ETV Bharat / state

ವಿದೇಶಿ ವಕೀಲರು, ಕಾನೂನು ಸಂಸ್ಥೆಗಳ ನೋಂದಣಿಗೆ ಅವಕಾಶ: ವಕೀಲರ ಸಂಘ ಆಕ್ಷೇಪ - ಬೆಂಗಳೂರು ಲೇಟೆಸ್ಟ್​​ ನ್ಯೂಸ್​​

ವಿದೇಶಿ ವಕೀಲರು ಮತ್ತು ವಿದೇಶಿ ಕಾನೂನು ಸಂಸ್ಥೆಗಳ ನೋಂದಣಿ ಮತ್ತು ನಿಯಂತ್ರಣ-2022 ಅಧಿಸೂಚನೆಯನ್ನು ಹಿಂಪಡೆಯುವಂತೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಬಿಸಿಐಗೆ ಪತ್ರ ಬರೆದಿದ್ದಾರೆ.

BCI
ಭಾರತೀಯ ವಕೀಲರ ಪರಿಷತ್
author img

By

Published : Mar 19, 2023, 6:45 AM IST

ಬೆಂಗಳೂರು: ಭಾರತದಲ್ಲಿ ವಕೀಲಿಕೆ ವೃತ್ತಿಯನ್ನು ಕಾರ್ಪೊರೇಟೀಕರಣಗೊಳಿಸಿ ನ್ಯಾಯದಾನಕ್ಕೂ ಶ್ರೀಮಂತ ಮತ್ತು ಬಡವರೆಂಬ ವಿಂಗಡಣೆ ಮಾಡಬಹುದಾದ ವಿದೇಶಿ ವಕೀಲರು ಮತ್ತು ವಿದೇಶಿ ಕಾನೂನು ಸಂಸ್ಥೆಗಳ ನೋಂದಣಿ ಮತ್ತು ನಿಯಂತ್ರಣ-2022 ಅಧಿಸೂಚನೆಯನ್ನು ಹಿಂಪಡೆಯುವಂತೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಭಾರತೀಯ ವಕೀಲರ ಪರಿಷತ್(ಬಿಸಿಐ)ಗೆ ಪತ್ರ ಬರೆದಿದ್ದಾರೆ.

ಬಿಸಿಐನ ಅಧ್ಯಕ್ಷ ಮನು ಕುಮಾರ್ ಮುಶ್ರಾ ಅವರಿಗೆ ಪತ್ರ ಬರೆದಿರುವ ಅವರು,"2023ರ ಮಾ. 10ರಂದು ಹೊರಡಿಸಿರುವ ಅಧಿಸೂಚನೆ ಭಾರತದಲ್ಲಿ ವಕೀಲ ಸಮುದಾಯಕ್ಕೆ ಮಾರಕವಾಗಲಿದೆ. ಯಾವುದೇ ರೀತಿಯ ಸಮಾಲೋಚನೆ ನಡೆಸದೆ ವಕೀಲರು ಅಥವಾ ವಕೀಲರ ಸಂಸ್ಥೆಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದಿರುವುದಕ್ಕೆ ತೀವ್ರ ಆಕ್ಷೇಪವಿದೆ. ದೇಶಾದ್ಯಂತ ವಕೀಲರ ಧ್ವನಿ ಅಡಗಿಸುವ ಈ ಕ್ರಮ ಖಂಡನೀಯ".

"ಬಿಸಿಐ ರೂಪಿಸಿರುವ ನಿಯಮಗಳು ಮೇಲ್ನೋಟಕ್ಕೆ ವಕೀಲರ ಸಂಘದ ನಿಬಂಧನೆಗಳನ್ನು ಉಲ್ಲಂಘಿಸುತ್ತವೆ. ವಿದೇಶಿ ವಕೀಲರು/ವಿದೇಶಿ ಕಾನೂನು ಸಂಸ್ಥೆಗಳು ಭಾರತದಲ್ಲಿ ಅವಕಾಶ ನೀಡುವುದಕ್ಕೆ ನಮ್ಮ ಗಂಭೀರ ಆಕ್ಷೇಪವಿದೆ. ವಿದೇಶಿ ಕಾನೂನು ಸಂಸ್ಥೆಗಳು ಭಾರತದಲ್ಲಿನ ಕಾನೂನು ವೃತ್ತಿಯನ್ನು ನಿಯಂತ್ರಿಸಬಹುದು. ಇದು ಭಾರತದಲ್ಲಿ ಕಾನೂನು ವೃತ್ತಿಯನ್ನು ಮತ್ತಷ್ಟು ಕಾರ್ಪೊರೇಟೀಕರಣಗೊಳಿಸಲಿದೆ. ಇದು ಶ್ರೀಮಂತ ಮತ್ತು ಸಮರ್ಥರಾದರೂ ಅಷ್ಟೇನು ಸುಧಾರಿತವಲ್ಲದ ವಕೀಲರು ಎಂಬ ಎರಡು ವರ್ಗಗಳನ್ನು ಸೃಷ್ಟಿಸಲಿದೆ".

"ಭಾರತದ ಕಾನೂನು ಪದವೀಧರರು ವಿದೇಶದಲ್ಲಿ ಹಲವು ಅಡ್ಡಿ, ಆತಂಕಗಳನ್ನು ಎದುರಿಸುತ್ತಾರೆ. ಈ ನಡುವೆ ಬಿಸಿಐಯು ವಿದೇಶಿ ಕಾನೂನು ಸಂಸ್ಥೆಳಿಗೆ ಕೆಂಪು ಹಾಸು ಹಾಕುತ್ತಿದೆ. ಇದು ನಮ್ಮ ಕಾನೂನು ಸಮುದಾಯಕ್ಕೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಹೀಗಾಗಿ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ, ವಿದೇಶಿ ವಕೀಲರ ಪ್ರಾಕ್ಟೀಸ್ ಮತ್ತು ಭಾರತದಲ್ಲಿ ಕಾನೂನು ಸಂಸ್ಥೆ ಹೊಂದುವುದಕ್ಕೆ ನಿರ್ಬಂಧಿತ ಪ್ರವೇಶ ನೀಡಬೇಕು" ಎಂದು ರಂಗನಾಥ್ ಪತ್ರದಲ್ಲಿ ಕೋರಿದ್ದಾರೆ.

ಇದನ್ನೂ ಓದಿ: ಕಕ್ಷಿದಾರನಿಗೆ ವಂಚನೆ ಆರೋಪ: ರಾಜ್ಯ ವಕೀಲರ ಪರಿಷತ್​ನ ಸದಸ್ಯ ಕೆ ಬಿ ನಾಯಕ್​ ವಕೀಲಿಕೆಯಿಂದ ಅಮಾನತು

ಸ್ಮಶಾನ ಭೂಮಿ ಇಲ್ಲದ ಗ್ರಾಮಗಳು: ರಾಜ್ಯದಲ್ಲಿ ಸ್ಮಶಾನ ಭೂಮಿ ಇಲ್ಲದ ಗ್ರಾಮಗಳ ಬಗ್ಗೆ ಜನರಿಗೆ ತಿಳಿಸುವುದಕ್ಕೆ ಪತ್ರಿಕಾ ಪ್ರಕಟಣೆ ಹೊರಡಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಸ್ಮಶಾನ ಭೂಮಿ ಒದಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಮೊಹಮ್ಮದ್ ಇಕ್ಬಾಲ್ ಎಂಬುವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಮಾ.16ರಂದು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾ.ವೆಂಕಟೇಶ್ ನಾಯಕ್ ಟಿ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿತು. ವಿಚಾರಣೆ ವೇಳೆ ಸ್ಮಶಾನ ಭೂಮಿ ಲಭ್ಯವಿಲ್ಲದ ಗ್ರಾಮಗಳ ಕುರಿತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆ ಹೊರಡಿಸಿ, ಯಾವ ಗ್ರಾಮದಲ್ಲಿ ಸ್ಮಸಾನ ಭೂಮಿ ಇಲ್ಲ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಪೀಠ ಹೇಳಿತ್ತು.

ಇದನ್ನೂ ಓದಿ: ಸ್ಮಶಾನ ಭೂಮಿ ಇಲ್ಲದ ಗ್ರಾಮಗಳ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದು : ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.