ETV Bharat / state

ಕೊಕೈನ್ ಜಾಲ ಹರಡಿದ್ದ ಪ್ರಮುಖ ಕಿಂಗ್ ಪಿನ್ ಬಂಧನ - Arrest of Kingpin Chidibere Ambrose by ccb police

ನಗರದಲ್ಲಿ ಡ್ರಗ್ಸ್‌ ಜಾಲವನ್ನ ಸೃಷ್ಟಿಸಿದ್ದ ನೈಜೀರಿಯಾ ಪ್ರಜೆಯೋರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಹಿಂದೆ 12 ಜನರ ಬಂಧನ ಮಾಡಲಾಗಿತ್ತು. ಅವರ ಜೊತೆ ಸಂಪರ್ಕ ಹೊಂದಿದ ಲಿಂಕ್ ಮೊದಲು ಸಿಕ್ಕಿತ್ತು..

ಕೊಕೈನ್ ಜಾಲ ಹರಡಿದ್ದ ಪ್ರಮುಖ ಕಿಂಗ್ ಪಿನ್​ ಚಿಡಿಬೇರ್ ಅಂಬ್ರೋಸ್
ಕೊಕೈನ್ ಜಾಲ ಹರಡಿದ್ದ ಪ್ರಮುಖ ಕಿಂಗ್ ಪಿನ್​ ಚಿಡಿಬೇರ್ ಅಂಬ್ರೋಕೊಕೈನ್ ಜಾಲ ಹರಡಿದ್ದ ಪ್ರಮುಖ ಕಿಂಗ್ ಪಿನ್​ ಚಿಡಿಬೇರ್ ಅಂಬ್ರೋಸ್ಸ್
author img

By

Published : Dec 15, 2020, 12:19 PM IST

Updated : Dec 15, 2020, 12:31 PM IST

ಬೆಂಗಳೂರು : ಕೊಕೈನ್ ಜಾಲ ಹರಡಿದ್ದ ಪ್ರಮುಖ ಕಿಂಗ್ ಪಿನ್​ ಚಿಡಿಬೇರ್ ಅಂಬ್ರೋಸ್​​ನನ್ನು ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತ ನೈಜೀರಿಯನ್ ಪ್ರಜೆಗಳ ಮೂಲಕ ನಗರದಲ್ಲಿ‌ ಕೊಕೈನ್ ಜಾಲ ಹರಡಿದ್ದ.

ಕೊಕೈನ್ ಜಾಲ ಹರಡಿದ್ದ ಪ್ರಮುಖ ಕಿಂಗ್ ಪಿನ್ ಬಂಧನ

ಈ ಹಿಂದೆ ಸಿಸಿಬಿ ಬಂಧಿಸಿದ್ದ ಎಲ್ಲಾ ನೈಜೀರಿಯನ್ ಪೆಡ್ಲರ್ಸ್​ಗೆ ಈತನ ಲಿಂಕ್ ಇತ್ತು. ಅಷ್ಟು ಮಾತ್ರವಲ್ಲದೆ ನೈಜೀರಿಯಾ ಮೂಲದ ಪೆಡ್ಲರ್​ಗಳಿಗೆ ಕೊಕೈನ್ ಸರಬರಾಜು ಮಾಡಿ ಅಧಿಕ ಹಣಗಳಿಸುತ್ತಿದ್ದ. ಈಗಾಗಲೇ ಬಂಧಿಸಲಾಗಿರುವವರನ್ನು ವಿಚಾರಣೆ ನಡೆಸುವಾಗ ಅಂಬ್ರೋಸ್ ಹೆಸರು‌ ಕೇಳಿ‌ ಬಂದಿತ್ತು.

ಹೀಗಾಗಿ ಈತನ ಬಂಧನ ಮಾಡಲು ಸಿಸಿಬಿ ವಿಶೇಷ ತಂಡ ರಚನೆ‌ ಮಾಡಿ‌, ಸದ್ಯ ಬಂಧಿಸಿದೆ. ಡ್ರಗ್ಸ್​​ ಜಾಲದಲ್ಲಿ ಈತ ಭಾಗಿಯಾಗಿರುವ ವಿಚಾರ ಪೊಲೀಸರಿಗೆ ತಿಳಿಯಬಾರದೆಂದು ಚೀಫ್ ಎಂದು ಅಡ್ಡ ಹೆಸರು ಇಟ್ಟುಕೊಂಡಿದ್ದ. ಸದ್ಯ ಅಂಬ್ರೋಸ್ ಅಂತಿಮವಾಗಿ ಸಿಸಿಬಿ‌ ಬಲೆಗೆ ಬಿದ್ದಿದ್ದಾನೆ.

ಇದನ್ನು ಓದಿ:ಪತ್ನಿ ಕೊಂದು, ಗೋಡೆ ಕುಸಿದಿರುವ ಕತೆ ಕಟ್ಟಿದ ಪತಿ ಬಂಧನ

ಈ ವಿಷಯವಾಗಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ನಗರದಲ್ಲಿ ಡ್ರಗ್ಸ್‌ ಜಾಲವನ್ನ ಸೃಷ್ಟಿಸಿದ್ದ ನೈಜೀರಿಯಾ ಪ್ರಜೆಯೋರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಹಿಂದೆ 12 ಜನರ ಬಂಧನ ಮಾಡಲಾಗಿತ್ತು. ಅವರ ಜೊತೆ ಸಂಪರ್ಕ ಹೊಂದಿದ ಲಿಂಕ್ ಮೊದಲು ಸಿಕ್ಕಿತ್ತು. ಈತ ತನ್ನದೇ ಜಾಲ ಸೃಷ್ಟಿ ಮಾಡಿಕೊಂಡು ಡ್ರಗ್ಸ್​​ ಮಾರಾಟ ಹಾಗೂ ಖರೀದಿ ಮಡುತ್ತಿದ್ದ ಎಂದಿದ್ದಾರೆ.

Last Updated : Dec 15, 2020, 12:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.