ETV Bharat / state

ರಾಜ್ಯದ ಬಹುತೇಕ ನಗರ-ಪಟ್ಟಣಗಳಲ್ಲಿ ವಾಯು ಗುಣಮಟ್ಟ ಕುಸಿತ - ರಾಜ್ಯ ರಾಜಧಾನಿ ಬೆಂಗಳೂರು

ವಾಯು ಗುಣಮಟ್ಟದಲ್ಲಿ ಉತ್ತಮ ಸ್ಥಾನದಿಂದ ಸಮಾಧಾನಕರ ಸ್ಥಾನಕ್ಕೆ ಕುಸಿತ ಕಂಡಿತ್ತು. ಇದೀಗ ಕೆಲ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಕೂಡ ಇಳಿಕೆ ಕಂಡು ಸಾಧಾರಣ ಸ್ಥಾನಕ್ಕೆ ಕುಸಿದಿದೆ..

Air quality declines in most cities and towns in the karnataka state
ರಾಜ್ಯದ ಬಹುತೇಕ ನಗರ-ಪಟ್ಟಣಗಳಲ್ಲಿ ವಾಯು ಗುಣಮಟ್ಟ ಕುಸಿತ
author img

By

Published : Feb 26, 2021, 7:15 AM IST

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಇತರ ನಗರ, ಪಟ್ಟಣಗಳಲ್ಲೂ ವಾಯು ಮಾಲಿನ್ಯ ಪ್ರಮಾಣದಲ್ಲಿ ವರ್ಷದಿಂದ, ವರ್ಷಕ್ಕೆ ಏರಿಕೆಯಾಗುತ್ತಿದೆ. ರಾಜ್ಯದ 25 ಜಿಲ್ಲೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯುಮಾಲಿನ್ಯ ಮಾಪಕಗಳಿವೆ. ನಾಲ್ಕು ಜಿಲ್ಲೆಗಳಲ್ಲಿ ಉತ್ತಮ ಸ್ಥಿತಿಯಲ್ಲಿವೆ. ಆದರೆ, ಉಳಿದೆಲ್ಲಾ ಕಡೆ ಸಮಾಧಾನಕರ ಹಾಗೂ ಮಧ್ಯಮ ಪ್ರಮಾಣಕ್ಕೆ ವಾಯು ಗುಣಮಟ್ಟ ಇಳಿಕೆಯಾಗಿದೆ.

ಗಾಳಿಯಲ್ಲಿ ಮಾಲಿನ್ಯಕಾರಕಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2019-20 ನೇ ಸಾಲಿನ ವಾರ್ಷಿಕ ವರದಿಯಲ್ಲೂ ಅಂಕಿ-ಅಂಶ ಸಹಿತ ಇದನ್ನು ವಿವರಿಸಲಾಗಿದೆ. ವಾಯು ಗುಣಮಟ್ಟದಲ್ಲಿ ಉತ್ತಮ ಸ್ಥಾನದಿಂದ ಸಮಾಧಾನಕರ ಸ್ಥಾನಕ್ಕೆ ಕುಸಿತ ಕಂಡಿತ್ತು. ಇದೀಗ ಕೆಲ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಇಳಿಕೆ ಕಂಡು ಸಾಧಾರಣ ಸ್ಥಾನಕ್ಕೆ ಕುಸಿದಿದೆ.

ಈಗಾಗಲೇ ದೇಶದಲ್ಲೇ ಬೆಂಗಳೂರು ಅಸ್ತಮಾ ರೋಗಿಗಳು ಹೆಚ್ಚಿರುವ ಮೂರನೇ ಸ್ಥಾನದಲ್ಲಿದೆ. ನಗರದ 31 ಕಡೆ ಹೆಚ್ಚು ಧೂಳು ಇದೆ ಎಂದು ಮಂಡಳಿ ಗುರುತಿಸಿದೆ. ಗಾಳಿಯಲ್ಲಿ ಧೂಳಿನ ಸಾಂದ್ರತೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿ ಧಾರವಾಡ, ದಾವಣಗೆರೆ, ಗುಲ್ಬರ್ಗಾವನ್ನು ಕೂಡಾ ಕ್ರಿಟಿಕಲೀ ಪೊಲ್ಯೂಟೆಡ್ ಏರಿಯಾ ಎಂದು ಪಟ್ಟಿ ಮಾಡಲಾಗಿದೆ. ಮಾಲಿನ್ಯ ತಡೆಗಟ್ಟಲು ಪ್ರತ್ಯೇಕ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ.

ವಾತಾವರಣದಲ್ಲಿರುವ ಗಂಧಕದ ಡೈಆಕ್ಸೈಡ್ (SO2), ನೈಟ್ರೇಟ್ ಗಳು (NO2) , ಮಾಲಿನ್ಯಕಾರಣ ಕಣಗಳು (PM) , ಅಮೋನಿಯಾ ( NH3) , ಹಾಗೂ ಸೀಸದ ಪ್ರಮಾಣದ ಆಧಾರದಲ್ಲಿ ಗುಣಮಟ್ಟ ಸೂಚ್ಯಂಕ (ಎಕ್ಯುಐ) ಅನ್ನು ನಿರ್ಧರಿಸಲಾಗುತ್ತದೆ. ಈ ಕಣಗಳು ರಾಷ್ಟ್ರ ರಾಷ್ಟ್ರೀಯ ಮಿತಿಗಿಂತ ಕಡಿಮೆಯೇ ಇದ್ದರೂ, ಮಾಲಿನ್ಯಕಾರಕ ಕಣಗಳು(ಪಿಎಂ 2.5, ಪಿ.ಎಂ.10) ಮಾತ್ರ ರಾಷ್ಟ್ರೀಯ ಮಿತಿಗಿಂತ ಹೆಚ್ಚಾಗುತ್ತಿದೆ. ಅಂದರೆ ವಾಹನಗಳ ಹೊಗೆ, ಧೂಳು, ಕಾಮಗಾರಿಗಳಿಂದ ಉಂಟಾಗುವ ಧೂಳಿನ ಪ್ರಮಾಣ ಹೆಚ್ಚು ಇದೆ.

ಅಂಕಿ ಸಂಖ್ಯೆ
ಅಂಕಿ ಸಂಖ್ಯೆ

ಇದರಲ್ಲಿ ಆರು ವಿಭಾಗದಲ್ಲಿ ವಾಯುಗುಣಮಟ್ಟ ಸೂಚಿಸಲಾಗುತ್ತದೆ.

ಉತ್ತಮ (0-50)

ಸಮಾಧಾನಕರ (51-100)

ಮಧ್ಯಮ/ಸಾಧಾರಣ (101-200)

ಕಳಪೆ- (201-300)

ತೀರ ಕಳಪೆ (301-400)

ಆತಂಕಕಾರಿ/ಗಂಭೀರ (401)

ನಗರದಲ್ಲಿ ಒಟ್ಟು 18 ಕಡೆ ವಾಯುಮಾಲಿನ್ಯ ಮಾಪಕಗಳಿದ್ದು ನಿರಂತರವಾಗಿ ವಾಯುಗುಣಮಟ್ಟವನ್ನು ಅಳೆಯಲಾಗುತ್ತದೆ.

ಪ್ರದೇಶಗಳು PM-10

1) ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶ. - 82.7

2) ಯಲಹಂಕ-ರೈಲ್ ವೀಲ್ ಫ್ಯಾಕ್ಟ್ರಿ - 81.4

3) ಯಶವಂತಪುರ ಪೊಲೀಸ್ ಠಾಣೆ- 75.0

4) ಸೆಂಟ್ರಲ್ ಸಿಲ್ಕ್ ಬೋರ್ಡ್,ಹೊಸೂರು ರಸ್ತೆ- 90.1

5) ನಿಮ್ಹಾನ್ಸ್- 60.0

6) ಸೆಂಟ್ರಲ್ ಸಿಲ್ಕ್ ಬೋರ್ಡ್- 80.1

7)ಪೀಣ್ಯ. - 96.3

8) ಸ್ವಾನ್ ಸಿಲ್ಕ್, ಪೀಣ್ಯ- 86.4

9) ಮೈಸೂರು ರಸ್ತೆ, ಆಮ್ಕೊ ಬ್ಯಾಟರೀಸ್(AMCO ಬ್ಯಾಟ್ರೀಸ್)- 84.0

10) ಬಾಣಸವಾಡಿ ಪೊಲೀಸ್ ಠಾಣೆ- 93.3

11) ಕ.ವಿ.ಕಾ. ಮೈಸೂರು ರಸ್ತೆ- 71.2

12) ಕಜಿಸೊಣ್ಣೇನಹಳ್ಳಿ- 78.7

13) ತೆರಿ ಕಚೇರಿ, ದೊಮ್ಮಲೂರು- 96.5

14) ಯುವಿಸಿಇ-ಕೆ.ಆರ್ ಸರ್ಕಲ್ - 82.5

15) ವಿಕ್ಟೋರಿಯಾ ಆಸ್ಪತ್ರೆ- 59.5

16) ಇಂದಿರಾಗಾಂಧಿ ಚೈಲ್ಡ್ ಹೆಲ್ತ್ ಕೇರ್ ಸೆಂಟರ್- 56.5

17) ವೆಟರ್ನರಿ ಕಾಲೇಜ್ ,ಹೆಬ್ಬಾಳ- 62.3

18) ಜಯನಗರ 5th ಬ್ಲಾಕ್ - 72.1

19) ಎಸ್ ಜಿ ಹಳ್ಳಿ - ಮಧ್ಯಮ - 113.8

20) ನಗರ ರೈಲು ನಿಲ್ದಾಣ - ಮಧ್ಯಮ- 109.6

ರಾಜ್ಯದ ಇತರ ನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣ

ಮೈಸೂರು- 66. - ಸಮಾಧಾನಕರ- ಪಿಎಮ್10

ಶಿವಮೊಗ್ಗ- 56. - ಸಮಾಧಾನಕರ- ಒ3

ಚಿಕ್ಕಮಗಳೂರು- 59. - ಸಮಾಧಾನಕರ- ಒ3

ವಿಜಯಪುರ- 50. - ಉತ್ತಮ- ಪಿಎಮ್10

ಚಾಮರಾಜನಗರ- 45. - ಉತ್ತಮ- ಪಿಎಮ್10

ಬಾಗಲಕೋಟೆ- 47. - ಉತ್ತಮ- ಪಿಎಮ್10

ಚಿಕ್ಕಬಳ್ಳಾಪುರ- 65. -ಸಮಾಧಾನಕರ- ಪಿಎಮ್10

ಯಾದಗಿರಿ- 81. ಸಮಾಧಾನಕರ- ಪಿಎಮ್10

ರಾಮನಗರ- 56. ಸಮಾಧಾನಕರ- ಪಿಎಮ್10

ಮಡಿಕೇರಿ- 62- ಸಮಾಧಾನಕರ- ಒ3

ಬೀದರ್- 110- ಮಧ್ಯಮ- ಪಿಎಮ್10

ದಾವಣಗೆರೆ- 71- ಸಮಾಧಾನಕರ- ಪಿಎಮ್10

ಗದಗ. - 57- ಸಮಾಧಾನಕರ- ಪಿಎಮ್2.5

ಹುಬ್ಬಳ್ಳಿ- 102- ಮಧ್ಯಮ- ಪಿಎಮ್10

ಹಾಸನ- 79- ಸಮಾಧಾನಕರ- ಪಿಎಮ್10

ಹಾವೇರಿ- 65- ಸಮಾಧಾನಕರ- ಪಿಎಮ್10

ಕಲಬುರ್ಗಿ- 114- ಮಧ್ಯಮ- ಪಿಎಮ್2.5

ಕೋಲಾರ- 43- ಉತ್ತಮ- ಪಿಎಮ್ 10

ಕೊಪ್ಪಳ- 77- ಸಮಾಧಾನಕರ- ಪಿಎಮ್10

ಮಂಗಳೂರು- 71- ಸಮಾಧಾನಕರ- ಪಿಎಮ್2.5

ರಾಯಚೂರು- 130- ಮಧ್ಯಮ- ಪಿಎಮ್10

ಉಡುಪಿ- 56- ಸಮಾಧಾನಕರ- ಸಿಒ

ಬೆಳಗಾಂ- 132- ಮಧ್ಯಮ- ಪಿಎಮ್10

ಪ್ರಮುಖ ಅಂಶಗಳು-

ದೂಳಿನ ಕಣಗಳ ಮಾಪನವಾದ PM10 ನಗರದ 16 ಕಡೆಗಳಲ್ಲಿ ರಾಷ್ಟ್ರೀಯ ಮಿತಿಯನ್ನು ಮೀರಿದೆ.

20 ಸ್ಥಳಗಳ ಪೈಕಿ, 17 ಸ್ಥಳಗಳಲ್ಲಿ ಸಮಾಧಾನಕರ, 2 ಪ್ರದೇಶಗಳಲ್ಲಿ ಮಧ್ಯಮ ಹಾಗೂ ಒಂದು ಸ್ಥಳದಲ್ಲಿ ಉತ್ತಮ ವಾಯುಗುಣಮಟ್ಟ ಇದೆ.

ಈ ಪ್ರಮಾಣದ ವಾಯುಮಾಲಿನ್ಯದಿಂದ ನಗರದ ಶ್ವಾಸಕೋಶ, ಹೃದಯ ಸಂಬಂಧಿ ಖಾಯಿಲೆ ಇರುವ ಜನಕ್ಕೆ ಹಾಗೂ ಮಕ್ಕಳಿಗೆ ಉಸಿರಾಟಕ್ಕೆ ತೊಂದರೆ ಆಗಲಿದೆ.

PM10 - ವಾಹನದ ಹೊಗೆ, ವಾಹನಗಳ ಓಡಾಟದಿಂದ ಉಂಟಾಗುವ ಧೂಳು, ರಸ್ತೆ ಕಾಮಗಾರಿ, ಹಾಗೂ ನಿರ್ಮಾಣ ಕಾಮಗಾರಿಗಳಿಂದ ಉಂಟಾಗುವ ಧೂಳಿನ ಕಣಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.