ETV Bharat / state

ಅಮಿತ್ ಶಾ ರಾಜ್ಯದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ: ವಿ.ಎಸ್​. ಉಗ್ರಪ್ಪ - Prahlad Joshi

ಅಮಿತ್ ಶಾ ಅವರೊಂದಿಗೆ ಚರ್ಚಿಸಿ ರಾಜ್ಯದ ಹಲವು ಬೇಡಿಕೆಗಳ ಈಡೇರಿಸುವ ನಿರೀಕ್ಷೆ ಹೊಂದಿದ್ದೆವು. ಆದರೆ ಅದು ಹುಸಿಯಾಗಿದೆ ಎಂದು ಮಾಜಿ ಸಂಸದ ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

VS Ugrappa
ಅಮಿತ್ ಶಾ ರಾಜ್ಯದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ: ವಿ.ಎಸ್​ ಉಗ್ರಪ್ಪ
author img

By

Published : Jan 19, 2020, 2:43 PM IST

ಬೆಂಗಳೂರು: ನರೇಂದ್ರ ಮೋದಿ ಅವರ ಬಳಿಕ ಅಮಿತ್ ಶಾ ಪ್ರಧಾನಿ ಆಗುವ ಕನಸು ಕಾಣ್ತಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮಿತ್​ ಶಾ ಅವರು ಕಳಸಾ ಬಂಡೂರಿ ಹಾಗೂ ನೆರೆಗೆ ಸಂಬಂಧಿಸಿದಂತೆ ಪರಿಹಾರ ನೀಡುತ್ತಾರೆ ಎಂಬ ನಿರೀಕ್ಷೆಯನ್ನು ರಾಜ್ಯದ ಜನತೆ ಇಟ್ಟುಕೊಂಡಿದ್ದರು. ಆದರೆ ಅದು ನೆರವೇರಲಿಲ್ಲ. ಅಷ್ಟೇ ಅಲ್ಲದೆ, ರಾಜ್ಯಕ್ಕೆ ಜಿಎಸ್​ಟಿ ಪಾಲಿನ 5,600 ಕೋಟಿ ಹಾಗೂ ಗ್ರಾಮೀಣಾಭಿವೃದ್ದಿಗೆ ಎನ್​ಆರ್​ಇಜಿಯಿಂದ 2850 ಕೋಟಿ ಬರುವುದು ಬಾಕಿ ಇದೆ. ಈ ಬಗ್ಗೆ ಕೇಂದ್ರ ಗೃಹ ಸಚಿವರಿಂದ ಯಾವುದೇ ಭರವಸೆ ಸಿಕ್ಕಿಲ್ಲ. ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್​ಗೆ ಅಂಗಲಾಚುತ್ತಿದ್ದಾರೆ ಎಂದರು.

ಅಮಿತ್ ಶಾ ರಾಜ್ಯದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ: ವಿ.ಎಸ್​ ಉಗ್ರಪ್ಪ

ಇನ್ನು, ಬಿಜೆಪಿಯವರಿಗೆ ಗಾಂಧೀಜಿ, ಅಂಬೇಡ್ಕರ್​ರವರು ಇದ್ದಕ್ಕಿದ್ದಂತೆ ನೆನಪಾಗುತ್ತಾರೆ. ಅವರು ಧರ್ಮದ ಹೆಸರಲ್ಲಿ ವೋಟ್​​ಬ್ಯಾಂಕ್ ನಿರ್ಮಿಸುತ್ತಿದ್ದಾರೆ. ಧರ್ಮ ಆಧಾರಿತ ಜಾತಿ ರಾಜಕಾರಣವನ್ನು ಕಾಂಗ್ರೆಸ್ ಮಾಡಿಲ್ಲ. ದೇಶ ಕಟ್ಟುವುದಕ್ಕೆ ನಿಮ್ಮ ಕೊಡುಗೆ ಏನು?. ತ್ಯಾಗ, ಬಲಿದಾನ ನಿಮ್ಮಿಂದ ಆಗಿದ್ದರೆ ತೋರಿಸಿ. ಇದೇ ವಿಚಾರದ ಮೇಲೆ ದೇಶದ ಜನಾಭಿಪ್ರಾಯ ಸ್ವೀಕರಿಸುವ ಧೈರ್ಯ ಇದೆಯೇ? ಇದೇ ವಿಚಾರ ಇಟ್ಟು ಬ್ಯಾಲೆಟ್ ಮೂಲಕ ಚುನಾವಣೆಗೆ ಹೋಗೋಣ. ಜನಾದೇಶ ಏನು ಆಗುತ್ತೆ ನೋಡೋಣ ಎಂದು ಬಿಜೆಪಿಗರಿಗೆ ಸವಾಲೊಡ್ಡಿದರು.

ಇದೇ ವೇಳೆ ಸಿಎಎ, ಎನ್​ಆರ್​ಸಿ ಕುರಿತು ಮಾತನಾಡಿ, ನಾವು ಈ ವಿಚಾರದ ಕುರಿತು ಚಚರ್ಚೆ ಮಾಡಲು ಸಿದ್ದರಿದ್ದೇವೆ. ಸಚಿವ ಪ್ರಹ್ಲಾದ್ ಜೋಶಿ ಜತೆ ಮಾತ್ರವಲ್ಲ ಮೋದಿ, ಅಮಿತ್ ಶಾ ಜತೆಗೂ ನೇರ ಚರ್ಚೆಗೆ ಸಿದ್ಧ. ತಾಕತ್ತಿದ್ದರೆ ವಿಧಾನಸೌಧ ಮುಂಭಾಗ ಚರ್ಚೆಗೆ ಬರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಬೆಳಗಾವಿ ಗಡಿ ವಿವಾದದ ಕುರಿತು ಮಾತನಾಡಿದ ಅವರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ವಿನಾಕಾರಣ ಈ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಮುಗಿದು ಹೋಗಿರುವ ಗಡಿ ಸಮಸ್ಯೆ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂಬ ನಿಲುವನ್ನು ಕೇಂದ್ರದ ಬಿಜೆಪಿ ನಾಯಕರು ಅರಿಯಬೇಕು. ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ರಾಜಕಾರಣ ಮಾಡುವ ಬಿಜೆಪಿಗೆ ನಾವು ಎಚ್ಚರಿಸುತ್ತಿದ್ದೇವೆ ಎಂದರು.

Intro:newsBody:ಅಮಿತ್ ಶಾ ರಾಜ್ಯದ ಜನ ಇಟ್ಟಿದ್ದ ನಿರೀಕ್ಷೆ ಹುಸಿಗೊಳಿಸಿದ್ದಾರೆ: ಉಗ್ರಪ್ಪ

ಬೆಂಗಳೂರು: ನರೇಂದ್ರ ಮೋದಿ ಅವರ ಬಳಿಕ ಅಮಿತ್ ಶಾ ಪ್ರಧಾನಿ ಆಗುವ ಕನಸು ಕಾಣ್ತಿದ್ದಾರೆ. ರಾಜ್ಯದ ಹಲವು ಬೇಡಿಕೆಗಳ ಈಡೇರಿಸುವ ನಿರೀಕ್ಷೆ ಹೊಂದಿದ್ದೆವು. ಆದರೆ ಅದು ಹುಸಿಯಾಗಿದೆ ಎಂದು ಮಾಜಿ ಸಂಸದ ಉಗ್ರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಿನ್ನೆ ಹುಬ್ಬಳ್ಳಿಗೆ ಬಂದವರು, ನೆರೆ ಪರಿಹಾರಕ್ಕೆ ನೆರವು ನೀಡ್ತಾರೆ ಎಂಬ ನಿರೀಕ್ಷೆ ಇತ್ತು. ಕಳಸಾ ಬಂಡೂರಿ ನಾಲಾ ಯೋಜನೆಗೂ ಒಂದು ಪರಿಹಾರ ಹೇಳ್ತಾರೆ ಅಂದುಕೊಂಡಿದ್ವಿ. ಆದ್ರೆ ಅದು ಹುಸಿಯಾಗಿದೆ. ರಾಜ್ಯಕ್ಕೆ ಜಿಎಸ್ ಟಿ ಪಾಲಿನ ಹಣ 5600 ಕೋಟಿ ಬರಬೇಕು. ಗ್ರಾಮೀಣಾಭಿವೃದ್ದಿಗೆ ಎನ್.ಆರ್.ಇ.ಜಿ 2850 ಕೋಟಿ ಬರುವುದು ಬಾಕಿ ಇದೆ. ಈ ಬಗ್ಗೆ ಕೇಂದ್ರ ಗೃಹ ಸಚಿವರಿಂದ ಯಾವುದೇ ಭರವಸೆ ಸಿಕ್ಕಿಲ್ಲ. ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್ ಗೆ ಅಂಗಲಾಚುತ್ತಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆಗೆ ಅಮಿತ್ ಶಾ ಕ್ಲಿಯರ್ ಸಂದೇಶವನ್ನ ಬಿಎಸ್ ವೈ ಗೆ ನೀಡಿಲ್ಲ ಎಂದರು.
ಇದ್ದಕ್ಕಿದ್ದಂತೆ ಬಿಜೆಪಿಯವರಿಗೆ ದಲಿತರು ನೆನಪಾಗಿದ್ದಾರೆ. ಗಾಂಧೀಜಿ, ಅಂಬೇಡ್ಕರ್ ನೆನಪಾಗುತ್ತಾರೆ. ಮೋಡಿ, ಅಮಿತ್ ಶಾಗೆ ಅಗತ್ಯ ಬಿದ್ದಾಗ ಇಂತಹ ನಾಯಕರು ನೆನಪಾಗುತ್ತಾರೆ. ಸಂವಿಧಾನ ಕ್ಕೆ ವಿರುದ್ಧವಾಗಿ ಶ್ರೇಣೀಕೃತ ಜಾಸ್ತಿ ವದಯವಸ್ಥೆ, ಧರ್ಮದ ಹೆಸರಲ್ಲಿ ಮತಬ್ಯಾಂಕ್ ನಿರ್ಮಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಮೇಲೆ ಜಾತಿ ಒಡೆಯುವ ಆರೋಪ ಮಾಡಿಲ್ಲ. ಧರ್ಮ ಆಧಾರಿತ ಜಾತಿ ರಾಜಕಾರಣವನ್ನು ಕಾಂಗ್ರೆಸ್ ಮಾಡಿಲ್ಲ. ದೇಶ ಕಟ್ಟುವುದಕ್ಕೆ ನಿಮ್ಮ ಕೊಡುಗೆ ಏನು? ತ್ಯಾಗ, ಬಲಿದಾನ ನಿಮ್ಮಿಂದ ಆಗಿದ್ದರೆ ತೋರಿಸಿ. ಸುಳ್ಳು ಹೇಳುವಲ್ಲಿ ನಿಸ್ಸೀಮರಾಗಿದ್ದೀರಿ. ಇದೇ ವಿಚಾರದ ಮೇಲೆ ದೇಶದ ಜನಾಭಿಪ್ರಾಯ ಸ್ವೀಕರಿಸುವ ಧೈರ್ಯ ಇದೆಯೇ? ಇದೇ ವಿಚಾರ ಇಟ್ಟು ಬ್ಯಾಲೆಟ್ ಮೂಲಕ ಚುನಾವಣೆಗೆ ಹೋಗೋಣ. ಜನಾದೇಶ ಏನು ಆಗುತ್ತೆ ನೋಡೋಣ. ಇದೇ ಸ್ಥಿತಿ ಮುಂದುವರಿದರೆ ದೇಶ ಬಿಜೆಪಿ ಮುಕ್ತವಾಗಲಿದೆ.
ಸಿಎಎ, ಎನ್ಆರ್ಸಿ ವಿಚಾರದಲ್ಲಿ ಚರ್ಚೆಗೆ ಸಿದ್ಧ ಎಂದಿದ್ದಾರೆ. ನಾವು ಕೂಡ ವಿಧಾನಸೌಧ ಮುಂಭಾಗ ಸಾಧ್ಯವಾದರೆ ಚರ್ಚೆಗೆ ಸಿದ್ಧವಿದ್ದೇವೆ. ಸಚಿವ ಪ್ರಹ್ಲಾದ್ ಜೋಶಿ ಜತೆ ಮಾತ್ರವಲ್ಲ ಮೋದಿ, ಅಮಿತ್ ಶಾ ಜತೆಗೂ ನೇರ ಚರ್ಚೆಗೆ ಸಿದ್ಧ. ಧಮ್ಮು, ತಾಕತ್ತು ಇದ್ದರೆ ವಿಧಾನಸೌಧ ಮುಂಭಾಗ ಚರ್ಚೆಗೆ ಬರಲಿ. ಯಾವುದೇ ಸಂದರ್ಭದಲ್ಲೂ ನಾವು ಚರ್ಚೆಗೆ ಸಿದ್ಧವಿದ್ದೇವೆ ಎಂದರು.
ರಾಮಚಂದ್ರ ಗುಹಾ ಅವರು ನಿನ್ನೆ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅದು ಸರಿಯಲ್ಲ. ಬೆಂಗಳೂರಿನ ಪುರಭವನದಲ್ಲಿ ಕೇಂದ್ರ ಸರ್ಕಾರ ನಿಮ್ಮನ್ನು ಹೇಗೆ ನಡೆಸಿಕೊಂಡಿದೆ ಎನ್ನುವುದು ನೋಡಿದ್ದೇವೆ. ಮೋದಿ ಹೊಗಳಿ ಮಾತನಾಡುವ ಅಗತ್ಯ ಇರಲಿಲ್ಲ. ಅವರಿಂದ ದೇಶ ಯಾವ ಸ್ಥಿತಿ ತಲುಪಿದೆ ಎನ್ನುವುದನ್ನು ಗಮನಿಸಿ. ನಮ್ಮ ತಪ್ಪಿದ್ದರೆ ತಿದ್ದಿಕೊಳ್ಳುತ್ತೇವೆ. ಅವಹೇಳನ ಮಾಡುವುದು ಸರಿಯಲ್ಲ ಎಂದರು.
ಯಾರು ಏನೇ ಹೇಳಿದರೂ ಬೆಳಗಾವಿ ಕರ್ನಾಟಕದ ಒಂದು ಭಾಗ, ಅಂಗವಾಹಿದೆ. ರಾಜ್ಯದ ನೆಲ, ಜಲದ ವಿಚಾರದಲ್ಲಿ ಕಾಂಗ್ರೆಸ್ ಗೆ ಒಂದು ಬದ್ಧತೆ ಇದೆ. ವಿನಾ ಕಾರಣ ಈ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಮುಗಿದು ಹೋಗಿರುವ ಗಡಿ ಸಮಸ್ಯೆ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂಬ ನಿಲುವನ್ನು ಕೇಂದ್ರದ ಬಿಜೆಪಿ ನಾಯಕರು ಅರಿಯಬೇಕು. ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ರಾಜಕಾರಣ ಮಾಡುವ ಬಿಜೆಪಿಗೆ ನಾವು ಎಚ್ಚರಿಸುತ್ತಿದ್ದೇವೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.