ETV Bharat / state

'ಕಾಶ್ಮೀರ, ಮುಸ್ಲಿಂ, ದಲಿತ ಮುಕ್ತಿ'  ಪ್ಲೇಕಾರ್ಡ್ ಹಿಡಿದು ಕುಳಿತಿದ್ದ ಯುವತಿ: ಪಾಕ್‌ ಪರ ಘೋಷಣೆ ಬಗ್ಗೆ ಪೊಲೀಸ್ ತನಿಖೆ - ಪಾಕಿಸ್ತಾನ್ ಜಿಂದಾಬಾದ್​ ಎಂದ ಯುವತಿ

ಟೌನ್​ ಹಾಲ್​ ಬಳಿ ಯುವತಿಯೊಬ್ಬಳು ಪಾಕ್​ ಪರ ಘೋಷಣೆ ಕೂಗಿದ್ದಾಳೆ ಎನ್ನಲಾಗಿದ್ದು, ಅಲ್ಲೇ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರು ಯುವತಿಯ ಹಲ್ಲೆಗೆ ಮುಂದಾದ ಪ್ರಸಂಗ ನಡೆಯಿತು. ತಕ್ಷಣ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

another-girl-shouted-pro-pakistan-slogans-in-bangalore
ಪಾಕ್​ ಪರ ಘೋಷಣೆ ಕೂಗಿದ ಯುವತಿ
author img

By

Published : Feb 21, 2020, 1:42 PM IST

Updated : Feb 21, 2020, 3:42 PM IST

ಬೆಂಗಳೂರು: ನಿನ್ನೆ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಘೋಷಣೆಯ ಕಾವು ಜನರ ಮನಸ್ಸಿನಲ್ಲಿ ತಣ್ಣಗಾಗುವ ಮುನ್ನವೇ ಉರಿವ ಬೆಂಕಿಗೆ ತುಪ್ಪ ಸುರಿದಂತೆ ಇಂದು ಪ್ರತಿಭಟನೆಯ ಮಧ್ಯೆಯೇ ಆರುದ್ರ ಎಂಬ ಹೆಸರಿನ ಯುವತಿ ಪಾಕ್​ ಪರ ಘೋಷಣೆ ಕೂಗಿದ್ದಾಳೆ ಎನ್ನಲಾಗಿದೆ.

ಟೌನ್​ ಹಾಲ್​ ಬಳಿ ಈ ಘಟನೆ ಜರುಗಿದ್ದು, ಅಲ್ಲೇ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರು ಯುವತಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.

ಪಾಕಿಸ್ತಾನ್ ಜಿಂದಾಬಾದ್​ ಎಂದ ಯುವತಿ

ನಿನ್ನೆ ಫ್ರೀಡಂ ಪಾರ್ಕ್‌ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ವೇದಿಕೆಯಲ್ಲಿ ಅಮೂಲ್ಯ ಎಂಬ ಯುವತಿ ಪಾಕ್‌ ಪ್ರೇಮ ತೋರಿಸಿದ್ದಳು. ಹಾಗಾಗಿ ಆಕೆಯನ್ನು ಗಡಿಪಾರು ಮಾಡಬೇಕು, ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹ ಹೆಚ್ಚುತ್ತಿದೆ. ಈ ಹಿನ್ನೆಲೆ ಪ್ರಮುಖ ಸ್ಥಳಗಳಲ್ಲಿ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ. ಆದರೂ ಕೂಡ ಇಂಥ ಘಟನೆ ಮತ್ತೆ ಮರುಕಳಿಸಿದೆ.

ಡಿಸಿಪಿ ಸ್ಪಷ್ಟನೆ ಏನು?

ಟೌನ್ ಹಾಲ್ ಬಳಿ ಫ್ರೀ ಕಾಶ್ಮೀರ, ಫ್ರೀ ದಲಿತ್, ಹಾಗೂ ಪಾಕಿಸ್ತಾನ ಪರ ಯುವತಿ ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪ್ರತಿಕ್ರಿಯೆ ನೀಡಿದ್ದಾರೆ.

ಆಕೆ ಯಾರು ? ಸ್ಥಳಕ್ಕೆ ಆಕೆ ಯಾಕೆ ಬಂದಳು ಅನ್ನೋದರ ಬಗ್ಗೆ ಪರಿಶೀಲನೆ ಮಾಡ್ತಾ ಇದ್ದೇವೆ. ನಮ್ಮ ಪೊಲೀಸರು ಹೇಳುವ ಪ್ರಕಾರ ಆಕೆ ಘೊಷಣೆ ಕೂಗಿಲ್ಲ. ಆದರೆ, ಆಯೋಜಕರು ಹಾಗೂ ಪ್ರತಿಭಟನಾಕಾರರು ಕೂಗಿದ್ದಾಳೆ ಎಂದು ಹೇಳುತ್ತಿದ್ದಾರೆ. ಸದ್ಯ ಟೌನ್ ಹಾಲ್ ಬಳಿ ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಅದನ್ನ ಪರಿಶೀಲನೆ ಮಾಡುತ್ತಿದ್ದೇವೆ ಎಂದರು.

ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪ್ರತಿಕ್ರಿಯೆ

ನಮ್ಮ ಪ್ರಕಾರ ಯುವತಿ ಪ್ಲೇಕಾರ್ಡ್ ಹಿಡಿದುಕೊಂಡು ಕುಳಿತಿದ್ದಳು. ಅದರಲ್ಲಿ ಮುಕ್ತಿ ಕಾಶ್ಮೀರ್, ಮುಕ್ತಿ ಮುಸ್ಲಿಂ,ಮುಸ್ಲಿಂ ದಲಿತ್ ಅಂತ ಬರೆಯಲಾಗಿತ್ತು. ಘೋಷಣೆ ಬಗ್ಗೆ ಮಾಹಿತಿ ಇಲ್ಲ. ಆಯೋಜಕರು ದೂರು ಕೊಟ್ರೆ ಅದನ್ನ ತೆಗೆದುಕೊಳ್ತೀವಿ. ಆಕೆ ಮೇಲೆ ಯಾವುದೇ ಹಲ್ಲೆಯಾಗಿಲ್ಲ. ಯುವತಿ ಉದ್ದೇಶಪೂರ್ವಕವಾಗಿ ಬಂದಿದ್ಲಾ..? ಆಕೆ ಯಾರು ಹಾಗೂ ಆಕೆಯ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕುತ್ತೇವೆ. ಆಯೋಜಕರು ದೂರು ಕೊಡಲಿಲ್ಲ ಅಂದ್ರೆ ಸುಮೊಟೋ ಕೇಸ್ ದಾಖಲಿಸಿ ತನಿಖೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

Last Updated : Feb 21, 2020, 3:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.