ಬೆಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಸುಂದರ ಯುವತಿಯರನ್ನು ಗುರಿಯಾಗಿಸಿಕೊಂಡು ಅವರಿಗೆ ಅಶ್ಲೀಲ ಚಿತ್ರಗಳು ಹಾಗೂ ವಿಡಿಯೋ ಕಳುಹಿಸುತ್ತಿದ್ದ ವಿಕೃತ ಕಾಮುಕನನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮಡಿವಾಳ ನಿವಾಸಿ ಪುರುಷೋತ್ತಮ್ ಬಂಧಿತ ಆರೋಪಿ. ಜೀವನಕ್ಕಾಗಿ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಈತ, ಫೇಸ್ಬುಕ್ ಮೂಲಕ ದೇಶದ ಹಾಗೂ ವಿದೇಶಿ ಸುಂದರ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ರಿಕ್ವೆಸ್ಟ್ ಆಕ್ಸೆಪ್ಟ್ ಮಾಡಿಕೊಂಡ ಬಳಿಕ ಫೇಸ್ಬುಕ್ ಮಸ್ಸೇಂಜರ್ ಮೂಲಕ ಚಾಟ್ ಮಾಡುತ್ತಿದ್ದ.
ಕಾಲಕ್ರಮೇಣ ತನ್ನ ಕಾಮತೃಷೆ ಈಡೇರಿಸಿಕೊಳ್ಳಲು ಯುವತಿ ಅಥವಾ ಮಹಿಳೆಯರಿಗೆ ಲೈಂಗಿಕ ಆಸಕ್ತಿಹೆಚ್ಚಿಸುವ ಚಿತ್ರಗಳನ್ನು ಕಳುಹಿಸುತ್ತಿದ್ದನಂತೆ. ಕಳೆದ ವರ್ಷ ನಗರ ಆಗ್ನೇಯ ವಿಭಾಗದಲ್ಲಿ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಇನ್ಸ್ಪೆಕ್ಟರ್ ಯೊಗೇಶ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
ಇದನ್ನೂ ಓದಿ: ನನ್ನ ವಿರುದ್ಧ ದೆಹಲಿಯಲ್ಲಿ ದೂರು ನೀಡಲಾಗಿದೆ ಅಷ್ಟೇ, ಎಫ್ಐಆರ್ ಆಗಿಲ್ಲ: ಕೆ.ಎಸ್. ಈಶ್ವರಪ್ಪ