ETV Bharat / state

370 ವಿಧಿ ರದ್ದು: ಈ ಬಗ್ಗೆ ಮಾತನಾಡಲ್ಲ ಎಂದ ಹೆಚ್​ಡಿಡಿ, ಕೇಂದ್ರದ ನಿರ್ಧಾರಕ್ಕೆ ಸಿದ್ದು ಖಂಡನೆ - article 370

370ನೇ ವಿಧಿ ರದ್ದತಿ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ, ಕಾದು ನೋಡುತ್ತೇನೆ. ಗೃಹ ಸಚಿವ ಅಮಿತ್ ಶಾ ಅಲ್ಲಿನ ಅಭಿವೃದ್ಧಿಗೆ 5 ವರ್ಷ ಕಾಲಾವಕಾಶ ತೆಗೆದುಕೊಂಡಿದ್ದಾರೆ. ನಂತರ ಮಾತನಾಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡ
author img

By

Published : Aug 7, 2019, 8:40 AM IST

ಬೆಂಗಳೂರು: ಸಂವಿಧಾನದ 370ನೇ ವಿಧಿ ರದ್ದತಿ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಏನಾದರು ಹೇಳಿ ಪಕ್ಷಕ್ಕೆ ತೊಂದರೆಯಾಗುವಂತೆ ಮಾಡುವುದಿಲ್ಲ. ನಾನು ಪ್ರಧಾನಿ ಆದಾಗ ಏನು ಕೆಲಸ ಮಾಡಿದ್ದೆ ಎನ್ನುವುದನ್ನು ಲೋಕಸಭೆಯಲ್ಲಿ ಮಾತನಾಡಿದ್ದೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

Article 370 does not talk about repeal
370ನೇ ವಿಧಿ ರದ್ದತಿ ಖಂಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಇಲ್ಲಿನ ಜೆ.ಪಿ.ಭವನದ ಪಕ್ಷದ ಕಚೇರಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯಾಗಿದ್ದಾಗ ಐದು ಬಾರಿ ಕಾಶ್ಮೀರಕ್ಕೆ ಹೋಗಿ, ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದೇನೆ. ಯಾವುದೇ ಗಲಾಟೆಗೆ ಆಸ್ಪದ ಕೊಡದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇನೆ. ಈಗ ಕ್ಲೀನ್ ಕಾಶ್ಮೀರ್, ಕ್ಲೀನ್ ಇಂಡಿಯಾ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನಾನು ಇನ್ನೂ ಐದು ವರ್ಷ ಇರುತ್ತೇನೆ ಎಂಬ ಭಾವನೆ ಇದೆ. ಅವರು ಏನು ಮಾಡುತ್ತಾರೆ ಎಂಬುದನ್ನು ನೋಡೋಣ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ನಡೆಗೆ ಕುಟುಕಿದ್ದಾರೆ.

ಇನ್ನು ಕುಮಾರಸ್ವಾಮಿ ಅವರು ಪ್ರವಾಹಪೀಡಿತ ಭಾಗಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ವೈಮಾನಿಕ ಸರ್ವೆ ಮಾಡೋಕೆ ಹೇಳುತ್ತೇನೆ ಎಂದು ಉತ್ತರ ಕರ್ನಾಟಕದ ಪ್ರವಾಹ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು.

370 ವಿಧಿ ರದ್ದು ಖಂಡಿಸಿದ ಸಿದ್ದರಾಮಯ್ಯ: ಕೇಂದ್ರ ಸರ್ಕಾರ 370ನೇ ವಿಧಿ ರದ್ದುಪಡಿಸಿರುವ ಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.

ಸಮ್ಮಿತಿಯಿಂದ ಮಾಡುವುದನ್ನು ಒಪ್ಪುತ್ತೇವೆ. ಒಬ್ಬರ ಆಸಕ್ತಿಯಿಂದ ಮಾಡಿದ್ದನ್ನು ಹಕ್ಕು ಎಂದು ಸಮರ್ಥಿಸಲು ಸಾಧ್ಯವಿಲ್ಲ. ಅಲ್ಲಿ ಸರ್ಕಾರ ರಚನೆಗೆ ಜನರ ಸಮ್ಮಿತಿ ಸಿಕ್ಕಿರಬಹುದು. 370ನೇ ವಿಧಿ ರದ್ದತಿಗೆ ಒಪ್ಪಿಗೆ ಸಿಕ್ಕಿಲ್ಲ ಎಂದು ಕಿಡಿಕಾರಿದರು.

ಭಯೋತ್ಪಾದನೆ ತಪ್ಪಿಸುವುದೇ ನಿಮ್ಮ ಆದ್ಯತೆ ಆಗಿದ್ದರೆ, ಕಾನೂನು ಸುವ್ಯವಸ್ಥೆ ಕಾಪಡುವುದಕ್ಕೆ 370ನೇ ವಿಧಿ ರದ್ದು ಮಾಡಿದ್ದು ಏಕೆ? ಹೆಚ್ಚುವರಿ ಸೈನ್ಯವನ್ನ ಅಲ್ಲಿಗೆ ಕಳುಹಿಸಿ ವ್ಯವಸ್ಥೆ ಹಿಡಿತಕ್ಕೆ ಪಡೆದಿದ್ದು ಮೋದಿ ಸರ್ವಾಧಿಕಾರಿ ಧೋರಣೆ ಅಲ್ಲವೇ? ಎಂದು ಮತ್ತೊಮ್ಮೆ ಮೋದಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.

Intro:ಬೆಂಗಳೂರು : ಭಾರತ ಸಂವಿಧಾನದ 370 ನೇ ವಿಧಿ ರದ್ದುಗೊಳಿಸಿರುವ ವಿಚಾರಕ್ಕೆ ಪ್ರಕ್ರಿಯಿಸಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಆ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ನಾನು ಏನಾದರೂ ಹೇಳಿ ಪಕ್ಷಕ್ಕೆ ತೊಂದರೆಯಾಗುವಂತೆ ಮಾಡುವುದಿಲ್ಲ. ನಾನು ಏನು ಕೆಲಸ ಮಾಡಿದ್ದೆ ಅನ್ನುವುದನ್ನು ಪಾರ್ಲಿಮೆಂಟ್ ನಲ್ಲೇ ಮಾತನಾಡಿದ್ದೇನೆ ಎಂದು ಹೇಳಿದರು.Body:ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಎಸ್ಸಿ,ಎಸ್ಟಿ ಸಮುದಾಯ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ನಾನು ಪ್ರಧಾನಿಯಾಗಿದ್ದಾಗ ಐದು ಬಾರಿ ಕಾಶ್ಮೀರಕ್ಕೆ ಹೋಗಿ, ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದೆ. ಯಾವುದೇ ಗಲಾಟೆಗೆ ಆಸ್ಪಾದ ಕೊಡದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇನೆ. ಈಗ ಕ್ಲೀನ್ ಕಾಶ್ಮೀರ್ ಕ್ಲೀನ್ ಇಂಡಿಯಾ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನಾನು ಇನ್ನೂ ಐದು ವರ್ಷ ಇರುತ್ತೇನೆ ಎಂಬ ಭಾವನೆ ಇದೆ. ಅವರು ಏನು ಮಾಡುತ್ತಾರೆ ಎಂಬುದನ್ನು ನೋಡೋಣ ಎಂದರು.
ಉತ್ತರ ಕರ್ನಾಟಕದಲ್ಲಿ ಪ್ರವಾಹ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಆ ಭಾಗಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ವೈಮಾನಿಕ ಸರ್ವೆ ಮಾಡೋಕೆ ಹೇಳುತ್ತೇನೆ ಎಂದು ತಿಳಿಸಿದರು.
ನಾಳೆ ಜೆಡಿಎಸ್ ಸಮಾವೇಶವಿದೆ. ಅದು ಮುಗಿದ ಮೇಲೆ ಕುಮಾರಸ್ವಾಮಿ ಅವರಿಗೆ ಹೇಳುತ್ತೇನೆ. ಅಲ್ಲಿನ ಜನ ಮತ ಕೊಡಲಿ, ಬಿಡಲಿ ಅಲ್ಲಿಗೆ ಹೋಗಿ ವೈಮಾನಿಕ ಸರ್ವೆ ಮಾಡಿಕೊಂಡು ಬರುತ್ತಾರೆ. ಆ ಮೇಲೆ ಸರ್ಕಾರ ವಿಧಾನಸಭೆ ಕರೆದಾಗ ಚರ್ಚೆ ಮಾಡೋಣ ಎಂದರು.

Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.