ETV Bharat / state

ಭೋವಿ ಅಭಿವೃದ್ಧಿ ನಿಗಮದಲ್ಲಿ ಲೂಟಿಗೆ ಯತ್ನ ಆರೋಪ: ನಿಗಮ ಮಂಡಳಿ ನಿರ್ದೇಶಕನ ಬಂಧನಕ್ಕೆ ಪೊಲೀಸರ ಶೋಧ - ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕನ ಬಂಧನಕ್ಕೆ ಪೊಲೀಸರ ಶೋಧ

ಸರ್ಕಾರದ ಉದ್ಯಮಶೀಲತಾ ಯೋಜನೆಯಡಿ ಸಾಲಸೌಲಭ್ಯ ಕೋರಿ ಭೋವಿ ನಿಗಮಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದವು. ಈ ಪೈಕಿ ನಕಲಿ ಜಾತಿ ಪತ್ರ ಹಾಗೂ ಅಂಕಪಟ್ಟಿ ಸಲ್ಲಿಸಿದ್ದ ಹಲವು ಅರ್ಜಿಗಳು ತಿರಸ್ಕೃತವಾಗಿದ್ದವು. ವಿವಿಧ‌ ಜಿಲ್ಲೆಗಳಿಂದ ಬಂದಿದ್ದ ಅರ್ಜಿಗಳ ಪೈಕಿ‌ 60 ಮಂದಿ‌ ಫಲಾಪೇಕ್ಷಿಗಳ ಅರ್ಜಿಗಳಿಗೆ ವ್ಯವಸ್ಥಾಪಕಿ ನಿರ್ದೇಶಕಿ ಲೀಲಾವತಿ ಹಾಗೂ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಅವರ ಸಹಿಗಳನ್ನು ಈ ಆರೋಪಿ ಫೋರ್ಜರಿ ಮಾಡಿ ಮಂಜೂರಾತಿಗೆ ಸಲ್ಲಿಸಿದ್ದ ಎನ್ನಲಾಗ್ತಿದೆ.

ಭೋವಿ ಅಭಿವೃದ್ಧಿ ನಿಗಮದಲ್ಲಿ ಲೂಟಿಗೆ ಯತ್ನ
ಭೋವಿ ಅಭಿವೃದ್ಧಿ ನಿಗಮದಲ್ಲಿ ಲೂಟಿಗೆ ಯತ್ನ
author img

By

Published : May 4, 2022, 3:22 PM IST

ಬೆಂಗಳೂರು: ನಕಲಿ ಸಹಿ ಮಾಡಿ ಸರ್ಕಾರಿ ಹಣ ಮಂಜೂರಾತಿಗೆ ಯತ್ನಿಸಿ ಕೆಎಎಸ್ ಅಧಿಕಾರಿಗಳಿಗೆ ಬೆದರಿಸಿದ್ದ ಆರೋಪದಡಿ ಭೋವಿ ಅಭಿವೃದ್ಧಿ ನಿಗಮ ನಿರ್ದೇಶಕ ರವಿಕುಮಾರ್ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಅವರ ಫೋರ್ಜರಿ ಸಹಿ ಮಾಡಿ ಹಣ ಕಬಳಿಸಲು ಯತ್ನಿಸಿದ್ದ ಆರೋಪದಡಿ ಪರಾರಿಯಾಗಿರುವ ರವಿಕುಮಾರ್ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಸರ್ಕಾರದ ಉದ್ಯಮಶೀಲತಾ ಯೋಜನೆಯಡಿ ಸಾಲಸೌಲಭ್ಯ ಕೋರಿ ಭೋವಿ ನಿಗಮಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದವು. ಈ ಪೈಕಿ ನಕಲಿ ಜಾತಿ ಪತ್ರ ಹಾಗೂ ಅಂಕಪಟ್ಟಿ ಸಲ್ಲಿಸಿದ್ದ ಹಲವು ಅರ್ಜಿಗಳು ತಿರಸ್ಕೃತವಾಗಿದ್ದವು. ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕಲಬುರಗಿ, ವಿಜಯಪುರ, ಚಿಕ್ಕಬಳ್ಳಾಪುರ, ಬಳ್ಳಾರಿ ಸೇರಿ ವಿವಿಧ‌ ಜಿಲ್ಲೆಗಳಿಂದ ಬಂದಿದ್ದ ಅರ್ಜಿಗಳ ಪೈಕಿ‌ 60 ಮಂದಿ‌ ಫಲಾಪೇಕ್ಷಿಗಳ ಅರ್ಜಿಗಳಿಗೆ ವ್ಯವಸ್ಥಾಪಕಿ ನಿರ್ದೇಶಕಿ ಲೀಲಾವತಿ ಹಾಗೂ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಅವರ ಸಹಿಗಳನ್ನ ಫೋರ್ಜರಿ ಮಾಡಿ ಮಂಜೂರಾತಿಗೆ ಸಲ್ಲಿಸಿದ್ದ ಎನ್ನಲಾಗ್ತಿದೆ.

ಇದನ್ನೂ ಓದಿ: ಹಣ ಕೊಟ್ಟವರು, ಪಡೆದವರು, ಮಧ್ಯವರ್ತಿಗಳು ಎಲ್ಲರೂ ಜೈಲಿಗೆ ಹೋಗ್ತಾರೆ: ಆರಗ ಜ್ಞಾನೇಂದ್ರ

ಅಲ್ಲದೆ ನಿಗಮಕ್ಕೆ ಸೇರಿದ್ದ ಐಸಿಐಸಿಐ ಬ್ಯಾಂಕ್​ ಚೆಕ್​ಗಳು ಕಳೆದ ಮಾರ್ಚ್ ನಲ್ಲಿ ಕಳ್ಳತನವಾಗಿದ್ದವು. ಈ ಬಗ್ಗೆ ಐಸಿಐಸಿಐ ಬ್ಯಾಂಕ್ ಗೆ ಭೋವಿ ನಿಗಮ ದೂರು ನೀಡಿತ್ತು‌.‌ ಕಳ್ಳತನವಾಗಿದ್ದ ಚೆಕ್ ಬಳಸಿ ರಾಯಚೂರು ಜಿಲ್ಲೆಗೆ 52 ಲಕ್ಷ ರೂ. ಜಮಾ ಮಾಡಿರುವ ಆರೋಪ ಮೇಲೆ ರವಿಕುಮಾರ್ ಕೇಳಿ ಬಂದಿತ್ತು. ಇತ್ತೀಚೆಗೆ ನಡೆದ ಭೋವಿ ಅಭಿವೃದ್ದಿ ನಿಗಮ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರವಿಕುಮಾರ್ ಅಕ್ರಮ ಬೆಳಕಿಗೆ ಬಂದಿತ್ತು.

ರವಿಕುಮಾರ್ ಅಕ್ರಮದ ಬಗ್ಗೆ ಪ್ರಶ್ನಿಸಲು ಮುಂದಾದ ಕೆ.ಎ.ಎಸ್ ಅಧಿಕಾರಿಗಳಿಗೆ ರವಿ ಧಮ್ಕಿ‌ ಹಾಕಿದ್ದ ಎನ್ನಲಾಗ್ತಿದೆ. ಸದ್ಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ IPC 420, 506, 504, 509, 380, 465, 468, 471 ಅಡಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.