ETV Bharat / state

ಹೋಂ ಕ್ವಾರಂಟೈನ್​​​ಗೊಳಗಾದ ಎಡಿಜಿಪಿ ಅಮರ್‌ಕುಮಾರ್ ಪಾಂಡೆ.. - ಭೂಗತ ಪಾತಕಿ‌ ರವಿ ಪೂಜಾರಿ

ಆಪ್ತ ಸಹಾಯಕನ ಜೊತೆ ನಿತ್ಯ ಓಡಾಟ ಮಾಡಿದ ಕಾರಣ ಸದ್ಯ ಪಾಂಡೆಯವರು ಹೋಂ ಕ್ವಾರಂಟೈನ್​​​ನಲ್ಲಿದ್ದಾರೆ. ಹಾಗೆಯೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯ ಸುತ್ತ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ..

ADGP Amar Kumar Pandey
ಹೋಂ ಕ್ವಾರಂಟೈನ್​​​ಗೆ ಒಳಗಾದ ಎಡಿಜಿಪಿ ಅಮರ್ ಕುಮಾರ್ ಪಾಂಡೆ
author img

By

Published : Jun 23, 2020, 8:35 PM IST

ಬೆಂಗಳೂರು : ಭೂಗತ ಪಾತಕಿ‌ ರವಿ ಪೂಜಾರಿಯನ್ನ ಸೆನೆಗಲ್ ಜೈಲಿನಿಂದ ಕರೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ‌ ಎಡಿಜಿಪಿ ಅಮರ್ ಕುಮಾರ್ ಪಾಂಡೆಯವರು ಹೋಂ ಕ್ವಾರಂಟೈನ್​​​ಗೆ ಒಳಗಾಗಿದ್ದಾರೆ‌.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿರುವ ಅಮರ್ ಪಾಂಡೆಯವರ ಆಪ್ತ ಸಹಾಯಕರಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಆತನನ್ನು ಸಂಬಂಧ ಪಟ್ಟ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಪ್ತ ಸಹಾಯಕನ ಜೊತೆ ನಿತ್ಯ ಓಡಾಟ ಮಾಡಿದ ಕಾರಣ ಸದ್ಯ ಪಾಂಡೆಯವರು ಹೋಂ ಕ್ವಾರಂಟೈನ್​​​ನಲ್ಲಿದ್ದಾರೆ. ಹಾಗೆಯೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯ ಸುತ್ತ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ಅಮರ್ ಪಾಂಡೆಯವರು ಹೊಂದಿದ್ದಾರೆ. ರವಿ ಪೂಜಾರಿಯನ್ನ ಕರೆತಂದಾಗ ಬಹಳಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.