ETV Bharat / state

ಬಿಜೆಪಿ ಮುಖಂಡನ ಆತ್ಮಹತ್ಯೆ ಕೇಸ್​​​ಗೆ ಮತ್ತೊಂದು ಟ್ವಿಸ್ಟ್: ವಾಟ್ಸ್​ಆ್ಯಪ್​​​ ಸಂದೇಶದಲ್ಲಿ ಏನಿದೆ? - ಹೆರೋಹಳ್ಳಿ ವಾರ್ಡ್​​ನ ಬಿಜೆಪಿ‌ ಮುಖಂಡ ಅನಂತರಾಜು ಸಾವು ಪ್ರಕರಣ

ಆರೋಪಿತೆ ರೇಖಾ ಜೈಲಿನಿಂದ ಜಾಮೀನು ಮೇರೆಗೆ ಹೊರಬರುವ ಹೊತ್ತಿನಲ್ಲಿ ಮತ್ತೊಂದು ವಾಟ್ಸ್​ಆ್ಯಪ್​ ಚಾಟ್ ರಿವೀಲ್ ಆಗಿದೆ. ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿ ಜೊತೆಗೆ ನಡೆಸಿದ್ದಾರೆನ್ನಲಾದ ವಾಟ್ಸ್​ಆ್ಯಪ್​ ಚಾಟಿಂಗ್ ರಿವೀಲ್ ಆಗಿದೆ.

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್​​​ಗೆ ಮತ್ತೊಂದು ಟ್ವಿಸ್ಟ್
ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್​​​ಗೆ ಮತ್ತೊಂ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್​​​ಗೆ ಮತ್ತೊಂದು ಟ್ವಿಸ್ಟ್ ದು ಟ್ವಿಸ್ಟ್
author img

By

Published : May 26, 2022, 4:09 PM IST

ಬೆಂಗಳೂರು. ಹೆರೋಹಳ್ಳಿ ವಾರ್ಡ್​​ನ ಬಿಜೆಪಿ‌ ಮುಖಂಡ ಅನಂತರಾಜು ಸಾವು ಪ್ರಕರಣ ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಮೃತನ ಪತ್ನಿ ಸುಮಾ ಮತ್ತು ಗೆಳತಿ ರೇಖಾ ಪರ -ವಿರೋಧದ ಸಾಕ್ಷ್ಯಾಧಾರಗಳು ದಿನಕ್ಕೊಂದರಂತೆ ಹೊರಬೀಳುತ್ತಿವೆ‌. ಮೇಲ್ನೋಟಕ್ಕೆ ಎಲ್ಲವೂ ಸತ್ಯದಂತೆ ಕಂಡರೂ ಹೊರ ಬರುತ್ತಿರುವ ಮಾಹಿತಿಯ ಅಸಲಿಯತ್ತು ಏನೂ ಅನ್ನೋದನ್ನ ಬ್ಯಾಡರಹಳ್ಳಿ ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ.

ಆರೋಪಿತೆ ರೇಖಾ ಜೈಲಿನಿಂದ ಜಾಮೀನು ಮೇರೆಗೆ ಹೊರಬರುವ ಹೊತ್ತಿನಲ್ಲಿ ಮತ್ತೊಂದು ವಾಟ್ಸ್​ಆ್ಯಪ್ ಚಾಟ್ ರಿವೀಲ್ ಆಗಿದೆ. ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿ ಜೊತೆಗೆ ನಡೆಸಿದ್ದಾರೆ ಎನ್ನಲಾದ ವಾಟ್ಸ್​ಆ್ಯಪ್ ಚಾಟಿಂಗ್ ರಿವೀಲ್ ಆಗಿದೆ. ಈ ವಾಟ್ಸ್​ಆ್ಯಪ್ ಚಾಟಿಂಗ್ ನಲ್ಲಿ ಸೆಟಲ್ಮೆಂಟ್ ಬಗ್ಗೆ ಪ್ರಸ್ತಾಪ ಆಗಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.

ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ಯಾರ ಮಾರ್ಯಾದೆ ಕಳೆಯುವುದಕ್ಕೂ ನಾನು ಸಿದ್ಧ ಅನ್ನೋ ರೀತಿ ರೇಖಾ ಮಾಡಲಾದ ಸಂದೇಶ ಎನ್ನುವ ಸ್ಕ್ರೀನ್ ಶಾಟ್ ಓಡಾಡ್ತಿವೆ.

ಈ ಚಾಟ್​​ನಲ್ಲಿ ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇದೆ. ಅದನ್ನ ಅವನ ಹೆಂಡ್ತಿಗೆ ಕಳಿಸಿದರೆ ಅವಳೇ ಅನಂತರಾಜುನ ಸಾಯಿಸ್ತಾಳೆ,‌ ಅಷ್ಟೊಂದು ಆಶ್ಲೀಲವಾಗಿದೆ ಆ ವಿಡಿಯೋಗಳಿವೆ. ಆ ರೀತಿ ಆಗಬಾರದು ಎಂದಾದರೆ ಅನಂತರಾಜು ಮೇ 15 ರ ಒಳಗೆ ನನ್ನ ಭೇಟಿ ಮಾಡಬೇಕು. ಸೆಟ್ಲಮೆಂಟ್ ಮಾಡಿಕೊಂಡು ನೆಮ್ಮದಿಯಾಗಿರಲಿ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಇನ್ನೊಂದು ಮೂಲಗಳ ಪ್ರಕಾರ ಅನಂತರಾಜುನನ್ನು ಬಚಾವ್ ಮಾಡುವುದಕ್ಕೆ ರೇಖಾ ಹಾಗೂ ಅನಂತರಾಜು ಸೇರಿ ಈ ರೀತಿ ಮಾತನಾಡಿ ಸುಮಾಳನ್ನ ನಂಬಿಸುವ ಕೆಲಸ ಮಾಡಿದ್ದರು ಎಂದು ಹೇಳಲಾಗ್ತಿದೆ. ಆದರೆ, ಆದೇ ಇಂದು ರೇಖಾಳಿಗೆ ಮುಳುವಾಗಿದ್ಯಾ ಅನ್ನೋ ಪ್ರಶ್ನೆ ಸಹ ಮೂಡಿದೆ‌.

ಇದನ್ನೂ ಓದಿ: ಆ ಒಂದೇ ಒಂದು ಸೆಲ್ಫಿ... ಐದು ವರ್ಷದಿಂದ ತಲೆ ಮರೆಸಿಕೊಂಡಿದ್ದವ ಸಿಕ್ಕಿ ಬೀಳುವಂತೆ ಮಾಡ್ತು!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.