ETV Bharat / state

ದೈಹಿಕ ನ್ಯೂನತೆ ಮೆಟ್ಟಿ ನಿಂತ ಕಲಾವಿದರು: ಬಣ್ಣಗಳ ಮೂಲಕ ಬದುಕು ಅರಳಿಸಿದ ವಿಶೇಷಚೇತನರು - ಕಾಲ ಬೆರಳುಗಳಲ್ಲೇ ಕುಂಚ ಹಿಡಿದು ಚಿತ್ರಬಿಡಿಸುವ ಕಲಾವಿದರು

Art from heart in Bengaluru.. ಪ್ರಗತಿ ತಂಡದಿಂದ ಆರ್ಟ್ ಫ್ರಮ್ ದಿ ಹಾರ್ಟ್ ಚಿತ್ರಕಲಾ ಪ್ರದರ್ಶನ ಚಿತ್ರಪರಿಷತ್​ನಲ್ಲಿ ನಡೆಯುತ್ತಿದೆ. 20ಕ್ಕೂ ಹೆಚ್ಚು ವಿಶೇಷ ಚೇತನರು ಭಾಗವಹಿಸಿದ್ದಾರೆ. ಎರಡು ದಿನಗಳ ಕಾಲ ಚಿತ್ರ ಕಲಾಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

Art from the Heart painting exhibition by Pragati Team
ಪ್ರಗತಿ ತಂಡದಿಂದ ಆರ್ಟ್ ಫ್ರಮ್ ದಿ ಹಾರ್ಟ್ ಚಿತ್ರಕಲಾ ಪ್ರದರ್ಶನ
author img

By

Published : Mar 5, 2022, 8:38 PM IST

ಬೆಂಗಳೂರು: ಜೀವನ ಇಷ್ಟೇ ಅನ್ನೋವರ ಮಧ್ಯೆ ಜೀವನ ಅನ್ನೋದು ಬೆಟ್ಟದಷ್ಟು ಅಂತ ತಮ್ಮ ಕಲೆಗಳ ಮೂಲಕವೇ ಒಂದಷ್ಟು ಮಂದಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ಕೊರತೆಗಳನ್ನು ಬದಿಗಿರಿಸಿ ಅದಕ್ಕೂ ಮೀರಿದ ಬದುಕ್ಕೊಂದು ಇದೆ ಎಂದು ತೋರಿಸಿಕೊಡುವ ಚಿತ್ರಕಲಾ ಪ್ರದರ್ಶನವೊಂದು ಚಿತ್ರಪರಿಷತ್​ನಲ್ಲಿ ನಡೆಯುತ್ತಿದೆ.‌ ಪ್ರಗತಿ ತಂಡದಿಂದ ಆರ್ಟ್ ಫ್ರಮ್ ದಿ ಹಾರ್ಟ್ ಎನ್ನುವ ಹೆಸರಿನಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.‌

ಪ್ರಗತಿ ತಂಡದಿಂದ ಆರ್ಟ್ ಫ್ರಮ್ ದಿ ಹಾರ್ಟ್ ಚಿತ್ರಕಲಾ ಪ್ರದರ್ಶನ

ಸಿನಿಮಾ ನಿರ್ದೇಶಕ ಸಾದ್ ಖಾನ್ ವಿನೂತನ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ಕೊಟ್ಟರು. ನಂತರ ಮಾತನಾಡಿದ ಅವರು, ಸಮಸ್ಯೆಗಳನ್ನು ಬದಿಗೊತ್ತಿ ಬಣ್ಣಗಳ ಮೂಲಕ ಬದುಕು ಜೀವಂತ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮುಂದೆ ಕಷ್ಟಗಳು ಎದುರಾದರೂ ನಿಮ್ಮ ಕಲೆಗಳನ್ನ ನೆನಪಿಸಿಕೊಂಡು ಇನ್ನಷ್ಟು ಉತ್ಸಾಹಿ ಆಗುತ್ತೇನೆ ಎಂದರು.

ಈ ಕುರಿತು ಪ್ರಗತಿ ತಂಡ ಶ್ರಾವಣಿ ಮಾತಾನಾಡಿ, 20ಕ್ಕೂ ಹೆಚ್ಚು ಕಲಾವಿದರು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರಗಳನ್ನ ನೋಡಿದರೆ ಯಾರೇ ಆದರೂ ಆಶ್ಚರ್ಯ ಪಡುತ್ತಾರೆ. ಯಾಕೆಂದರೆ ಚಿತ್ರಗಳನ್ನು ಕೈಗಳು ಸ್ವಾಧೀನ ಇಲ್ಲದವರು, ಮಾತು ಬಾರದವ್ರು, ಕಿವಿ ಕೇಳದವರು ನಾನಾ ಅಂಗವೈಕಲ್ಯತೆ ಇರುವವರು ಬಿಡಿಸಿದ್ದಾರೆ. ಫುಟ್ ಪೇಂಟಿಂಗ್ ಮೂಲಕ ಕಲಾಸಕ್ತರನ್ನು ಸೆಳೆಯುತ್ತಿದ್ದಾರೆ. ಈ ರೀತಿಯ ವಿಶೇಷ ಚೇತನರಿಗಾಗಿ ಈ ವೇದಿಕೆಯನ್ನು ಕಲ್ಪಿಸಿದ್ದೇವೆ. ಇಲ್ಲಿ ಎರಡು ದಿನಗಳ ಕಾಲ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ತಿಳಿಸಿದರು.

ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಕಲಾವಿದ ರಾಮಕೃಷ್ಣನ್ ಮಾತನಾಡಿ, ಬಾಲ್ಯದಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ದೇಹದ ಶಕ್ತಿ ಕುಂದಿದರೂ ಮಾನಸಿಕ ಶಕ್ತಿ ಕುಂದಿಲ್ಲ ಎಂದು ಭರವಸೆಯ ಮಾತುಗಳನ್ನಾಡಿದರು.

ಇದನ್ನೂ ಓದಿ: 10 ದಿನಗಳ ಯುದ್ಧದಲ್ಲಿ ರಷ್ಯಾ ಪಡೆಗಳ 10 ಸಾವಿರ ಮಂದಿ ಸಾವು: ಉಕ್ರೇನ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.