ETV Bharat / state

ಜೈಲಲ್ಲಿದ್ದುಕೊಂಡೇ ಸಹ ಕೈದಿಯ ಪೋಷಕರ ಕೊಲೆಗೆ ಯತ್ನ... ರೌಡಿಶೀಟರ್​ ಸಹಚರರು ಅರೆಸ್ಟ್

author img

By

Published : Oct 6, 2019, 8:30 AM IST

ರೌಡಿಶೀಟರ್ ಪ್ರಮೋದ್ ರಿಯಾಬ್ ಕುಟುಂಬದವರ ಮೇಲೆ ಜೈಲಿನಲ್ಲಿರುವ ಇನ್ನೊಬ್ಬ ರೌಡಿಶೀಟರ್ ತನ್ನ ಸಹಚರರಿಂದ ಕೊಲೆ ಯತ್ನ ನಡೆಸಿದ್ದು, ಆರೋಪಿಗಳನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು

ಬೆಂಗಳೂರು: ರೌಡಿಶೀಟರ್​ ಜೈಲಲ್ಲಿದ್ದುಕೊಂಡೇ ತನ್ನ ಸಹ ಕೈದಿ ಇನ್ನೋರ್ವ ರೌಡಿಶೀಟರ್​ನ ಪೋಷಕರ ಕೊಲೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದೆ. ರೌಡಿಶೀಟರ್ ಪ್ರಮೋದ್ ರಿಯಾಬ್ ಕುಟುಂಬದವರ ಮೇಲೆ ಜೈಲಿನಲ್ಲಿರುವ ಇನ್ನೊಬ್ಬ ರೌಡಿಶೀಟರ್ ತನ್ನ ಸಹಚರರಿಂದ ಕೊಲೆ ಯತ್ನಕ್ಕೆ ಯತ್ನಿಸಿದ್ದು, ಆರೋಪಿಗಳನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

ಲಗ್ಗೆರೆಯ ಅಭಿಷೇಕ್ ಅಮೂಲ್, ಕುರುಬರಹಳ್ಳಿಯ ಸುನೀಲ್ ದೇಸಾಯಿ ವಿಜಯನಗರದ ಪ್ರವೀಣ್ ಕುಮಾರ್, ರಾಜಾಜಿನಗರದ ನವೀನ್ ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಲಾಂಗ್, ಮೂರು ದ್ವಿಚಕ್ರ ವಾಹನ, ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ:
ಆರೋಪಿ ಪ್ರಮೋದ್ ರಿಯಾಬ್ ಸುಬ್ರಮಣ್ಯ ನಗರ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದು, ಇತ್ತೀಚೆಗೆ ರಾಬರಿ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಈತ ಜೈಲಿನಲ್ಲಿರುವಾಗ ಮೊಬೈಲ್ ಪೋನ್ ವಿಚಾರಕ್ಕೆ ಮತ್ತೊಬ್ಬ ರೌಡಿ ಜೊತೆಯಲ್ಲಿ ಜಗಳ ಮಾಡಿಕೊಂಡು ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಇದೇ ದ್ವೇಷವಾಗಿ ಗಲಾಟೆ ಮಾಡಿಕೊಂಡಿದ್ದ ರೌಡಿಶೀಟರ್ ಕೂಡ ಪ್ರಮೋದ್ ರಿಯಾಬ್‌ ಮೇಲೆ ಹಲ್ಲೆ ಮಾಡಿದ್ದಾನೆ. ಪ್ರಮೋದ್ ರಿಯಾಬ್‌ನನ್ನು ಇಷ್ಟಕ್ಕೆ ಬಿಟ್ಟರೆ ಸರಿ ಹೋಗುವುದಿಲ್ಲವೆಂದು ಆ ರೌಡಿಶೀಟರ್ ಜೈಲಿನಲ್ಲಿದ್ದುಕೊಂಡೆ ಪ್ರಮೋದ್ ರಿಯಾಬ್ ಕುಟುಂಬದವರ ಮನೆ ತಿಳಿದುಕೊಂಡು ಜೈಲಿನಿಂದಲೇ ಹೊರಗೆ ಇರುವ ತನ್ನ ಸಹಚರರನ್ನು ಸಂಪರ್ಕಿಸಿ, ಪ್ರಮೋದ್ ರಿಯಾಬ್ ತಂದೆ-ತಾಯಿ ಮೇಲೆ ಗಲಾಟೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದ.

ಅಂತೆಯೇ ಆರೋಪಿ ಅಭಿಷೇಕ್ ಅಮೂಲ್ ತನ್ನ 7 ಜನ ಹುಡುಗರನ್ನು ಕರೆದುಕೊಂಡು ಹೋಗಿ ಕೊಲೆ ಯತ್ನ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಚರಣ್ ಕ್ಯಾಟಿ, ಮಂಜುನಾಥ ಮುಳಬಾಗಿಲು ತಲೆಮೆರೆಸಿಕೊಂಡಿದ್ದಾರೆ. ಇನ್ನು ಓರ್ವ ಬಾಲಕ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.

Intro:Body:ರೌಡಿಶೀಟರ್ ವರ್ಸಸ್ ರೌಡಿಶೀಟರ್:
ಜೈಲಿನಲ್ಲೇ ರೌಡಿ‌ ಕುಟುಂಬ ಸದಸ್ಯರ ಹತ್ಯೆಗೆ ಸಹಚರರ ಮೂಲಕ ಸ್ಕೆಚ್ ಹಾಕಿದ್ದ ಆರೋಪಿಗಳ ಬಂಧನ

ಬೆಂಗಳೂರು: ರೌಡಿಶೀಟರ್ ಪ್ರಮೋದ್ ರಿಯಾಬ್ ಕುಟುಂಬದವರ ಮೇಲೆ ಜೈಲಿನಲ್ಲಿರುವ ರೌಡಿಶೀಟರ್ ಸಹಚರರಿಂದ ಕೊಲೆ ಯತ್ನಕ್ಕೆ ಪ್ರಯತ್ನಿಸಿದ ಆರೋಪಿಗಳನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆಯ ಅಭಿಷೇಕ್ ಅಮೂಲ್, ಕುರುಬರಹಳ್ಳಿಯ ಸುನೀಲ್ ದೇಸಾಯಿ ವಿಜಯನಗರದ ಪ್ರವೀಣ್ ಕುಮಾರ್, ರಾಜಾಜಿನಗರದ ನವೀನ್ ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಲಾಂಗ್, ಮೂರು ದ್ವಿಚಕ್ರ ವಾಹನ, ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಸೆ.24ರಂದು ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಾಜಿನಗರದಲ್ಲಿ ವಾಸಿಸುತ್ತಿರುವ ಕೇಶವ ತಮ್ಮ ಮನೆಯಲ್ಲಿ ಸಂಬಂಧಿಕರೊಂದಿಗೆ ಊಟ ಮಾಡುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಯ ಹತ್ತಿರ ಬಂದು ನಿಮ್ಮ ಮಗ ರಿಯಾಬ್ ಇದ್ದಾನಾ ಅವನು ನಮ್ಮ ಬಾಸ್‌ಗೆ ಜೈಲಿನಲ್ಲಿ ಅವಾಜ್ ಹಾಕುತ್ತಾನಂತೆ. ಅವರ ತಂಟೆಗೆ ಹೋದರೆ ನಿಮ್ಮ ಕುಟುಂಬ ನಾಶ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿ, ಲಾಂಗ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಆ ಕುರಿತು ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ವಿವರ:
ಆರೋಪಿ ಪ್ರಮೋದ್ ರಿಯಾಬ್ ಸುಬ್ರಮಣ್ಯ ನಗರ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದು, ಇತ್ತೀಚೆಗೆ ರಾಬರಿ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಈತನು ಜೈಲಿನಲ್ಲಿರುವಾಗ ಮೊಬೈಲ್ ಪೋನ್ ವಿಚಾರಕ್ಕೆ ಮತ್ತೊಬ್ಬ ರೌಡಿ ಜೊತೆಯಲ್ಲಿ ಜಗಳ ಮಾಡಿಕೊಂಡು ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಇದೇ ದ್ವೇಷವಾಗಿ ಗಲಾಟೆ ಮಾಡಿಕೊಂಡಿದ್ದ ರೌಡಿಶೀಟರ್ ಕೂಡ ಪ್ರಮೋದ್ ರಿಯಾಬ್‌ಗೆ ಹಲ್ಲೆ ಮಾಡಿದ್ದಾನೆ.
ಪ್ರಮೋದ್ ರಿಯಾಬ್‌ನನ್ನು ಇಷ್ಟಕ್ಕೆ ಬಿಟ್ಟರೆ ಸರಿ ಹೋಗುವುದಿಲ್ಲವೆಂದು ಆ ರೌಡಿಶೀಟರ್ ಜೈಲಿನಲ್ಲಿದ್ದುಕೊಂಡೆ ಪ್ರಮೋದ್ ರಿಯಾಬ್ ಕುಟುಂಬದವರ ಮನೆ ತಿಳಿದುಕೊಂಡು ಜೈಲಿನಿಂದಲೇ ಹೊರಗೆ ಇರುವ ತನ್ನ ಸಹಚರರನ್ನು ಸಂಪರ್ಕಿಸಿ, ಪ್ರಮೋದ್ ರಿಯಾಬ್ ತಂದೆ-ತಾಯಿ ಮೇಲೆ ಗಲಾಟೆ ಮಾಡಿ ಕೊಲೆ ಮಾಡಲು ಸೂಚಿಸಿದ್ದಾನೆ. ಆತನ ಸೂಚನೆಯಂತೆ ಆರೋಪಿ ಅಭಿಷೇಕ್ ಅಮೂಲ್ ತನ್ನ 7 ಜನ ಹುಡುಗರನ್ನು ಕರೆದುಕೊಂಡು ಹೋಗಿ ಕೊಲೆ ಯತ್ನ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಚರಣ್ ಕ್ಯಾಟಿ, ಮಂಜುನಾಥ  ಮುಳಬಾಗಿಲು ತಲೆಮೆರೆಸಿಕೊಂಡಿದ್ದಾರೆ. ಮತ್ತೊಬ್ಬ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕ ಭಾಗಿಯಾಗಿರುವುದು ಕಂಡು ಬಂದಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.