ಬೆಂಗಳೂರು: ಲಾಕ್ಡೌನ್ ಪರಿಣಾಮ ಹಸಿವಿನಿಂದ ಬಳಲುತ್ತಿದ್ದ ಸಾವಿರಾರು ಜನರಿಗೆ ಅಖಂಡ ಭಾರತ ಸಂಘಟನೆ ಸದಸ್ಯರು ದಿನಸಿ ಕಿಟ್ ವಿತರಿಸಿದರು.
ಕೊರೊನಾದಿಂದ ಸಾಕಷ್ಟು ಜನರು ಆಹಾರ ಸಮಸ್ಯೆ ಎದುರಿಸುತ್ತಿದ್ದು, ಇದನ್ನು ಮನಗಂಡ ಅಖಿಲ ಭಾರತ ಸಂಘಟನೆಯ ಸದಸ್ಯರು ಜನರ ಸಹಾಯಕ್ಕೆ ಮುಂದಾಗಿದ್ದಾರೆ. ವಿವಿಧ ಕಡೆಗಳಿಂದ ಹಣ ಸಂಗ್ರಹಣೆ ಮಾಡಿ ಇಲ್ಲಿಯವರೆಗೆ 8 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಲು ಸಾಧ್ಯವಾಗಿದೆ. ಇನ್ನು ಈ ಸಂಘದ ಕಾರ್ಯಕ್ಕೆ ವಿವಿಧ ಸಂಘಟನೆಗಳು ಸಾಥ್ ನೀಡಿವೆ.
ಬೆಂಗಳೂರು, ತುಮಕೂರು, ಯಾದಗಿರಿ, ಮೈಸೂರು ಸೇರಿದಂತೆ ದೇಶದ ಹೊರ ರಾಜ್ಯಗಳಲ್ಲಿ ಬಡತನದಿಂದ ಬಳಲುತ್ತಿದ್ದ ಕುಟುಂಬಗಳಿಗೆ ಅಖಂಡ ಭಾರತ ಸಂಘಟನೆ ತನ್ನ ಕೈಲಾದಷ್ಟು ಸಹಾಯ ಮಾಡಿರುವುದು ಶಾಘ್ಲನೀಯ. ಸಮಾಜ ಸೇವೆ ಮುಂದುವರೆಸಿರುವ ಸಂಘಟನೆಯು ಇಂದು ಮಲೆಮಹಾದೇಶ್ವರ ಬೆಟ್ಟದ ಅಸುಪಾಸಿನಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ.
ಇದುವರೆಗೂ ಈ ಸಂಘಟನೆ 62 ಸಾವಿರ ಆಹಾರ ಪೊಟ್ಟಣ, 38 ಸಾವಿರ ಮಾಸ್ಕ್, 2200 ಸ್ಯಾನಿಟೈಸರ್, 210 ಕುಟುಂಬಗಳಿಗೆ ಔಷಧಿ ವಿತರಣೆ, 134 ಬಾರಿ ರಕ್ತದಾನ ಶಿಬಿರ ಆಯೋಜನೆ ಹಾಗೂ ಹಿರಿಯ ನಾಗರಿಕರಿಗೆ ವೈದ್ಯಕೀಯ ನೆರವು ನೀಡುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.