ETV Bharat / state

ಮೈತ್ರಿ ಸರ್ಕಾರಕ್ಕೆ ನಾಳೆಗೆ ಒಂದು ವರ್ಷ... ಲೋಕ ಫಲಿತಾಂಶ ನಿರ್ಧರಿಸುತ್ತಾ ಹೆಚ್​ಡಿಕೆ ಭವಿಷ್ಯ? - Congress

ಮೈತ್ರಿ ಸರ್ಕಾರದಲ್ಲಿನ ನಿರಂತರ ಗೊಂದಲ ಹಾಗೂ ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿ ತೋರಿಸುತ್ತಲೇ ಬಂದಿರುವ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಮೇ 23ಕ್ಕೆ ಒಂದು ವರ್ಷ ತುಂಬಲಿದೆ. ಒಂದೆಡೆ ನಾಳೆ ಲೋಕಸಭೆಯ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇನ್ನೊಂದೆಡೆ ರಾಜ್ಯದಲ್ಲಿ ದೋಸ್ತಿ ಸರ್ಕಾರ ಹಲವು ಸಮಸ್ಯೆಗಳ ನಡುವೆಯೇ ಒಂದು ವರ್ಷ ಪೂರೈಸುತ್ತಿದೆ.

ಸಂಗ್ರಹ ಚಿತ್ರ
author img

By

Published : May 22, 2019, 5:53 PM IST

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಮೇ 23 ಎರಡು ಕಾರಣಗಳಿಂದ ಬಹಳ ಮುಖ್ಯವೆನಿಸಿದೆ. ಹಲವು ಗೊಂದಲಗಳ ಮಧ್ಯೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರಕ್ಕೆ ನಾಳೆಗೆ ಒಂದು ವರ್ಷ ತುಂಬಲಿದೆ.

ಅತಂತ್ರ ಫಲಿತಾಂಶದ ಹಿನ್ನೆಲೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ರಾಜ್ಯಪಾಲರು ಅಧಿಕಾರದ ಗದ್ದುಗೆಯ ಮೇಲೆ ಕೂರಿಸಿದ್ದರಾದರೂ, ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಬಿಎಸ್​ವೈ ತೀನ್ ದಿನ್ ಕಾ ಸುಲ್ತಾನ್ ಅನ್ನಿಸಿಕೊಂಡಿದ್ದರು. ಅವರು ಬಹುಮತ ಸಾಬೀತುಪಡಿಸಲು ವಿಫಲರಾದ ಬೆನ್ನಲ್ಲೇ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದ ಗದ್ದುಗೆಗೇರಿದ್ದಲ್ಲದೆ ನಾಳೆಗೆ ಒಂದು ವರ್ಷ ಪೂರೈಸುತ್ತಿದೆ.

ಅಧಿಕಾರಕ್ಕೆ ಬಂದ ಆರಂಭದಲ್ಲೇ ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾದಂತಹ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರಾದರೂ ಕಳೆದೊಂದು ವರ್ಷದಲ್ಲಿ ಅವರ ಸರ್ಕಾರ ಕುಂಟುತ್ತಲೇ ಸಾಗಿದ್ದು ಗೊತ್ತಿರುವ ಸಂಗತಿ. ಹೇಗಾದರೂ ಮಾಡಿ ಕಾಂಗ್ರೆಸ್​ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಸೆಳೆದು ಮರಳಿ ಅಧಿಕಾರದ ಗದ್ದುಗೆಯ ಮೇಲೆ ಕೂರಬೇಕೆಂಬ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆಕಾಂಕ್ಷೆ ನಿರಂತರವಾಗಿ ಮುಂದುವರೆದಿದೆ.

ಹಾಗೆಯೇ ಕಾಂಗ್ರೆಸ್ ಪಕ್ಷದ ಶಾಸಕರೂ ಕೂಡ ಬಿಜೆಪಿ ಕಡೆ ಇನ್ನೇನು ಹೋಗಿಯೇ ಬಿಟ್ಟರು ಎನ್ನುವಂತಹ ಸನ್ನಿವೇಶಗಳು ಹಲವು ಬಾರಿ ನಿರ್ಮಾಣವಾಗಿದ್ದಲ್ಲದೆ ಕೆಲ ಕಾಲದ ಹಿಂದೆ ಯಡಿಯೂರಪ್ಪ ಅವರ ಆಪರೇಷನ್ ಕಮಲದ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಬಹಿರಂಗಗೊಳಿಸಿ ಬಿಜೆಪಿಗೆ ಶಾಕ್ ಕೊಟ್ಟಿದ್ದರು. ಇದಾದ ನಂತರ ಸರ್ಕಾರವನ್ನು ಬೀಳಿಸುವ ಬಿಜೆಪಿಯ ವೇಗ ಕಡಿಮೆಯಾಯಿತಾದರೂ ಅದಿನ್ನೂ ನಿಂತಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಅದು ವೇಗವನ್ನೂ ಪಡೆಯಬಹುದು ಅಥವಾ ಮಂದಗತಿಗೂ ಇಳಿಯಬಹುದು ಎನ್ನಲಾಗ್ತಿದೆ.

ಈ ಮಧ್ಯೆ ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರವನ್ನು ಹೆಚ್ಚಾಗಿ ಕಾಡಿದ್ದು ಅಂಗಪಕ್ಷಗಳ ನಡುವಿಣ ಕದನ. ಸರ್ಕಾರದ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷಿಸಲಾಗಿದೆ ಎಂದು ಕೈ ಪಾಳೆಯದ ಶಾಸಕರು ಮೇಲಿಂದ ಮೇಲೆ ಗುಡುಗುತ್ತಲೇ ಬಂದರು. ಇವತ್ತಿಗೂ ತಮಗೆ ಸಿದ್ದರಾಮಯ್ಯನವರೇ ಸಿಎಂ ಎಂದು ಅವರ ಬೆಂಬಲಿಗರು ಪದೇ ಪದೇ ಪುನರುಚ್ಛರಿಸುತ್ತಲೇ ಬಂದಿದ್ದಾರೆ. ಇದು ತೀವ್ರವಾದಾಗ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ದೂರು ನೀಡಿದ್ದೂ ಆಯಿತು. ಹೀಗೆ ತಮಗೆ ದೂರು ಬಂದಾಗಲೆಲ್ಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಂದ ಹಿಡಿದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ತನಕ ಎಲ್ಲರ ಬಳಿಯೂ ಮಾತನಾಡುತ್ತಿದ್ದ ರಾಹುಲ್​ ಗಾಂಧಿ, ಯಾವ ಕಾರಣಕ್ಕೂ ಮೈತ್ರಿಕೂಟ ಸರ್ಕಾರಕ್ಕೆ ತೊಂದರೆ ಆಗಬಾರದೆಂದು ಹೇಳುತ್ತಲೇ ಬಂದಿದ್ದಾರೆ.

ಒಂದು ಹಂತದಲ್ಲಿ ಲೋಕಸಭಾ ಚುನಾವಣೆ ತಮಗೆ ನಿರ್ಣಾಯಕವಾಗಿದ್ದು, ಈ ಚುನಾವಣೆಯ ಫಲಿತಾಂಶ ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ. ಹೀಗಾಗಿ ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಒಗ್ಗೂಡಿ ದುಡಿಯಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ರಾಹುಲ್​ ಹೇಳಿದ್ದಾರೆ.

ಹೀಗಾಗಿ ತಮ್ಮ ಬೆಂಬಲಿಗ ಶಾಸಕರು ಪದೇ ಪದೇ ಪಕ್ಷ ಬಿಟ್ಟು ಹೊರಡುವ ಪ್ರಯತ್ನ ಮಾಡಿದರೂ ಅವರನ್ನು ಕೈಬಿಡದ ಮಾಜಿ ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಪಕ್ಷಕ್ಕೆ ವ್ಯತಿರಿಕ್ತವಾದರೆ ಏನು ಮಾಡುತ್ತಾರೆ? ಎನ್ನುವ ಪ್ರಶ್ನೆ ಕಾಡತೊಡಗಿದೆ. ಹಾಗೆಯೇ ಮತದಾನಕ್ಕೆ ಬಳಸಲಾದ ಇವಿಎಂ ಯಂತ್ರಗಳ ವಿರುದ್ಧ ಮಂಗಳವಾರ ದೆಹಲಿಯಲ್ಲಿ ನಡೆದಿದ್ದ ಪ್ರತಿಪಕ್ಷಗಳ ಪ್ರತಿಭಟನೆಗೆ ಗೈರು ಹಾಜರಾಗುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೊಸ ಆಟಕ್ಕೆ ಇಳಿಯಬಹುದೇ? ಎಂಬ ಸಂದೇಹ ರಾಜಕೀಯ ವಲಯದಲ್ಲಿ ಮೂಡಿದೆ.

ಸಹಜವಾಗಿ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ತನ್ನ ಸಾಧನೆಗಳ ಬಗ್ಗೆ ಅದು ಬಣ್ಣಿಸುವುದು, ಸಮರ್ಥನೆ ಮಾಡಿಕೊಳ್ಳುವುದು ಒಂದು ಸಂಪ್ರದಾಯವೇ ಆಗಿದ್ದರೂ ಈ ಬಾರಿ ಅಂತಹ ಯಾವ ಸಮರ್ಥನೆ, ಬಣ್ಣನೆಗಳೂ ವ್ಯಕ್ತವಾಗದಿರುವುದು ಹಲವು ಸಂಶಗಳಿಗೆ ಎಡೆಮಾಡಿಕೊಟ್ಟಿದೆ.

Intro:ಬೆಂಗಳೂರು : ಮೈತ್ರಿಕೂಟದ ಅಂಗಪಕ್ಷಗಳ ಸತತ ಕಚ್ಚಾಟದ ನಡುವೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ನಾಳೆಗೆ (ಮೇ 23 ರಂದು ) ಒಂದು ವರ್ಷ ತುಂಬಲಿದೆ.Body:ಅತಂತ್ರ ಫಲಿತಾಂಶದ ಹಿನ್ನೆಲೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಆರಿಸಿ ಬಂದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ರಾಜ್ಯಪಾಲರು ಅಧಿಕಾರದ ಗದ್ದುಗೆಯ ಮೇಲೆ ಕೂರಿಸಿದ್ದರಾದರೂ, ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಯಡಿಯೂರಪ್ಪ ತೀನ್ ದಿನ್ ಕಾ ಸುಲ್ತಾನ್ ಅನ್ನಿಸಿಕೊಂಡಿದ್ದರು. ಅವರು ಬಹುಮತ ಸಾಬೀತುಪಡಿಸಲು ವಿಫಲರಾದ ಬೆನ್ನಲ್ಲೇ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದ ಗದ್ದುಗೆಗೇರಿದ್ದಲ್ಲದೆ ನಾಳೆಗೆ ಒಂದು ವರ್ಷ ಪೂರೈಸುತ್ತಿದೆ.
ಅಧಿಕಾರಕ್ಕೆ ಬಂದ ಆರಂಭದಲ್ಲೇ ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾದಂತಹ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರಾದರೂ ಕಳೆದೊಂದು ವರ್ಷದಲ್ಲಿ ಅವರ ಸರ್ಕಾರ ಕುಂಟುತ್ತಲೇ ಸಾಗಿದ್ದು ಗೊತ್ತಿರುವ ಸಂಗತಿ. ಹೇಗಾದರೂ ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಸೆಳೆದು ಮರಳಿ ಅಧಿಕಾರದ ಗದ್ದುಗೆಯ ಮೇಲೆ ಕೂರಬೇಕೆಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆಕಾಂಕ್ಷೆ ನಿರಂತರವಾಗಿ ಮುಂದುವರೆದಿದ್ದು, ಅದು ಈಗಲೂ ಚಾಲ್ತಿಯಲ್ಲಿದೆ. ಹಾಗೆಯೇ ಕಾಂಗ್ರೆಸ್ ಪಕ್ಷದ ಶಾಸಕರೂ ಬಿಜೆಪಿ ಕಡೆ ಇನ್ನೇನು ಹೋಗಿಯೇ ಬಿಟ್ಟರು ಎನ್ನುವಂತಹ ಸನ್ನಿವೇಶಗಳು ಹಲವು ಬಾರಿ ನಿರ್ಮಾಣವಾಗಿದ್ದಲ್ಲದೆ ಕೆಲ ಕಾಲದ ಹಿಂದೆ ಯಡಿಯೂರಪ್ಪ ಅವರ ಆಪರೇಷನ್ ಕಮಲದ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಬಹಿರಂಗಗೊಳಿಸಿ ಬಿಜೆಪಿಯನ್ನು ದಿಗ್ಭ್ರಮೆಗೀಡು ಮಾಡಿದ್ದರು. ಇದಾದ ನಂತರ ಸರ್ಕಾರವನ್ನು ಬೀಳಿಸುವ ಬಿಜೆಪಿಯ ವೇಗ ಕಡಿಮೆಯಾಯಿತಾದರೂ ಅದಿನ್ನೂ ನಿಂತಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಅದು ವೇಗವನ್ನೂ ಪಡೆಯಬಹುದು ಅಥವಾ ಮಂದಗತಿಗೂ ಇಳಿಯಬಹುದು.
ಈ ಮಧ್ಯೆ ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರವನ್ನು ಹೆಚ್ಚಾಗಿ ಕಾಡಿದ್ದು ಅಂಗಪಕ್ಷಗಳ ನಡುವಣ ಕದನ. ಸರ್ಕಾರದ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷಿಸಲಾಗಿದೆ ಎಂದು ಕೈ ಪಾಳೆಯದ ಶಾಸಕರು ಮೇಲಿಂದ ಮೇಲೆ ಗುಡುಗುತ್ತಲೇ ಬಂದರು. ಇವತ್ತಿಗೂ ತಮಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಅವರ ಬೆಂಬಲಿಗರು ಪದೇ ಪದೇ ಪುನರುಚ್ಚರಿಸುತ್ತಲೇ ಬಂದರು. ಇದು ತೀವ್ರವಾದಾಗ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರದಾನಿ ಹೆಚ್. ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ದೂರು ನೀಡಿದ್ದೂ ಆಯಿತು. ಹೀಗೆ ತಮಗೆ ದೂರು ಬಂದಾಗಲೆಲ್ಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡ ಕೆ.ಸಿ.ವೇಣುಗೋಪಾಲ್ ಅವರಿಂದ ಹಿಡಿದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ತನಕ ಎಲ್ಲರ ಬಳಿಯೂ ಮಾತನಾಡುತ್ತಿದ್ದ ರಾಹುಲ್‍ಗಾಂಧಿ, ಯಾವ ಕಾರಣಕ್ಕೂ ಮೈತ್ರಿಕೂಟ ಸರ್ಕಾರಕ್ಕೆ ತೊಂದರೆಯಾಗ ಬಾರದೆಂದು ಹೇಳುತ್ತಲೇ ಬಂದರು. ಒಂದು ಹಂತದಲ್ಲಿ ಲೋಕಸಭಾ ಚುನಾವಣೆ ನಮಗೆ ನಿರ್ಣಾಯಕವಾಗಿದ್ದು, ಆ ಚುನಾವಣೆ ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ. ಹೀಗಾಗಿ ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಒಗ್ಗೂಡಿ ದುಡಿಯಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೇ ಹೇಳಿದ್ದರು. ಹೀಗಾಗಿ ತಮ್ಮ ಬೆಂಬಲಿಗ ಶಾಸಕರು ಪದೇ ಪದೇ ಪಕ್ಷ ಬಿಟ್ಟು ಹೊರಡುವ ಪ್ರಯತ್ನ ಮಾಡಿದರೂ ಬಿಡದ ಮಾಜಿ ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಪಕ್ಷಕ್ಕೆ ವ್ಯತಿರಿಕ್ತವಾದರೆ ಏನು ಮಾಡುತ್ತಾರೆ? ಎನ್ನುವ ಪ್ರಶ್ನೆ ಕಾಡತೊಡಗಿದೆ. ಹಾಗೆಯೇ ಮತದಾನಕ್ಕೆ ಬಳಸಲಾದ ಇವಿಎಂ ಯಂತ್ರಗಳ ವಿರುದ್ಧ ಮಂಗಳವಾರ ದೆಹಲಿಯಲ್ಲಿ ನಡೆದ ಪ್ರತಿಪಕ್ಷಗಳ ಪ್ರತಿಭಟನೆಗೆ ಗೈರು ಹಾಜರಾಗುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ಆಟಕ್ಕೆ ಇಳಿಯಬಹುದೇ? ಎಂಬ ಸಂದೇಹ ರಾಜಕೀಯ ವಲಯಗಳನ್ನು ಕಾಡತೊಡಗಿದೆ. ಹೀಗೆ ಅಂಗಪಕ್ಷಗಳಲ್ಲಿನ ನಿರಂತರ ಕಚ್ಚಾಟ ಹಾಗೂ ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿ ತೋರಿಸುತ್ತಲೇ ಬಂದಿರುವ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಮೇ 23 ರಂದು ಒಂದು ವರ್ಷ ತುಂಬಿದೆ. ಸಹಜವಾಗಿ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ತನ್ನ ಸಾಧನೆಗಳ ಬಗ್ಗೆ ಅದು ಬಣ್ಣಿಸುವುದು, ಸಮರ್ಥನೆ ಮಾಡಿಕೊಳ್ಳುವುದು ಒಂದು ಸಂಪ್ರದಾಯವೇ ಆಗಿದ್ದರೂ ಈ ಬಾರಿ ಅಂತಹ ಯಾವ ಸಮರ್ಥನೆ, ಬಣ್ಣನೆಗಳೂ ವ್ಯಕ್ತವಾಗದಿರುವುದು ಹಲವು ಸಂಶಯ ಕಾಡುವಂತೆ ಮಾಡಿದೆ.

Conclusion:ಮುನೇಗೌಡ, ಬೆಂಗಳೂರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.