ETV Bharat / state

ಬಡಿದಾಡಿಕೊಂಡ ಶಾಸಕರು ಖುದ್ದು ಹಾಜರಾದಲ್ಲಿ ಮಾತ್ರ ಮುಂದಿನ ಪ್ರಕ್ರಿಯೆ....ಹೈಕೋರ್ಟ್​ ಸ್ಪಷ್ಟನೆ!

ಈಗಲ್ ಟನ್ ರೆಸಾರ್ಟ್​ನಲ್ಲಿ ಬಡಿದಾಡಿಕೊಂಡು ಇದೀಗ ಸಂಧಾನಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿರುವ ಶಾಸಕ ಆನಂದ್ ಸಿಂಗ್ ಹಾಗೂ ಗಣೇಶ್, ಖುದ್ದು ಹಾಜರಾದಲ್ಲಿ ಮಾತ್ರ ಮುಂದಿನ ಪ್ರಕ್ರಿಯೆ ಜರುಗಿಸುತ್ತೇವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

author img

By

Published : Jan 21, 2020, 9:21 PM IST

Anand Singh and Ganesh Galate fight case...Postponement of inquiries
ಬಡಿದಾಡಿಕೊಂಡ ಶಾಸಕರು ಖುದ್ದು ಹಾಜರಾದಲ್ಲಿ ಮಾತ್ರ ಮುಂದಿನ ಪ್ರಕ್ರಿಯೆ....ಹೈಕೋರ್ಟ್​ ಸ್ಪಷ್ಟನೆ!

ಬೆಂಗಳೂರು: ಈಗಲ್ ಟನ್ ರೆಸಾರ್ಟ್​ನಲ್ಲಿ ಬಡಿದಾಡಿಕೊಂಡು ಇದೀಗ ಸಂಧಾನಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿರುವ ಶಾಸಕ ಆನಂದ್ ಸಿಂಗ್ ಹಾಗೂ ಗಣೇಶ್ ಖುದ್ದು ಹಾಜರಾದಲ್ಲಿ ಮಾತ್ರ ಮುಂದಿನ ಪ್ರಕ್ರಿಯೆ ಜರುಗಿಸುತ್ತೇವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನ ಮಾಡಿಕೊಳ್ಳುತ್ತೇವೆ. ಹೀಗಾಗಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಿ ಎಂದು ಕೋರಿ ಶಾಸಕ ಗಣೇಶ್ ಸಲ್ಲಿಸರುವ ಅರ್ಜಿಯನ್ನು ನ್ಯಾ. ಬಿ.ಎ ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಇಬ್ಬರೂ ಶಾಸಕರ ಪರ ವಕೀಲರು ಪ್ರತ್ಯೇಕವಾಗಿ ಸಂಧಾನಕ್ಕೆ ಒಪ್ಪಿರುವ ಪ್ರಮಾಣಪತ್ರಗಳನ್ನು ಪೀಠಕ್ಕೆ ಸಲ್ಲಿಸಿದರು.

ಪ್ರಮಾಣಪತ್ರ ಪರಿಶೀಲಿಸಿದ ಪೀಠ ಕಕ್ಷೀದಾರರು ಹಾಜರಿದ್ದಾರೆಯೇ ಎಂದು ಪ್ರಶ್ನಿಸಿತು. ಗಣೇಶ್ ಪರ ವಕೀಲರು ಉತ್ತರಿಸಿ, ದೂರುದಾರರೇ ಪ್ರಮಾಣಪತ್ರ ಸಲ್ಲಿಸಿದ್ದಾರೆ, ಮುಂದಿನ ಪ್ರಕ್ರಿಯೆ ಜರುಗಿಸಬಹುದು. ಪ್ರಕರಣದ ಕಕ್ಷೀದಾರರು ಇಬ್ಬರೂ ಶಾಸಕರಾಗಿದ್ದು, ಪ್ರೀತಿಗೆ ಹೊಡೆದಾಡಿಕೊಂಡಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಈ ಕಾಲದಲ್ಲಿ ಯಾರನ್ನೂ ನಂಬುವಂತಿಲ್ಲ. ದೂರುದಾರರು ಹಾಗೂ ಆರೋಪಿತರು ಹಾಜರಾದಲ್ಲಿ ಮಾತ್ರ ಸಂಧಾನ ಕೋರಿಕೆಯನ್ನು ವಿಚಾರಣೆಗೆ ಒಳಪಡಿಸಬಹುದು. ಹಾಗೆಯೇ ಇಬ್ಬರೂ ಕಕ್ಷೀದಾರರು ಸಂಧಾನ ಮಾಡಿಕೊಳ್ಳುವ ಕುರಿತು ಜಂಟಿಯಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

Intro:Body:ಈ ಕಾಲದಲ್ಲಿ ಯಾರನ್ನೂ ನಂಬೋಕ್ಕಾಗಲ್ಲ : ಹೈಕೋರ್ಟ್ ನ್ಯಾ. ಬಿ.ಎ ಪಾಟೀಲ್
ಬೆಂಗಳೂರು: ಈಗಲ್ ಟನ್ ರೆಸಾರ್ಟ್ ನಲ್ಲಿ ಬಡಿದಾಡಿಕೊಂಡು ಇದೀಗ ರಾಜಿ ಸಂಧಾನಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿರುವ ಶಾಸಕ ಆನಂದ್ ಸಿಂಗ್ ಹಾಗೂ ಗಣೇಶ್ ಖುದ್ದು ಹಾಜರಾದಲ್ಲಿ ಮಾತ್ರ ಮುಂದಿನ ಪ್ರಕ್ರಿಯೆ ಜರುಗಿಸುತ್ತೇವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಸಂಧಾನ ಮಾಡಿಕೊಳ್ಳುತ್ತೇವೆ. ಹೀಗಾಗಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಿ ಎಂದು ಕೋರಿ ಕಂಪ್ಲಿ ಶಾಸಕ ಗಣೇಶ್ ಸಲ್ಲಿಸರುವ ಅರ್ಜಿಯನ್ನು ನ್ಯಾ. ಬಿ. ಎ ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಇಬ್ಬರೂ ಶಾಸಕರ ಪರ ವಕೀಲರು ಪ್ರತ್ಯೇಕವಾಗಿ ರಾಜೀ ಸಂಧಾನಕ್ಕೆ ಒಪ್ಪಿರುವ ಪ್ರಮಾಣಪತ್ರಗಳನ್ನು ಪೀಠಕ್ಕೆ ಸಲ್ಲಿಸಿದರು.
ಪ್ರಮಾಣಪತ್ರ ಪರಿಶೀಲಿಸಿದ ಪೀಠ ಕಕ್ಷೀದಾರರು ಹಾಜರಿದ್ದಾರೆಯೇ ಎಂದು ಪ್ರಶ್ನಿಸಿತು. ಗಣೇಶ್ ಪರ ವಕೀಲರು ಉತ್ತರಿಸಿ, ದೂರುದಾರರೇ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಮುಂದಿನ ಪ್ರಕ್ರಿಯೆ ಜರುಗಿಸಬಹುದು. ಪ್ರಕರಣದ ಕಕ್ಷೀದಾರರು ಇಬ್ಬರೂ ಶಾಸಕರಾಗಿದ್ದು, ಪ್ರೀತಿಗೆ ಹೊಡೆದಾಡಿಕೊಂಡಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಈ ಕಾಲದಲ್ಲಿ ಯಾರನ್ನೂ ನಂಬುವಂತಿಲ್ಲ. ದೂರುದಾರರು ಹಾಗೂ ಆರೋಪಿತರು ಹಾಜರಾದಲ್ಲಿ ಮಾತ್ರ ಸಂಧಾನ ಕೋರಿಕೆಯನ್ನು ವಿಚಾರಣೆಗೆ ಒಳಪಡಿಸಬಹುದು. ಹಾಗೆಯೇ ಇಬ್ಬರೂ ಕಕ್ಷೀದಾರರು ಸಂಧಾನ ಮಾಡಿಕೊಳ್ಳುವ ಕುರಿತು ಜಂಟಿಯಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.