ETV Bharat / state

ಆನೇಕಲ್: ಡಿಯೋ ಬೈಕ್‌ಗಳಿಗೆ ಕನ್ನ ಹಾಕುತ್ತಿದ್ದ ಆರೋಪಿ ಸೆರೆ - SI Pradeep

ಡಿಯೋ ಬೈಕ್​ಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ.

ಡಿಯೋ ಬೈಕ್​ಗಳನ್ನು ಕದಿಯುತ್ತಿದ್ದ ಆರೋಪಿ
ಡಿಯೋ ಬೈಕ್​ಗಳನ್ನು ಕದಿಯುತ್ತಿದ್ದ ಆರೋಪಿ
author img

By ETV Bharat Karnataka Team

Published : Oct 25, 2023, 10:53 PM IST

ಆನೇಕಲ್: ಅಂದಾಜು ₹2.40 ಲಕ್ಷ ಬೆಲೆ ಬಾಳುವ 6 ಡಿಯೋ ಬೈಕ್​ಗಳನ್ನು ಕದ್ದ ಆರೋಪಿಯನ್ನು ಆನೇಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ತಮಿಳುನಾಡು ಮೂಲದ ಶೇಕ್ ಆಸಿಫ್ (23) ಸದ್ಯಕ್ಕೆ ಆನೇಕಲ್ ಗೌರೇನಹಳ್ಳಿಯಲ್ಲಿ ವಾಸವಿದ್ದ. ಸಹಚರರೊಡನೆ ಕಳ್ಳತನಕ್ಕೆ ಇಳಿಯುತ್ತಿದ್ದ ಈತ ಈ ಹಿಂದೆ ತಮಿಳುನಾಡಿನ ಹೊಸೂರಿನಲ್ಲಿ ದರೋಡೆಗೆ ಯತ್ನಿಸಿದ್ದು, ಪ್ರತಿರೋಧಿಸಿದವರನ್ನು ಹತ್ಯೆಗೈದ ಆರೋಪ ಎದುರಿಸುತ್ತಿದ್ದಾನೆ.

ಸಾಮಾನ್ಯವಾಗಿ ಡಿಯೋ ಬೈಕ್​ಗಳನ್ನೇ ಎಲ್ಲೆಂದರಲ್ಲಿ ನುಗ್ಗಿಸಬಹುದೆಂದು ಅವುಗಳನ್ನೇ ಕದಿಯುತ್ತಿದ್ದೆ. ಬಣ್ಣ, ನಂಬರ್ ಪ್ಲೇಟ್ ಬದಲಿಸಿ ಬಳಸುತ್ತಿದ್ದೆ ಎಂದು ಆತ ಹೇಳಿದ್ದಾನೆ. ಆರು ಬೈಕ್​ಗಳಲ್ಲಿ ಜಿಗಣಿಯಲ್ಲಿ ಎರೆಡು, ಸೂರ್ಯನಗರ 2, ಅತ್ತಿಬೆಲೆ 1 ಮತ್ತು ಆನೇಕಲ್ ಭಾಗದಲ್ಲಿ 1 ಬೈಕ್ ಕದ್ದಿದ್ದು, ಇನ್ನೂ ಕೆಲ ಬೈಕ್‌ಗಳು ಮತ್ತು ಕೆಲ ಆರೋಪಿಗಳು ಪತ್ತೆಯಾಗಬೇಕಿವೆ ಎಂದು ಪೊಲೀಸರು ಹೇಳಿದ್ದಾರೆ.

ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್‌ನೊಂದಿಗೆ ಪರಾರಿಯಾಗುತ್ತಿದ್ದ ಇಬ್ಬರ ಬಂಧನ: ಒಎಲ್​ಎಕ್ಸ್​​ನಲ್ಲಿ ಜಾಹೀರಾತು ಕೊಡುವ ಬೈಕ್ ಮಾಲೀಕರನ್ನು ಫೋನ್ ಮಾಡಿ ಭೇಟಿಯಾಗಿ, ಬಳಿಕ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಬೈಕ್‌ಸಮೇತ ಪರಾರಿಯಾಗುತ್ತಿದ್ದ ಇಬ್ಬರನ್ನು ಯಲಹಂಕ ಪೊಲೀಸರು (ನವೆಂಬರ್ 25-2022) ಬಂಧಿಸಿದ್ದರು. ಮಹಮ್ಮದ್ ನಸೀಫ್ ಎಂಬುವರು ಯಲಹಂಕದ ರೇವಾ ಸರ್ಕಲ್ ಬಳಿ ಬೈಕ್ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದರು. ಇವರಿಗೆ ಫೋನ್​ಗೆ ಕರೆ ಮಾಡಿದ ಬೈಕ್ ಕಳ್ಳರು, ನವೆಂಬರ್ 13 ರ ರಾತ್ರಿ 9 ಗಂಟೆಗೆ ಬೈಕ್ ನೋಡಲು ಸ್ಥಳಕ್ಕೆ ಬಂದಿದ್ದರು. ಅನಂತರ ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿ, ಬೈಕ್​ನೊಂದಿಗೆ ಪರಾರಿಯಾಗಿದ್ದರು. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಬೆಂಗಳೂರಿನ ದೇವರಜೀವನಹಳ್ಳಿ ನಿವಾಸಿ ಯಾಸೀನ್ ಬೇಗ್ (22), ಬೆಂಗಳೂರಿನ ಗೋವಿಂದಪುರದ ನಿವಾಸಿ ಇಮ್ರಾನ್ ಖಾನ್ (24) ಎಂಬಿಬ್ಬರನ್ನು ಬಂಧಿಸಿದ್ದರು. 15 ಲಕ್ಷ ರೂ. ಮೌಲ್ಯದ 19 ಸ್ಕೂಟರ್​ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆರೋಪಿಗಳು 19 ಸ್ಕೂಟರ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್‌ನೊಂದಿಗೆ ಪರಾರಿಯಾಗುತ್ತಿದ್ದ ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.