ETV Bharat / state

ಪ್ರೇಯಸಿ ಆಸೆ ಪೂರೈಸಲು ಸಹೋದರನ ಮನೆಗೆ ಕನ್ನ ಹಾಕಿದವನ ಬಂಧನ

ಪ್ರೇಯಸಿ ಗೋವಾಕ್ಕೆ ಪ್ರವಾಸ ಹೋಗುವ ಆಸೆ ಈಡೇರಿಸಲು ಕಳ್ಳತನ - ಆಶ್ರಯ ನೀಡಿದ್ದ ಸ್ವಂತ ಅಣ್ಣನ ಮನೆಗೆ ಕನ್ನ ಹಾಕಿದ್ದ ತಮ್ಮ- ಮನೆಯಿಲ್ಲಿದ್ದ 103 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಆರೋಪಿ- ಗೋವಾದಲ್ಲಿ ಆರೋಪಿ ಬಂಧನ

Arrested Accused Mohammad Irfan
ಬಂಧಿತ ಆರೋಪಿ ಮೊಹಮ್ಮದ್​ ಇರ್ಫಾನ್​
author img

By

Published : Dec 27, 2022, 9:54 AM IST

Updated : Dec 27, 2022, 12:19 PM IST

ಕಳ್ಳತನ ಪ್ರಕರಣ- ಆರೋಪಿ ಬಂಧನ

ಬೆಂಗಳೂರು: ಪ್ರೀತಿಸಿದವಳ ಆಸೆ ಪೂರೈಸಲು ಆಶ್ರಯ ನೀಡಿ ಸಾಕುತ್ತಿದ್ದ ಅಣ್ಣನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ.

ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾದಲ್ಲಿ ಅಣ್ಣ ಸಲ್ಮಾನ್, ಅತ್ತಿಗೆ ಹಾಗೂ ತಾಯಿಯೊಂದಿಗೆ ವಾಸವಿದ್ದ ಆರೋಪಿ ನಿರುದ್ಯೋಗಿಯಾಗಿದ್ದನು. ಸಹೋದರ ಸಲ್ಮಾನ್ ಸುದ್ದುಗುಂಟೆಪಾಳ್ಯದಲ್ಲಿ ಸೇಲ್ಸ್​ಮ್ಯಾನ್​ ಕೆಲಸ ಮಾಡಿಕೊಂಡಿದ್ದ. ಇನ್ನು ತಮ್ಮ ಇರ್ಫಾನ್ ಮಾತ್ರ ಕೆಲಸವಿಲ್ಲದೇ ಓಡಾಡಿಕೊಂಡಿದ್ದನು. ಕೆಲಸವಿಲ್ಲದಿದ್ದರೂ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆರೋಪಿ, ಆಕೆಯನ್ನು ಗೋವಾಗೆ ಪ್ರವಾಸ ಹೋಗುವ ಬಯಕೆಯನ್ನು ಪೂರ್ಣಗೊಳಿಸಲು ಮನೆಯಲ್ಲಿ ಬೀರುವಿನಲ್ಲಿದ್ದ 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು.

ನವೆಂಬರ್ 29ರಂದು‌ ಸಲ್ಮಾನ್ ಮನೆಯ ಬೀರು ಪರಿಶೀಲಿಸಿದಾಗ ಕಳ್ಳತನ ಬಯಲಾಗಿತ್ತು. ಅದೇ ಸಂದರ್ಭದಲ್ಲಿ 4-5 ದಿನಗಳಿಂದ ಮನೆಗೆ ಬಾರದೇ ಇದ್ದ ತಮ್ಮ ಇರ್ಫಾನ್ ವಿರುದ್ಧ ಅನುಮಾನ ವ್ಯಕ್ತಪಡಿಸಿ ಆಡುಗೋಡಿ ಠಾಣೆಗೆ ಸಲ್ಮಾನ್ ದೂರು ನೀಡಿದ್ದರು.

ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಗೋವಾಗೆ ಹೋಗಿ ಮೋಜು ಮಸ್ತಿಯಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಐದು ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ ಹಾಗೂ ಒಂದು ಡಿಎಸ್ಎಲ್ಆರ್ ಕ್ಯಾಮರಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ತಿಳಿಸಿದ್ದಾರೆ.

ಇದನ್ನೂ ಓದಿ: ಮಸಾಜ್‌ಗೆಂದು ಮಂಗಳಮುಖಿಯ ಮನೆಗೆ ಬಂದು 7 ಲಕ್ಷ ರೂ ದೋಚಿದ್ದ ಇಬ್ಬರ ಬಂಧನ

Last Updated : Dec 27, 2022, 12:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.