ETV Bharat / state

ಹೈಕೋರ್ಟ್ ನೀಡಿರುವ ತಾತ್ಕಾಲಿಕ ತಡೆ ಗೌರವಿಸಿ ಮುಷ್ಕರ ಮುಂದೂಡಿಕೆ: ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ

ಹೈಕೋರ್ಟ್ ನೀಡಿರುವ ತಾತ್ಕಾಲಿಕ ತಡೆ ಗೌರವಿಸಿ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆಯು ಮೂರು ವಾರಗಳ ನಂತರ ಹೋರಾಟ ಮಾಡುವ ಬಗ್ಗೆ ಸಂಘದ ಪಧಾಧಿಕಾರಿಗಳ ಸಭೆಯನ್ನು ಕರೆದು ಮುಂದಿನ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

adjournment-of-the-strike-in-keeping-with-the-temporary-stay-granted-by-high-court
ಹೈಕೋರ್ಟ್ ನೀಡಿರುವ ತಾತ್ಕಾಲಿಕ ತಡೆ ಗೌರವಿಸಿ ಮುಷ್ಕರ ಮುಂದೂಡಿಕೆ: ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಸಂಚಾಲಕ ಚಂದ್ರಶೇಖರ್
author img

By

Published : Mar 23, 2023, 8:49 PM IST

Updated : Mar 23, 2023, 10:12 PM IST

ಬೆಂಗಳೂರು: ಉಚ್ಚನ್ಯಾಯಾಲಯ ಸಾರಿಗೆ ಮುಷ್ಕರಕ್ಕೆ ಮೂರು ವಾರಗಳ ತಡೆಯಾಜ್ಞೆ ನೀಡಿರುವುದನ್ನು ಗೌರವಿಸಿ ಮುಷ್ಕರವನ್ನು ಮುಂದೂಡುತ್ತಿದ್ದೇವೆ ಎಂದು ಸಾರಿಗೆ ನೌಕರರ ಸಮಾನ ಮನಸ್ಕರ ಒಕ್ಕೂಟದ ಸಂಚಾಲಕ ಚಂದ್ರಶೇಖರ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಚಂದ್ರಶೇಖರ್, ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆಯು ಸಾರಿಗೆ ಮುಷ್ಕರಕ್ಕೆ ಮೂರು ವಾರಗಳ ತಡೆಯಾಜ್ಞೆ ನೀಡಿರುವುದನ್ನು ಗೌರವಿಸುತ್ತೇವೆ. ಕರ್ನಾಟಕದ ನಾಲ್ಕು ನಿಗಮಗಳ ಸಾರಿಗೆ ನೌಕರ ಸಮಾನ ಮನಸ್ಕರ ವೇದಿಕೆಯಿಂದ ವಿವಿಧ ಬೇಡಿಕೆಗಳನ್ನು ನಿಗಮಗಳ ವ್ಯವಸ್ಥಾಪಕರ ಮತ್ತು ಸರ್ಕಾರದ ಮುಂದೆ ಇಡಲಾಗಿತ್ತು. ಮುಷ್ಕರದ ಸಮಯದಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ನೌಕರರಿಗೆ ಆಗಿರುವ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿ ಯಥಾಸ್ಥಿತಿ ಕಾಪಾಡಬೇಕು. ಸರ್ಕಾರ ನೀಡಿರುವ ಭರವಸೆಯಂತೆ ಸಾರಿಗೆ ನೌಕರರಿಗೂ ವೇತನ ಆಯೋಗದ ಮಾದರಿಯಲ್ಲಿ ಸಮಾನ ವೇತನವನ್ನು ಅನ್ವಯವಾಗುವಂತೆ ನೀಡಬೇಕು ಎಂದು ಹೇಳಿದ್ದಾರೆ.

ಹೈಕೋರ್ಟ್ ನೀಡಿರುವ ತಾತ್ಕಾಲಿಕ ತಡೆ ಗೌರವಿಸಿ ಮುಷ್ಕರ ಮುಂದೂಡಿಕೆ: ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಸಂಚಾಲಕ ಚಂದ್ರಶೇಖರ್
ಹೈಕೋರ್ಟ್ ನೀಡಿರುವ ತಾತ್ಕಾಲಿಕ ತಡೆ ಗೌರವಿಸಿ ಮುಷ್ಕರ ಮುಂದೂಡಿಕೆ: ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಸಂಚಾಲಕ ಚಂದ್ರಶೇಖರ್

ಕಾರ್ಮಿಕ ಸಂಘಟನೆಗಳಗೆ ತುರ್ತಾಗಿ ನಿಗದಿತ ಅವಧಿಯೊಳಗೆ ಚುನಾವಣೆಯನ್ನು ನಡೆಸಬೇಕು. ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಖಾಸಗೀಕರಣಕ್ಕೆ ಪೂರಕವಾದ ಎಲ್ಲ ಯೋಜನೆಯನ್ನು ಕೂಡಲೇ ಕೈಬಿಡುವಂತೆ ಅನಿರ್ಧಿಷ್ಟಾವಧಿ ಸಾರಿಗೆ ಮುಷ್ಕರಕ್ಕೆ ಕರೆ ನೀಡಲಾಗಿತ್ತು ಅದಕ್ಕೆ ನಮ್ಮ ಎಲ್ಲಾ ನೌಕರರು ಕೂಡ ಮಾನಸಿಕವಾಗಿ ಸಿದ್ಧರಾಗಿದ್ದರು ಎಂದು ತಿಳಿಸಿದ್ದಾರೆ.

ತಡೆಯಾಜ್ಞೆಯಿಂದ ನೌಕರರ ಮೇಲೆ ಆಗುವ ದುಷ್ಪರಿಣಾಮದ ಸಾಧ್ಯತೆ: ತಡೆಯಾಜ್ಞೆಯಿಂದ ನೌಕರರ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಷ್ಕರವನ್ನು ಮುಂದೂಡಿ ಕಾನೂನು ಹೋರಾಟಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಮೂರು ವಾರಗಳ ನಂತರ ಹೋರಾಟ ಮಾಡುವ ಬಗ್ಗೆ ಸಂಘದ ಪಧಾಧಿಕಾರಿಗಳ ಸಭೆಯನ್ನು ಕರೆದು ಮುಂದಿನ ದಿನಾಂಕವನ್ನು ನಿಗದಿ ಮಾಡಲಾಗುವುದು ಮತ್ತು ತುರ್ತಾಗಿ ಕಾರ್ಮಿಕ ಸಂಘಟನೆಗಳಿಗೆ ಚುನಾವಣೆ ನಡೆಸಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ರಾಜಕೀಯ ಪಿತೂರಿ: ಇದೊಂದು ರಾಜಕೀಯ ಪಿತೂರಿಯಾಗಿದೆ ಶುಕ್ರವಾರ ನಡೆಯಲಿದ್ದ ಮುಷ್ಕರಕ್ಕೆ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಯಾರೋ‌ ಮಹಾನುಭಾವರು ಕೋರ್ಟ್​​​ಗೆ ಪಿಐಎಲ್​​ ಹಾಕಿದ್ದಾರೆ. ಅದರಂತೆ ಮೂರು ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಹೈಕೋರ್ಟ್ ಸೂಚಿಸಿದೆ. ಕೋರ್ಟ್​ ಆದೇಶ ಪಾಲಿಸಿ 3 ವಾರಗಳ ಕಾಲ ಮುಷ್ಕರ ಮುಂದೂಡಿದ್ದೇವೆ. ಈ ಬಗ್ಗೆ ಎಲ್ಲಾ ನೌಕರರಿಗೆ ಮಾಹಿತಿ ನೀಡಿದ್ದೇವೆ. ಕಳೆದ ಬಾರಿ ಹೋರಾಟ ಮಾಡುವಾಗಲೂ ಇದೇ ರೀತಿ ಆಗಿತ್ತು. ಪಿಐಎಲ್ ಹಾಕಿದ್ದ ಮಹಾನುಭಾವ ಸಾರಿಗೆ ನೌಕರರ ಸಮಸ್ಯೆ ತಿಳಿದುಕೊಂಡು ಅರ್ಜಿ ಸಲ್ಲಿಸಬೇಕಿತ್ತು ಎಂದು ಅಸಮಾಧಾನ ಹೊರಹಾಕಿದರು.

ಪ್ರಕರಣದ ಹಿನ್ನೆಲೆ ಏನು? ಸಾರಿಗೆ ನೌಕರರ ವೇತನ ಪರಿಷ್ಕರಣೆ ಆಗ್ರಹಿಸಿ ಸಾರಿಗೆ ನೌಕರರ ಸಮಾನ ವೇದಿಕೆ ಮಾರ್ಚ್ 24ರಿಂದ ಮುಷ್ಕರ ನಡೆಸುವುದಾಗಿ ಘೋಷಿಸಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಪ್ರಸ್ತುತ ರಾಜ್ಯಾದ್ಯಂತ ಮಕ್ಕಳ ಪರೀಕ್ಷೆಗಳು ನಡೆಯುತ್ತಿವೆ. ‌ಈ ಸಂದರ್ಭದಲ್ಲಿ ಸಾರಿಗೆ ಮುಷ್ಕರ ಹಮ್ಮಿಕೊಂಡಲ್ಲಿ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಮುಷ್ಕರ ನಡೆಸುವುದು ಸರಿಯಾದ ಕ್ರಮ ಅಲ್ಲ ಎಂದು ನ್ಯಾಯಪೀಠ ತಿಳಿಸಿತ್ತು. ಸಾರಿಗೆ ನೌಕರರು ಕರೆದಿದ್ದ ಮುಷ್ಕರವನ್ನು ಪ್ರಶ್ನಿಸಿ ಶಿವಮೊಗ್ಗ ಜಿಲ್ಲೆಯ ಹರೊಗೊಲಿಗೆ ಗ್ರಾಮದ ಹೆಚ್.ಎಂ.ವೆಂಕಟೇಶ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರಕ್ಕೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್

Last Updated : Mar 23, 2023, 10:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.