ಹಿನ್ನೆಲೆ ಡ್ರೋನ್ ಪ್ರತಾಪ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಸಾಂಸ್ಥಿಕ ಕ್ವಾರಂಟೈನ್ ಮುಕ್ತಾಯ ಹಿನ್ನೆಲೆಯಲ್ಲಿ ಪೊಲೀಸರು ಪ್ರತಾಪ್​ನನ್ನು ವಶಕ್ಕೆ‌ ಪಡೆದುಕೊಂಡಿದ್ದಾರೆ.

ಮಾಧ್ಯಮವೊಂದಕ್ಕೆ‌ ಸಂದರ್ಶನ ನೀಡುವ ಮೂಲಕ ಹೋಂ ಕ್ವಾರಂಟೈನ್ ನಿಯಮ‌ ಉಲ್ಲಂಘನೆ ಹಿನ್ನೆಲೆಯಲ್ಲಿ ತಲಘಟ್ಟಪುರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಬಂಧನ ಭೀತಿಯಿಂದ ಪ್ರತಾಪ್ ಚಿಕ್ಕಮಗಳೂರು ಹಾಗೂ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ. ಬಳಿಕ‌‌ ಆತನನ್ನು ಪತ್ತೆ ಹಚ್ಚಿ ರಿಚ್ಮಂಡ್​ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ನಲ್ಲಿ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಜೂನ್ 20 ರಂದು ಸಾಂಸ್ಥಿಕ ಕ್ವಾರಂಟೈನ್ ಅವಧಿಯಲ್ಲಿರುವಾಗಲೇ ವಕೀಲರನ್ನು ತನ್ನ ಹೊಟೇಲ್​ಗೆ‌ ಕರೆಸಿಕೊಂಡು ಒಂದು ಗಂಟೆ ಕಾಲ ಪ್ರತಾಪ್ ಮಾತನಾಡಿಸಿದ್ದ. ನಿಯಮ ಉಲ್ಲಂಘನೆ ಹಿನ್ನೆಲೆ ದೂರು ದಾಖಲಾಗಿತ್ತು. ಈಗ ಪ್ರತಾಪ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ಓದಿಗಾಗಿ: ಕ್ವಾರಂಟೈನ್​ನಲ್ಲಿರುವ ಡ್ರೋನ್ ಪ್ರತಾಪ್​ನಿಂದ ಮತ್ತೊಂದು ಅವಾಂತರ: ಎರಡನೇ ಎಫ್​​ಐಆರ್​ ದಾಖಲು

ವಶಕ್ಕೂ ಮೊದಲು ವಿಚಾರಣೆ:

ಈ ಬಗ್ಗೆ ಹೋಂ ಕ್ವಾರಂಟೈನ್ ಪಾಲನೆ ಸಮಿತಿ‌‌ ಮುಖ್ಯಸ್ಥ ಹಾಗೂ ‌ಸಿವಿಲ್ ಕಮಾಡೆಂಟ್ ಪಿಆರ್ ಎಸ್ ಚೇತನ್ ನೇತೃತ್ವದ ತಂಡ ಡ್ರೋನ್ ಪ್ರತಾಪ್​ನನ್ನು ವಿಚಾರಣೆ‌ಗೆ ಒಳಪಡಿಸಿತ್ತು. ಬಳಿಕ‌ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ​ಅವರು, ಹೋಂ ಕ್ವಾರಂಟೈನ್ ನಿಯಮವನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪ್ರತಾಪ್​ನನ್ನು‌ ನಾವು ಕರೆದುಕೊಂಡು ಬಂದು ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದೆವು. ಕ್ವಾರಂಟೈನ್ ನಲ್ಲಿರುವಾಗಲೂ ಕೂಡ ಪ್ರತಾಪ್ ನಿಯಮ ಉಲ್ಲಂಘಿಸಿದ್ದಾರೆ. ಹಾಗಾಗಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲು ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.