ETV Bharat / state

ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ: ಸಾವಿನ ಸಂಖ್ಯೆ 19ಕ್ಕೆ ಏರಿಕೆ

ಬೆಂಗಳೂರು ನಗರದಲ್ಲಿ ಕೊರೊನಾಗೆ ಮತ್ತೊಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇನ್ನು ಇಂದು ರಾಜ್ಯದಲ್ಲಿ ಹೊಸ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 503ಕ್ಕೆ ಏರಿಕೆ ಆಗಿದೆ.

Another death for Corona in Bangalore
ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ
author img

By

Published : Apr 26, 2020, 5:50 PM IST

ಬೆಂಗಳೂರು: ನಗರದಲ್ಲಿ ಕೊರೊನಾಗೆ ಮತ್ತೊಬ್ಬರು ಬಲಿಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 45 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದ್ದು, ರೋಗಿ-465 ಕೊರೊನಾದಿಂದ ಮೃತಪಟ್ಟಿದ್ದಾರೆ.‌ ಮೃತ ಮಹಿಳೆಯು ನ್ಯೂಮೋನಿಯಾಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಅಲ್ಲದೇ ಡಯಾಬಿಟಿಸ್ ಸಮಸ್ಯೆ ಜೊತೆಗೆ ಹಳೆಯ ಕ್ಷಯ ರೋಗದ ಹಿನ್ನೆಲೆ ಕೂಡ ಇತ್ತು ಎನ್ನಲಾಗಿದೆ.

ಏಪ್ರಿಲ್ 24ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೂ ಮುನ್ನ ಮೂಡಲಪಾಳ್ಯದ ಹೆರಿಗೆ ಆಸ್ಪತ್ರೆಗೆ ಎರಡು ದಿನ ಹೋಗಿ ಬಂದಿದ್ರು. ಮಹಿಳೆಯ ಸಾವಿನಿಂದ ಹಂಪಿನಗರದಲ್ಲಿ ಆತಂಕ ಹೆಚ್ಚಾಗಿದ್ದು, ‌ಈಗಾಗಲೇ ಹೆರಿಗೆ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದೆ. ಇನ್ನು ಇಂದು ರಾಜ್ಯದಲ್ಲಿ ಹೊಸ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 503ಕ್ಕೆ ಏರಿಕೆ ಆಗಿದೆ. ಈ‌ ಪೈಕಿ 182 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಟ್ರಾವೆಲ್ ಹಿಸ್ಟರಿ‌ ಹೀಗಿದೆ

: ರೋಗಿ - 501- ಮಂಗಳೂರಿನ 47 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, 432 ರ ಸಂಪರ್ಕ ಹೊಂದಿದ್ದಾರೆ. ಚಿಕಿತ್ಸೆ ಮುಂದುವರಿದೆ.

ರೋಗಿ - 502 - ಕಲಬುರಗಿಯ 65 ವರ್ಷದ ಮಹಿಳೆಗೆ ಸೋಂಕು. ಪಿ - 422 ರ ಸಂಪರ್ಕ ಹೊಂದಿದ್ದು, ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ.

ರೋಗಿ - 503 - ಕಲಬುರಗಿಯ 7 ವರ್ಷದ ಬಾಲಕನಿಗೆ ಸೋಂಕು, ಪಿ - 425ರ ದ್ವಿತೀಯ ಸಂಪರ್ಕ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.