ಬೆಂಗಳೂರು: ವಿಜಯನಗರ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಶಾಸಕ ಆನಂದ್ ಸಿಂಗ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ. ನಂತರ ಚುನಾವಣಾ ಉಸ್ತುವಾರಿಗಳಿಗೂ ಧನ್ಯವಾದ ಸಲ್ಲಿಸಿದ್ದಾರೆ.
ಇಂದು (ಡಿ.12) ಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ದವಳಗಿರಿಗೆ ಭೇಟಿ ನೀಡಿದ ಆನಂದ್ ಸಿಂಗ್ ಬಿಎಸ್ವೈ ಅವರನ್ನು ಭೇಟಿಯಾದರು. ನಿನ್ನೆ (ಡಿ.11) ಇತರ ಶಾಸಕರು ಆಗಮಿಸಿದ್ದ ವೇಳೆ ಗೈರಾಗಿದ್ದರು. ನಂತರ ಖಾತೆ ಬಗ್ಗೆಯೂ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸಿಎಂ ಭೇಟಿ ನಂತರ ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಆನಂದ್ ಸಿಂಗ್ ಆಗಮಿಸಿದರು. ವಿಜಯನಗರ ಉಪಚುನಾವಣೆ ಉಸ್ತುವಾರಿಯಾಗಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಭೇಟಿಯಾಗಿ ಧನ್ಯವಾದ ಸಲ್ಲಿಸಿದರು.