ಬೆಂಗಳೂರು : ಸುಮಾರು 200 ವರ್ಷಗಳಷ್ಟು ಪ್ರಾಚೀನ ಕಾಲದ ಬುದ್ಧನ ವಿಗ್ರಹವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸಂಪಂಗಿರಾಮ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಂಚಮರ್ಥಿ ರಘುರಾಮ ಚೌಧರಿ, ಉದಯ್ ಕುಮಾರ್, ಫ್ರೆಡ್ಡಿ ಡಿಸೋಜ, ಶರಣ್ ನಾಯರ್ ಹಾಗೂ ಪ್ರಸನ್ನ ಎಂದು ಗುರುತಿಸಲಾಗಿದೆ.
![ancient-buddha-idol-sized-in-bengaluru-five-arrested](https://etvbharatimages.akamaized.net/etvbharat/prod-images/17240883_thum.jpg)
ಆರೋಪಿಗಳ ಪೈಕಿ ಪಂಚಮರ್ಥಿ ರಘುರಾಮ ಚೌಧರಿ ತೆಲಂಗಾಣ ಮೂಲದವನಾಗಿದ್ದು, 30 ಲಕ್ಷ ರೂ.ಗಳಿಗೆ ಶ್ರೀಕಾಂತ್ ಎಂಬಾತನಿಂದ ವಿಗ್ರಹ ಖರೀದಿಸಿದ್ದ. ಬಳಿಕ ವಿದೇಶಕ್ಕೆ ರಫ್ತು ಮಾಡಿ ಕೋಟ್ಯಂತರ ರೂಪಾಯಿ ಸಂಪಾದಿಸಬಹುದೆಂದು ಉಳಿದ ಆರೋಪಿಗಳೊಂದಿಗೆ ಸೇರಿ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
![ancient-buddha-idol-sized-in-bengaluru-five-arrested](https://etvbharatimages.akamaized.net/etvbharat/prod-images/17240883_thumbn.jpg)
ಬಳಿಕ ಡಿ.14ರಂದು ರಿಚ್ಮಂಡ್ ಸರ್ಕಲ್ ಬಳಿ ವ್ಯವಹಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಂಪಂಗಿರಾಮ ನಗರ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 38 ಸೆಂ.ಮೀ ಉದ್ದದ ಪ್ರಾಚೀನ ಕಾಲದ ಬುದ್ಧನ ವಿಗ್ರಹ, ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ : ನಾಗಮಣಿ ಕಲ್ಲು, ಪಂಚಲೋಹದ ದುರ್ಗಾದೇವಿ ವಿಗ್ರಹ ಮಾರಾಟ ಯತ್ನ... ನಾಲ್ವರ ಸೆರೆ