ETV Bharat / state

ಮುಂದುವರೆದ 'ಅವಹೇಳನ' ಗದ್ದಲ: ವಿಧಾನ ಪರಿಷತ್​​ ಕಲಾಪ ನಾಳೆಗೆ ಮುಂದೂಡಿಕೆ - ವಿಧಾನ ಪರಿಷತ್​ ಕಲಾಪ ನಾಳೆಗೆ ಮುಂದೂಡಿಕೆ

ವಿಧಾನ ಪರಿಷತ್ ಕಲಾಪದಲ್ಲಿ ಮಧ್ಯಾಹ್ನದ ನಂತರವೂ ಪ್ರತಿಪಕ್ಷಗಳ ಧರಣಿ ಮುಂದುವರೆದ ಹಿನ್ನೆಲೆ ಸಭಾಪತಿಗಳು ಕಲಾಪವನ್ನು ನಾಳೆಗೆ ಮುಂದೂಡಿದರು.

adjournment-of-the-legislative-council-meting
ವಿಧಾನ ಪರಿಷತ್​ ಕಲಾಪ ನಾಳೆಗೆ ಮುಂದೂಡಿಕೆ
author img

By

Published : Mar 3, 2020, 5:22 PM IST

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಮಧ್ಯಾಹ್ನದ ನಂತರವೂ ಪ್ರತಿಪಕ್ಷಗಳ ಧರಣಿ ಮುಂದುವರೆದ ಹಿನ್ನೆಲೆ ಸಭಾಪತಿಗಳು ಕಲಾಪವನ್ನು ನಾಳೆಗೆ ಮುಂದೂಡಿದರು.

ಭೋಜನ ವಿರಾಮದ ನಂತರ ಕಲಾಪ ಆರಂಭವಾಗುತ್ತಿದ್ದಂತೆ ಮಾತು ಆರಂಭಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ರವಿಕುಮಾರ್ ಬೆಳಗ್ಗೆ ಮಾತನಾಡಿದ ಸಂದರ್ಭ ದೊರೆಸ್ವಾಮಿಗೆ ಧಿಕ್ಕಾರ, ಅವರಿಗೆ ನಾಚಿಕೆ ಆಗಬೇಕು ಎಂದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ನಾವು ಅದನ್ನು ಖಂಡಿಸಿದ್ದೇವೆ. ಇದು ಅಕ್ಷಮ್ಯ ಅಪರಾಧ. ಕೆಳಮನೆ ಸದಸ್ಯರ ಅವಹೇಳನಕಾರಿ ಮಾತಿನ ವಿರುದ್ಧ ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು. ಆ ಸದಸ್ಯರಿಗಿಂತ ಅವಹೇಳನಕಾರಿ ಮಾತನ್ನು ರವಿಕುಮಾರ್ ಹೇಳಿದ್ದಾರೆ. ಅವರು ಮೊದಲು ಕ್ಷಮೆಯಾಚಿಸಬೇಕು ಮತ್ತು ಕಡತದಿಂತ ಇವರು ಆಡಿದ ಶಬ್ಧ ತೆಗೆಯಬೇಕೆಂದು ಆಗ್ರಹಿಸಿದರು.

ಒಂದೊಮ್ಮೆ ಕ್ಷಮೆ ಕೇಳದಿದ್ದರೆ ಸಭಾಪತಿಗಳು ಅವರನ್ನು ಸದನದಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ, ಪಾಟೀಲರ ಮಾತನ್ನು ಸಮರ್ಥಿಸಿಕೋಮಡರು.

ಆಡಳಿತ ಪಕ್ಷದ ಪರವಾಗಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ನಿಯಮ 342ರ ಅಡಿ ಚರ್ಚೆಗೆ ಅವಕಾಶ ನೀಡಲಾಗಿತ್ತು. ರವಿಕುಮಾರ್ ಮಾತಿಗೆ ಆಕ್ಷೇಪಣೆ ಇದ್ದರೆ ಅವರ ಸ್ಪಷ್ಟೀಕರಣಕ್ಕೆ ಅವಕಾಶ ಮಾಡಿಕೊಡಿ. ಸಾಕಷ್ಟು ಸಮಯ ಹರಣವಾಗುತ್ತಿದೆ. ದಯವಿಟ್ಟು ಅವರ ಸ್ಪಷ್ಟನೆ ಕೇಳಿ, ಸದನ ಕಲಾಪ ಮುಂದುವರಿಯಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿಕೊಂಡರು.

ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಬಿಜೆಪಿ ವಿರುದ್ಧದ ನಮ್ಮ ಆರೋಪವನ್ನು ರವಿಕುಮಾರ್ ರುಜುವಾತು ಮಾಡಿದ್ದಾರೆ. ನಾಲ್ಕು ಬಾರಿ ಧಿಕ್ಕಾರ ಕೂಗಿದ್ದಾರೆ. ಕ್ಷಮೆ ಕೇಳುವ ಸೌಜನ್ಯ ತೋರದಿದ್ದರೆ ಇವರು ಏನು ಎನ್ನುವುದು ಜನರಿಗೆ ಅರಿವಾಗಲಿದೆ ಎಂದರು.

ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ದೇಶದ್ರೋಹದ ಘೋಷಣೆ ಕೂಗಿದ ಮಕ್ಕಳ ಜತೆ ಭಾಗವಹಿಸಿದ್ದು, ಪ್ರಧಾನಿ ವಿರುದ್ಧ ಹೇಳಿಕೆ ನೀಡಿರುವ ದೊರೆಸ್ವಾಮಿ ವಿರುದ್ಧ ಸಹಜವಾಗಿ ರವಿಕುಮಾರ್ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅಂತವರಿಗೆ ಬೆಲೆ ಕೊಡಬೇಕೇ ಎಂದು ಪ್ರಶ್ನಿಸಿದಾಗ, ಸದನದಲ್ಲಿ ಪ್ರತಿಪಕ್ಷಗಳ ಸದಸ್ಯರು ಗಲಾಟೆ ಆರಂಭಿಸಿದರು. ಎಸ್.ಆರ್.ಪಾಟೀಲ್ ಮಾತನಾಡಿ, ತೇಜಸ್ವಿನಿ ಗೌಡ ಇಂದು ದೊರೆಸ್ವಾಮಿ ಅವರನ್ನು ಕೊಲೆಪಾತಕ ಎಂದಿದ್ದಾರೆ. ಇದು ಸರಿಯಲ್ಲ ಎಂದಾಗ, ಸದಸ್ಯರು ನ್ಯಾಯ ಬೇಕು ಎಂದು ಕೂಗಲಾರಂಭಿಸಿದರು.

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ನಾಳೆ ಬೆಳಗ್ಗೆ 11ಕ್ಕೆ ಮುಂದೂಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.