ETV Bharat / state

ಅನ್ನಭಾಗ್ಯ ಯೋಜನೆ ವಿಚಾರ.. ಸದನದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಜಟಾಪಟಿ - ಬೆಲ್ಲದ್​ಗೆ ತಿರುಗೇಟು ನೀಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಯೋಜನೆಯನ್ನು ಸಿದ್ದರಾಮಯ್ಯ ನಮ್ಮ ಅಕ್ಕಿಭಾಗ್ಯ ಯೋಜನೆ ಅಂದ್ರು ಎಂದು ಬೆಲ್ಲದ್ ಟೀಕಿಸಿದರು. ಈ ವೇಳೆ ಮಧ್ಯಪ್ರವೇಶಿದ ಕಾಂಗ್ರೆಸ್ ಸದಸ್ಯ ಖಾದರ್ ಯೋಜನೆ ಪರಿಚಯ ಮಾಡಿದವರೇ ಸಿದ್ದರಾಮಯ್ಯನವರು ಎಂದರು. ಈ ವೇಳೆ ಯೋಜನೆ ಕುರಿತು ಕಾಂಗ್ರೆಸ್​ನ ಪ್ರಿಯಾಂಕ್​ ಖರ್ಗೆ, ಖಾದರ್ ಹಾಗೂ ಬಿಜೆಪಿಯ ನಡಹಳ್ಳಿ, ಅರವಿಂದ ಬೆಲ್ಲದ್, ನಾಗೇಂದ್ರ ನಡುವೆ ಮಾತಿನ ಚಕಮಕಿ ನಡೆಯಿತು.

ಸದನದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಜಟಾಪಟಿ
ಸದನದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಜಟಾಪಟಿ
author img

By

Published : Mar 21, 2022, 8:07 PM IST

ಬೆಂಗಳೂರು: ಅನ್ನಭಾಗ್ಯ ಯೋಜನೆ ವಿಚಾರವಾಗಿ ಆಡಳಿತ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ನಡುವೆ ಸದನದಲ್ಲಿ ಜಟಾಪಟಿಯೇ ನಡೆಯಿತು.

ವಿಧಾನಸಭೆಯಲ್ಲಿ ಬೇಡಿಕೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ಕೇಂದ್ರ ಸರ್ಕಾರದ ಯೋಜನೆಯನ್ನು ಸಿದ್ದರಾಮಯ್ಯ ನಮ್ಮ ಅಕ್ಕಿಭಾಗ್ಯ ಯೋಜನೆ ಅಂದ್ರು ಎಂದು ಟೀಕಿಸಿದರು. ಈ ವೇಳೆ ಮಧ್ಯಪ್ರವೇಶಿದ ಪ್ರತಿಪಕ್ಷದ ಉಪ ನಾಯಕ ಯು ಟಿ ಖಾದರ್ ಯೋಜನೆ ಪರಿಚಯ ಮಾಡಿದವರೇ ಸಿದ್ದರಾಮಯ್ಯನವರು ಎಂದರು. ಆಗ ಬೆಲ್ಲದ್, ಹೌದು ಸಿದ್ದರಾಮಯ್ಯ ಸಿಎಂ ಆದ ಕೂಡಲೇ, ಸಂಪುಟದಲ್ಲಿ ಒಪ್ಪಿಗೆ ಪಡೆಯದೇ ಒಬ್ರೇ ಯೋಜನೆ ಘೋಷಣೆ ಮಾಡಿದ್ರು. ಯಾರಿಗೂ ಕ್ರೆಡಿಟ್ ಸಿಗಬಾರದು ಎಂದು ತಾವೇ ಯೋಜನೆ ಏಕಾಏಕಿ ಮಾಡಿದ್ರು ಎಂದು ಟೀಕಿಸಿದರು.

ಸದನದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಜಟಾಪಟಿ

ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಕೃಷ್ಣ ಭೈರೇಗೌಡ: ಈ ವೇಳೆ ಯೋಜನೆ ಕುರಿತು ಕಾಂಗ್ರೆಸ್​ನ ಪ್ರಿಯಾಂಕ್​ ಖರ್ಗೆ, ಖಾದರ್ ಹಾಗೂ ಬಿಜೆಪಿಯ ನಡಹಳ್ಳಿ, ಅರವಿಂದ ಬೆಲ್ಲದ್, ನಾಗೇಂದ್ರ ನಡುವೆ ಮಾತಿನ ಚಕಮಕಿ ನಡೆಯಿತು. ಆಹಾರ ಭದ್ರತೆ ಕಾಯ್ದೆಯನ್ನು ಮಾಡಿದ್ದು ಯುಪಿಎ ಸರ್ಕಾರ. ಅಕ್ಕಿಗೆ ಶೇ.80 ರಷ್ಟು ಹಣ ಕೊಡ್ತಿರೋದು ಕೇಂದ್ರ ಸರ್ಕಾರ. ಉಳಿದ ಹಣವನ್ನು ನಮ್ಮ ಸರ್ಕಾರ ಭರಿಸಿದ್ದು, ಸುಮ್ಮನೆ ಏನೇನೋ ಮಾತಾಡೋದು ಸರಿಯಲ್ಲ ಎಂದು ಬಿಜೆಪಿಗೆ ಶಾಸಕ ಕೃಷ್ಣ ಭೈರೇಗೌಡ ‌ತಿರುಗೇಟು ನೀಡಿದರು.

ಅನ್ನಭಾಗ್ಯ ಯೋಜನೆ ಬಗ್ಗೆ ಬೆಲ್ಲದ್ ಮಾತಿನ ವೇಳೆ ಮಧ್ಯೆಪ್ರವೇಶಿದ ಸಿದ್ದರಾಮಯ್ಯ, ಹಳ್ಳಿಗಳಲ್ಲಿ ಬೇರೆ, ಪಟ್ಟಣಗಳಲ್ಲಿ ಬೇರೆ ಆಹಾರ ಪದ್ಧತಿ ಇತ್ತು. ಮೈಸೂರು ಭಾಗದ ಹಳ್ಳಿಗಳಲ್ಲಿ ಅನ್ನ ತಿನ್ನುತ್ತಿದ್ದದ್ದು ಹಬ್ಬಗಳಲ್ಲಿ ಅಥವಾ ನೆಂಟರು ಬಂದಾಗ. ಇಲ್ಲದೇ ಹೋದ್ರೆ ರಾಗಿ ಮುದ್ದೆ ಅಥವಾ ಜೋಳದ ರೊಟ್ಟಿ ತಿಂತಾಯಿದ್ವಿ‌. ಬಡ ಕುಟುಂಬಗಳಲ್ಲಿ ಅನ್ನ ಮಾಡುತ್ತಲೇ ಇರಲಿಲ್ಲ. ಸಣ್ಣ ಮಕ್ಕಳಿಗೆ ಕಾಯಿಲೆ ಬಂದಾಗ ರಾಗಿ ಮುದ್ದೆ, ಜೋಳದ ರೊಟ್ಟಿ ಕೊಡೋದಕ್ಕೆ ಆಗಲ್ಲ. ಚೆನ್ನಾಗಿ ಬೇಯಿಸಿರುವಂಥ ಅನ್ನ ಕೊಡಬೇಕು. ಪಾಪ ಇದಕ್ಕಾಗಿ ಯಾರ ಮನೆಯಲ್ಲಿ ಅನ್ನ ಮಾಡ್ತಾರೆ?. ಅವರ ಮನೆ ಬಳಿ ತುತ್ತು ಅನ್ನಕ್ಕಾಗಿ ಹೋಗಿ ನಿಲ್ತಾ ಇದ್ರು. ನಾನು ಇದನ್ನ ಕಣ್ಣಾರೆ ನೋಡಿದ್ದೇನೆ. ಆ ಮಗುಗೋಸ್ಕರ ಬೇರೆಯವರ ಮನೆ ಹತ್ತಿರ ಅನ್ನಕ್ಕಾಗಿ ಬಂದು ನಿಂತುಕೊಳ್ತಾಯಿದ್ರು. ಈ ಕಾರಣಕ್ಕಾಗಿಯೇ ಪ್ರಣಾಳಿಕೆಯಲ್ಲಿ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ಕೊಡಬೇಕೆಂದು ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ಮಂಡಿಸಿದ ಈಶ್ವರಪ್ಪ

ಬೆಲ್ಲದ್​ಗೆ ತಿರುಗೇಟು ನೀಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ: ಎರಡು ವರ್ಷಗಳ ಬಳಿಕ ಉಚಿತವಾಗಿ ಅಕ್ಕಿ ಕೊಟ್ಟೆವು. ಏಳು ಕೆಜಿ ಅಕ್ಕಿಯನ್ನ ಉಚಿತವಾಗಿ ನೀಡಿದೆವು. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಇದೆ, ಇಲ್ಲ ಎಂದು ಹೇಳಲ್ಲ. ಫುಡ್ ಸೆಕ್ಯುರಿಟಿ ಅನ್ನೋದು ಮನಮೋಹನ್ ಸಿಂಗ್ ಇದ್ದಾಗ ತಂದಿದ್ದು. ಅದರಲ್ಲಿ ಮೂರು ರೂಪಾಯಿಗೆ ಕೇಂದ್ರ ಸರ್ಕಾರ ಅಕ್ಕಿ ಕೊಡ್ತಾರೆ. ಆ ಮೂರು ರೂಪಾಯಿಯನ್ನ ರಾಜ್ಯ ಸರ್ಕಾರ ಭರಿಸಬೇಕು‌. ಅವರು ಐದು ಕೆಜಿಗೆ ಮಾತ್ರ ಕೊಡ್ತಾಯಿದ್ರು, ಅದರಲ್ಲಿ ಮತ್ತೆ ನಾವು ಎರಡು ಕೆಜಿಗೆ ಹಣ ಕೊಡಬೇಕಿತ್ತು. ಆ ಎರಡು ಕೆಜಿಗೆ ಮಾರುಕಟ್ಟೆಯಲ್ಲಿ ಏನು ರೇಟ್ ಇದೆ, ಅಷ್ಟು ಹಣ ಕೊಟ್ಟು ಖರೀದಿ ಮಾಡಬೇಕಾಯ್ತು. ನಾವು ಪ್ರಮಾಣವಚನ ಸ್ವೀಕಾರ ಮಾಡಿದ ಒಂದು ಗಂಟೆಯಲ್ಲಿ ಈ ಯೋಜನೆ ಘೋಷಣೆ ಮಾಡಿದೆವು. ಯಾಕೆಂದರೆ ವಿದ್ಯಾರ್ಥಿ ಜೀವನದಲ್ಲಿ ನೋಡಿದ ದೃಶ್ಯ ಕಣ್ಣಲ್ಲೇ ಇತ್ತು. ಏಳು ಕೆಜಿನಾ ಈಗ ನೀವು ಐದು ಕೆಜಿ‌ ಮಾಡಿದ್ದೀರಾ. ಬೆಲ್ಲದ್ ಅವರೇ ನೀವು ಒತ್ತಾಯ ಮಾಡಿ ಏಳು ಕೆಜಿ ಕೊಡೋಕ್ಕೆ. ಒಂದು ಕೆಜಿ ಕೊಡ್ತೀವಿ ಅಂತ ರಾಜ್ಯಪಾಲರ ಬಳಿ ಹೇಳಿಸಿದ್ದೀರಾ‌. ಅಕ್ಕಿ, ಗೋಧಿ ತಿಂದರೆ ಖಾಯಿಲೆ ಬರುತ್ತೆ ಅಂತ ಹೇಳ್ತಾಯಿದ್ದೀರಾ ಅಲ್ವಾ, ಅದು ವೈಜ್ಞಾನಿಕವಾಗಿ ಪ್ರೂವ್ ಆಗಿಲ್ಲ ಎಂದು ತಿರುಗೇಟು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.