ETV Bharat / state

ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕ ಸೈಟುಗಳ ಮಾರಾಟ.. ಕಲ್ಲುಬಾಳು ಗ್ರಾಪಂ ಸದಸ್ಯ ಸದಾನಂದ ಆರೋಪ - ಈಟಿವಿ ಭಾರತ ಕನ್ನಡ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಕಲುಬಾಳು ಗ್ರಾಮಪಂಚಾಯತ್ ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ನಿವೇಶನಗಳನ್ನು ನಿರ್ಮಾಣ್ ಶೆಲ್ಟರ್ ರಿಯಲ್ ಎಸ್ಟೇಟ್ ಸಂಸ್ಥೆ ಮಾರಾಟ ಮಾಡಿದೆ ಎಂದು ಕಲ್ಲುಬಾಳು ಗ್ರಾಮ ಪಂಚಾಯತ್‌ ಸದಸ್ಯ ಸದಾನಂದ ಆರೋಪ ಮಾಡಿದ್ದಾರೆ.

sale-of-sites-by-creating-fake-documents-in-bengaluru
ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಸೈಟುಗಳ ಮಾರಾಟ : ಕಲ್ಲುಬಾಳು ಗ್ರಾ.ಪಂ ಸದಸ್ಯ ಸದಾನಂದ ಆರೋಪ
author img

By

Published : Nov 3, 2022, 7:05 PM IST

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಕಲುಬಾಳು ಗ್ರಾಮಪಂಚಾಯತ್ ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ನಿವೇಶನಗಳನ್ನು (10.5 ಎಕರೆ) ನಿರ್ಮಾಣ್ ಶೆಲ್ಟರ್ ರಿಯಲ್ ಎಸ್ಟೇಟ್ ಸಂಸ್ಥೆ ಮಾರಾಟ ಮಾಡಿದೆ. ನಿವೇಶನ ಖರೀದಿಸಿದವರಿಗೆ 150 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ ಎಂದು ಕಲುಬಾಳು ಗ್ರಾಮ ಪಂಚಾಯತ್‌ ಸದಸ್ಯ ಸದಾನಂದ ಆರೋಪಿಸಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನೂರಾರು ಕೋಟಿ ರೂಪಾಯಿ ಅಕ್ರಮ ನಡೆದಿರುವ ಪ್ರಕರಣದ ಬಗ್ಗೆ ತಕ್ಷಣವೇ ಬಿ.ಎಂ.ಆರ್.ಡಿ.ಎ ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕೂಡಲೇ ಎಫ್.ಐ.ಆರ್ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದರು.

ಈ ವಂಚನೆಯಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ಬಿಲ್ಡರ್ಸ್ ಗಳ ಜೊತೆ ಶಾಮೀಲಾಗಿರುವುದು ತಿಳಿದುಬಂದಿದೆ. ಇದರಿಂದ ಜೀವನ ಪರ್ಯಂತ ಹಣ ಗಳಿಸಿ ಕೂಡಿಟ್ಟಿದ್ದ ಸಾಮಾನ್ಯ ಜನತೆಗೆ ಮೋಸವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ಪ್ರತಿಯೊಂದು ಬಡಾವಣೆಗಳಲ್ಲಿ 25 ರಿಂದ 50 ಕೋಟಿ ರೂ. ವಂಚನೆ: ನಿಸರ್ಗ, ನಂದನವನ, ನಿರ್ಮಲ ನಗರ ಸೇರಿದಂತೆ ಐದು ಬಡಾವಣೆಗಳಲ್ಲಿ ಇಂತಹ ಭಾರಿ ಮೋಸ ನಡೆದಿದೆ. ಪ್ರತಿಯೊಂದು ಬಡಾವಣೆಗಳಲ್ಲಿ ಕನಿಷ್ಠ 25 ರಿಂದ 50 ಕೋಟಿ ರೂಪಾಯಿಯಷ್ಟು ವಂಚನೆಯಾಗಿದೆ. ಸರ್ವೇ ಮಾಡಿದಾಗ ಒತ್ತುವರಿಯಾಗಿ ಬಿ.ಎಂ.ಆರ್.ಡಿ.ಎ ವ್ಯಾಪ್ತಿಯ ಪಂಚಾಯತ್ ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಮಾಡಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಉಮಾ ಮಹದೇವ್ ಮತ್ತು ಅತೀಕ್ ತನಿಖೆಗೆ ಆದೇಶಿಸಿದ್ದಾರೆ. ಇದರಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

10.5 ಎಕರೆ ಪದೇಶ ದುರ್ಬಳಕೆ : ಬಡಾವಣೆಗಳ ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶದ ಸ್ಥಳಗಳನ್ನು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಲಾಗಿದೆ. ಇಂತಹ ಸುಮಾರು 10.5 ಎಕರೆ ಪ್ರದೇಶವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆನೇಕಲ್ ಕಾರ್ಯನಿರ್ವಾಹಕ ಅಧಿಕಾರಿಗೆ ಇಂತಹ ನಿವೇಶನಗಳ ಖಾತೆ ವಜಾಗೊಳಿಸುವಂತೆ ಮನವಿ ಮಾಡಲಾಗಿದೆ. ಇಂತಹ ನಿವೇಶನಗಳನ್ನು ಖರೀದಿಸಿರುವವರು ಬಹುತೇಕ ಮಂದಿ ಅಮಾಯಕರಾಗಿದ್ದು, ಇನ್ನೂ ಕೆಲವರು ವಿದೇಶದಲ್ಲಿದ್ದಾರೆ. ಸಿಎ ನಿವೇಶನ ಮಾರಾಟ ಮಾಡಿದ್ದಾರೆ. ಆದರೆ ಈ ಅಕ್ರಮದ ಬಗ್ಗೆ ತಾಲ್ಲೂಕು ಪಂಚಾಯತ್‌ ಸಿಇಒ ತಡೆಯಾಜ್ಞೆ ನೀಡಿ ಪ್ರಕರಣವನ್ನು ಪದೇ ಪದೇ ಮುಂದೂಡುತ್ತಿದ್ದರು. ಆದರೆ ಇದೀಗ ತಡೆಯಾಜ್ಞೆ ತೆರವುಗೊಂಡಿದೆ. ಇಂತಹ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೂ ಭಾರಿ ನಷ್ಟವಾಗಿದೆ. ನಿಜವಾಗಿ ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸದಾನಂದ ಆಗ್ರಹಿಸಿದರು.

ಇದನ್ನೂ ಓದಿ : ರಾಜ್ಯದಲ್ಲಿ ಹಂಚಿಕೆಯಾದ 9,572 ಎಕರೆ ಭೂಮಿ ಬಳಕೆ ಮಾಡದ ಉದ್ಯಮಿಗಳು: 1,117 ಕೈಗಾರಿಕೆಗಳಿಗೆ ನೋಟಿಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.