ETV Bharat / state

ಕಾನೂನು ಸಮರ ಕೈಬಿಟ್ಟ ಅಲೋಕ್ ಕುಮಾರ್, ಫೋನ್​ ಟ್ಯಾಪಿಂಗ್​ ಆರೋಪಕ್ಕೆ ಹೆದರಿದರೆ? - alok kumar take back the application

ನಗರ ಪೊಲೀಸ್ ಆಯುಕ್ತರ ಹುದ್ದೆಯಿಂದ ತಮ್ಮನ್ನ ವರ್ಗಾವಣೆಗೊಳಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಕಾನೂನು ಸಮರ ಸಾರಿದ್ದ ಮಾಜಿ ನಗರ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಸಿಎಟಿನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂದಕ್ಕೆ ಪಡೆದಿರುವ ಕಾರಣ ನಿಗೂಢವಾಗಿದೆ.

ಅಲೋಕ್ ಕುಮಾರ್
author img

By

Published : Aug 16, 2019, 7:51 PM IST

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹುದ್ದೆಯಿಂದ ತಮ್ಮನ್ನ ವರ್ಗಾವಣೆಗೊಳಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಕಾನೂನು ಸಮರ ಸಾರಿದ್ದ ಮಾಜಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಸಿಎಟಿನಲ್ಲಿ ಹಾಕಿದ್ದ ಅರ್ಜಿ ಹಿಂದಕ್ಕೆ ಪಡೆದಿರುವ ಕಾರಣ ನಿಗೂಢವಾಗಿದೆ.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಟೆಲಿಫೋನ್ ಕದ್ದಾಲಿಕೆ ಮಾಡಲಾಗಿದೆ.ಇದರಲ್ಲಿ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ಅವರ ಕೈವಾಡ ಇದೆಯೇ?ಎಂದು ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಬೆಂಗಳೂರು ನಗರ ಕಮಿಷನರ್ ಆಗಿದ್ದ ತಮ್ಮನ್ನ ವಿನಾಕಾರಣ ವರ್ಗಾವಣೆಗೊಳಿಸಿರೋದನ್ನ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದರು. ಆದರೆ, ಈಗ ಕಾನೂನು ಹೋರಾಟದಿಂದ ಹಿಂದಕ್ಕೆ ಹೆಜ್ಜೆ ಇಟ್ಟಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಟೆಲಿಪೋನ್ ಕದ್ದಾಲಿಕೆ ಆರೋಪ ಪ್ರಕರಣದ ತನಿಖೆ ಮುಂದುವರೆದೆರೆ ತಾವು ಎಲ್ಲಿ ತನಿಖೆ ಎದುರಿಸಬೇಕಾಗುತ್ತದೆಯೋ ಎಂಬ ಆತಂಕ ಅವರನ್ನ ಕಾಡಿದೆಯಾ ಗೊತ್ತಿಲ್ಲ. ಜತೆಗೆ ಈದೇ ಟೈಮಿನಲ್ಲಿ ಸರ್ಕಾರದ ವಿರೋಧ ಕಟ್ಟಿಕೊಳ್ಳುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಸಿಎಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಸರ್ಕಾರದ ಒಬ್ಬ ಉನ್ನತ ಅಧಿಕಾರಿಯಾಗಿ ಸರ್ಕಾರದ ವಿರುದ್ದವೇ ಕಾನೂನು ಹೋರಾಟ ನಡೆಸಿದರೆ, ಭವಿಷ್ಯದಲ್ಲಿ ತಮಗೆ ಸಹಕಾರ ಸಿಗದೆ ಇರಬಹುದು. ಅಧಿಕಾರಶಾಹಿಗೆ ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ ಎಂಬ ಗೊಂದಲ ಸಹ ಅಲೋಕ್ ಕುಮಾರ್ ಅರ್ಜಿ ಹಿಂದಕ್ಕೆ ಪಡೆಯಲು ಕಾರಣ ಎನ್ನಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರಾಲ್ಕು ದಿನಗಳಲ್ಲಿ ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ವರ್ಗಾವಣೆಯಾಗಿತ್ತು. ಪೊಲೀಸ್ ಕಮಿಷನರ್ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಮತ್ತೊಬ್ಬ ಹಿರಿಯ ಅಧಿಕಾರಿ ಭಾಸ್ಕರ್ ರಾವ್​ ಅವರನ್ನು ಪೊಲೀಸ್ ಕಮಿಷನರ್ ಆಗಿ ಮುಖ್ಯಮಂತ್ರಿಗಳು ನೇಮಿಸಿದ್ದಕ್ಕೆ ಅಲೋಕ್ ಕುಮಾರ್ ಅಸಮಾಧಾನಗೊಂಡಿದ್ರು. ಅಲೋಕ್ ಕುಮಾರ್ ಪೊಲೀಸ್ ಕಮಿಷನರ್ ಆಗಿದ್ದ ಅವಧಿಯಲ್ಲಿ ಟೆಲಿಫೋನ್ ಕದ್ದಾಲಿಕೆ ಪ್ರಕರಣ ನಡೆದಿರುವುದರಿಂದ ಅವರ ಪಾತ್ರವೂ ಪ್ರಕರಣದಲ್ಲಿ ಇರಬಹುದೇ ಅನ್ನೋ ಅನುಮಾನವನ್ನ ರಾಜಕಾರಣಿಗಳು ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದರು.

Intro:ಸರಕಾರದ ವಿರುದ್ಧ ಕಾನೂನು ಸಮರ ಕೈ ಬಿಟ್ಟ ಅಲೋಕ್ ಕುಮಾರ್...
ಕದ್ದಾಲಿಕೆ ಆರೋಪಕ್ಕೆ ಹೆದರಿದರೆ...

ಸ್ಪೇಷಾಲ್ ಸ್ಟೋರಿ

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಯಿಂದ ತಮ್ಮನ್ನ ಪದಚ್ಯುತ ಗೊಳಿಸಿರುವ ಸರಕಾರದ ಕ್ರಮವನ್ನ ಪ್ರಶ್ನಿಸಿ ಕಾನೂನು ಸಮರ ಸಾರಿದ್ದ ಮಾಜಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಸಿಎಟಿನಲ್ಲಿ ಅರ್ಜಿ ಹಿಂದಕ್ಕೆ ಪಡೆದಿರುವ ಕಾರಣ ನಿಗೂಢವಾಗಿದೆ.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವ್ರ ಟೆಲಿಫೋನ್ ಕದ್ದಾಲಿಕೆ ಮಾಡಲಾಗಿದೆ ಇದರಲ್ಲಿ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ಅವರ ಕೈವಾಡ ಇದೆಯೇ ?ಎಂದು ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿರುವ ಸಂಧರ್ಭದಲ್ಲಿ ಅಲೋಕ್ ಕುಮಾರು ಅವರು ತಮಗೆ ನಿಡಿದ್ದ ಬೆಂಗಳೂರು ನಗರ ಕಮಿಷನರ್ ಜವಾಬ್ದಾರಿಯನ್ನ ವಿನಾಕಾರಣ ಬದಲಾಯಿಸಿದ್ದರ ವಿರುದ್ಧ ನಡೆಸುತ್ತಿದ್ದ ಕಾನೂನು ಹೋರಾಟದಿಂದ ಹಿಂದಕ್ಕೆ ಹೆಜ್ಜೆ ಇಟ್ಟಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಟೆಲಿಪೋನ್ ಕದ್ದಾಲಿಕೆ ಆರೋಪ ಪ್ರಕರಣದ ತನಿಕೆ ಮುಂದುವರೆದೆರೆ ತಾವು ಎಲ್ಲಿ ತನಿಖೆ ಎದುರಿಸಬೇಕಾಗುತ್ತದಯೋ ಇಂತಹ ಸಂಧರ್ಭದಲ್ಲಿ ಸರ್ಕಾರದ ವಿರೋದ ಕಟ್ಟಿಕೊಳ್ಳುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ನ್ಯಾಯಮಂಡಳಿಯಲ್ಲಿ ಸರಕಾರ ವಿರುದ್ದ ಸಲ್ಲಿಸಲಾಗಿದ್ದ ಅರ್ಜಿಯನ್ನ ವಾಪಸ್ಸು ಪಡೆದಿರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ.

ಸರಕಾರ ಒಬ್ಬ ಉನ್ನತ ಅಧಿಕಾರಿಯಾಗಿ ಸರಕಾರದ ವಿರುದ್ಧ ವೆ ಕಾನೂನು ಹೋರಾಟ ನಡೆಸಿದರೆ ಭವಿಷ್ಯದಲ್ಲಿ ತಮಗೆ ಸರಕಾರದಿಂದ ಸಹಕಾರ ಸಿಗದೆ ಇರಬಹುದು ಹಾಗೂ ಅಧಿಕಾರ ವೃಂದಕ್ಕೆ ತಪ್ಪು ಸಂದೇಶವನ್ನು ನಿಡಿದಂತೆಯಾಗುತ್ತದೆಯೆ .ಎನ್ನುವ ಗೊಂದಲ ಸಹ ಅಲೋಕ್ ಕುಮಾರ್ ಅವರು ಅರ್ಜಿಯನ್ನ ಹಿಂದಕ್ಕೆ ಪಡೆಯಲು ಕಾರಣ ಎನ್ನಲಾಗಿದೆ.
ಸಿಎಟಿಗೆ ಸಲ್ಲಿಸಿದ್ದ ಅರ್ಜಿಯನ್ನ ವಾಪಸ್ಸು ಪಡೆದ ಬಳಿಕ ಸರಕಾರವು ತಮ್ಮ ಬಗ್ಗೆ ಮೃದು ಧೋರಣೆತಳೆದು ಭವಿಷ್ಯದಲ್ಲಿ
ಸಂಕಷ್ಟ ತರಬಹುದೆಂದು ಎಂದು ಹೆಳಲಾಗುತ್ತಿರುವ ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನ ಸರಕಾರ ನಿರ್ಣಾಯಕ ಹಂತಕ್ಕೆ ತೆಗೆದುಕೊಂಡದೆ ಹೋಗದೆ ಇರಬಹುದು ಎನ್ನುವುದು ಸಹ ಒಂದು ಕಾರಣವಿರಬಹುದು ಎಂದು ಹೆಳಲಾಗುತ್ತಿದೆ

ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದು ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವಿಕಾರಿದಿದ ಮೂರು ನಾಲ್ಕು ದಿನಗಳಲ್ಲಿ ಬೆಂಗಳೂರು ನಗರ ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ಅವರನ್ನ ವರ್ಗಾವಣೆ ಮಾಡಿದ್ದರು.
ಪೊಲೀಸ್ ಕಮಿಷನರ್ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಮತ್ತೊಬ್ಬ ಹಿರಿಯ ಅಧಿಕಾರಿ ಭಾಸ್ಕರ್ ರಾವ್ ಅವರನ್ನ ಪೊಲೀಸ್ ಕಮಿಷನರ್ ಆಗಿ ಮುಖ್ಯಮಂತ್ರಿಗಳು ನೇಮಕ ಮಾಡಿದಕ್ಕೆ ಅಲೋಕ್ ಕುಮಾರ್ ಅಸಮಾಧನಗೊಂಡಿದ್ರು..ಇದನ್ನ ಸಿಎಟಿ ನಲ್ಲಿ ಪ್ರಶ್ನೇ ಸಹ ಮಾಡಿದ್ದರು

ಅಲೋಕ್ ಕುಮಾರ್ ಅವರು ಸರಕಾರದ ವಿರುದ್ಧ ಕಮಿಷನರ್ ಹುದ್ದೆಯಿಂದ ಬದಲಾವಣೆ ಮಾಡಿದನ್ನ ಪ್ರಶ್ನೀಸಿ ಸಿಎಟಿ ಮೆಟ್ಟಿಲು ಹತ್ತುತ್ತಿದ್ದಂತೆ ಟೆಲಿಪೋನ್ ಕದ್ದಾಲಿಕೆ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಾ ಹಲವು ಪ್ರಭಾವಿ ರಾಜಾಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆಯೆ ಸಂಶಯ ಮೂಡಿಸುತ್ತಿತ್ತು.

ಅಲೋಕ್ ಕುಮಾರ್ ಅವರು ಪೊಲೀಸ್ ಕಮಿಷನರ್ ಆಗಿದ್ದ ಅವಧಿಯಲ್ಲಿ ಟೆಲಿಫೋನ್ ಕದ್ದಾಲಿಕೆ ಪ್ರಕರಣ ನಡೆದಿರುವುದರಿಂದ ಅವರ ಪಾತ್ರವು ಕದ್ದಾಲಿಕೆ ಪಾತ್ರದಲ್ಲಿ ಇರಬಹುದೇ ಅನ್ನೋ ಅನುಮಾನವನ್ನ ರಾಜಕಾರಣಿ ಗಳು ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದರು

Body:KN_BNG_09_PHONO_ALOK_7204498

Conclusion:KN_BNG_09_PHONO_ALOK_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.