ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ನಿನ್ನೆ ವಿಚಾರಣೆಗೆ ಹಾಜರಾಗಿದ್ದ ನಿರೂಪಕ ಅಕುಲ್ ಬಾಲಾಜಿಯ ಎರಡು ಮೊಬೈಲ್ಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಕುಲ್ ಬಳಸುತ್ತಿದ್ದ ಐಫೋನ್ ಮೊಬೈಲ್ ಸೇರಿ 2 ಮೊಬೈಲ್, ಯುವರಾಜ್, ಸಂತೋಷ್ ಬಳಸುತ್ತಿದ್ದ ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್ಗಳನ್ನು ಮಡಿವಾಳದ ಟೆಕ್ನಿಕಲ್ ಸೆಲ್ಗೆ ರವಾನಿಸಿ ಸಂದೇಶ ಹಾಗೂ ಕಾಂಟಾಕ್ಟ್ ನಂಬರ್ ಡಿಲಿಟ್ ಸಾಧ್ಯತೆ ಹಿನ್ನೆಲೆ ತನಿಖಾಧಿಕಾರಿಗಳು ರಿಟ್ರೀವ್ ಮುಂದಾಗಿದ್ದಾರೆ. ನಿನ್ನೆ ಏಳು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಚಿನ್ನದ ವ್ಯಾಪಾರಿಯಾಗಿದ್ದ ಆರೋಪಿ ವೈಭವ್ ಜೈನ್ ಸಂಪರ್ಕದ ಕುರಿತಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ನಿನ್ನೆ ಮೂವರು ಸೆಲೆಬ್ರಿಟಿಗಳ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಸುಮಾರು 45ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದಾರೆ ಎನ್ನಲಾಗ್ತಿದೆ. ಈ ವೇಳೆ ಬಹುತೇಕರು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರೆ ಇನ್ನೂ ಕೆಲವು ಪ್ರಶ್ನೆಗಳಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ. ಪಾರ್ಟಿಗಳನ್ನು ಎಲ್ಲಿ ನಡೆಸಲಾಗಿತ್ತು, ಅವುಗಳಲ್ಲಿ ಯಾರು ಯಾರು ಪಾಲ್ಗೊಂಡಿದ್ದರು. ಪಾರ್ಟಿಗಳಲ್ಲಿ ಡ್ರಗ್ಸ್ ಬಳಕೆಯಾಗಿರುವ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಹೇಳಲಾಗ್ತಿದೆ.