ಬೆಂಗಳೂರು: ಗಾಂಜಾ ಅಮಲಿನಲ್ಲಿ ಅಂಗಡಿಗಳ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ಪುಂಡಾಟ ನಡೆಸಿದ್ದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಸುಹಾಸ್ ಹಾಗೂ ಮಾರೇಗೌಡ ಬಂಧಿತ ಆರೋಪಿಗಳು. ಕಳೆದ ಜೂನ್ 30ರಂದು ಗಾಂಜಾ ಅಮಲಿನಲ್ಲಿ ಬೈಕ್ನಲ್ಲಿ ಮಚ್ಚು- ಲಾಂಗ್ ಬೀಸಿಕೊಂಡು ವಿಜಯನಗರದಿಂದ ಬ್ಯಾಡರಹಳ್ಳಿಯವರೆಗೂ ಪಾನಿಪುರಿ ಅಂಗಡಿ ಸೇರಿದಂತೆ ಸಿಕ್ಕಸಿಕ್ಕ ಅಂಗಡಿಗಳ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲೂ ಈ ಹಿಂದೆ ಆರೋಪಿಗಳು ಇದೇ ರೀತಿ ಕೃತ್ಯ ನಡೆಸಿದ್ದರು.
ಈ ಸಂಬಂಧ ಕಾಮಾಕ್ಷಿಪಾಳ್ಯ ಇನ್ ಸ್ಪೆಕ್ಟರ್ ಗೌತಮ್ ನೇತೃತ್ವದ ತಂಡದಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.