ETV Bharat / state

ಅಯೋಧ್ಯೆಯಲ್ಲಿ ಕರ್ನಾಟಕದ ವಿವಿಧ ಖಾದ್ಯ ಉಣಬಡಿಸಲಿರುವ ಅದಮ್ಯ ಚೇತನ ಸಂಸ್ಧೆ

ಬಾಲ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂದರ್ಭದಲ್ಲಿ ಅದಮ್ಯ ಚೇತನ ಸಂಸ್ಧೆಯು ಅಯೋಧ್ಯೆಯಲ್ಲಿ ಕರ್ನಾಟಕದ ಖಾದ್ಯಗಳ ಸವಿ ಉಣಬಡಿಸಲಿದೆ.

ಅದಮ್ಯ ಚೇತನ ಸಂಸ್ಧೆ  ಅಯೋಧ್ಯೆ ರಾಮಮಂದಿರ  Karnataka delicacies  Adamya Chetana Organization
ಅಯೋಧ್ಯೆಯಲ್ಲಿ ಕರ್ನಾಟಕದ ಖಾದ್ಯಗಳ ಸವಿಯನ್ನು ಉಣಬಡಿಸಲಿರುವ ಅದಮ್ಯ ಚೇತನ ಸಂಸ್ಧೆ
author img

By ETV Bharat Karnataka Team

Published : Jan 19, 2024, 1:18 PM IST

ಬೆಂಗಳೂರು: ಹಸಿರು ಮತ್ತು ಶೂನ್ಯ ತ್ಯಾಜ್ಯ ಅಡುಗೆ ಮನೆಯ ಖ್ಯಾತಿ ಹೊಂದಿರುವ, ದಿನನಿತ್ಯ ಲಕ್ಷಾಂತರ ಮಕ್ಕಳ ಹಸಿವು ನೀಗಿಸುತ್ತಿರುವ ಅದಮ್ಯ ಚೇತನ ಸಂಸ್ಥೆ, ಜನವರಿ 22ರಿಂದ ಒಂದು ತಿಂಗಳುಗಳ ಕಾಲ ಅಯೋಧ್ಯೆಗೆ ಭೇಟಿ ನೀಡುವ ಭಕ್ತಾದಿಗಳಿಗೆ ತಾತ್ಕಾಲಿಕವಾಗಿ ನಿರ್ಮಿಸುತ್ತಿರುವ ಶೂನ್ಯ ತ್ಯಾಜ್ಯ ಅಡುಗೆ ಮನೆಯ ಮೂಲಕ ಕರ್ನಾಟಕದ ಖಾದ್ಯಗಳ ಸವಿ ಉಣಬಡಿಸಲಿದೆ.

ಅದಮ್ಯ ಚೇತನ ಅಡುಗೆ ಮನೆಯ 16 ಜನರ ತಂಡ ಈ ಜವಾಬ್ದಾರಿ ಹೊತ್ತುಕೊಂಡಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿರುವ ಭಕ್ತಾದಿಗಳಿಗೆ ಒಂದು ತಿಂಗಳುಗಳ ಕಾಲ ಕರ್ನಾಟಕದ ತಿಂಡಿಗಳಾದ ಇಡ್ಲಿ, ಸಾಂಬಾರ್‌, ಉಪ್ಪಿಟ್ಟು, ಮಧ್ಯಾಹ್ನ ಬಿಸಿಬೇಳೆ ಬಾತ್‌ ಹಾಗೂ ಸಿಹಿ ಪೊಂಗಲ್‌, ರಾತ್ರಿ ಖಾರಾ ಪೊಂಗಲ್‌ ಉಣಬಡಿಸಲು ತಯಾರಿ ಮಾಡಿಕೊಂಡಿದೆ.

ಈ ಕುರಿತು ಮಾತನಾಡಿರುವ ಅದಮ್ಯ ಚೇತನ ಟ್ರಸ್ಟಿ ಪ್ರದೀಪ್ ಓಕ್, ''ರಾಮನ ದೇವಸ್ಥಾನದ ಹತ್ತಿರದಲ್ಲಿಯೇ ತಾತ್ಕಾಲಿಕ ಅಡುಗೆ ಮನೆ ಸ್ಥಾಪಿಸಲಾಗುತ್ತಿದೆ. ನಮ್ಮ ಅದಮ್ಯ ಚೇತನ ಸಂಸ್ಥೆಯ ಎರಡು ವಾಹನಗಳು ಅಗತ್ಯ ಪರಿಕರಗಳೊಂದಿಗೆ ಈಗಾಗಲೇ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿವೆ. 16 ಜನರ ತಂಡವೂ ಅಯೋಧ್ಯೆಗೆ ರೈಲಿನಲ್ಲಿ ತೆರಳಿದ್ದು, ತಾತ್ಕಾಲಿಕ ಅಡುಗೆ ಮನೆಯ ಸ್ಥಾಪಿಸಲಿದ್ದಾರೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಉಣಬಡಿಸಲಿದ್ದಾರೆ".

"ಪ್ರತಿ ಒಂದು ಹೊತ್ತಿಗೆ ಸುಮಾರು 400 ಜನರಿಗೆ ಕರ್ನಾಟಕ ರಾಜ್ಯದ ತಿಂಡಿಗಳು, ಮಧ್ಯಾಹ್ನ ಬಿಸಿಬೇಳೆ ಬಾತ್‌ ಜೊತೆಗೆ ಒಂದು ಸಿಹಿ ಪದಾರ್ಥ ಹಾಗೂ ರಾತ್ರಿ ಖಾರ ಪೊಂಗಲ್‌ ಅಥವಾ ಚಿತ್ರಾನ್ನದಂತಹ ತಿಂಡಿಗಳನ್ನು ತಯಾರಿಸಿ ಬಡಿಸಲಾಗುವುದು. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಬರುವ ಭಕ್ತಾದಿಗಳಿಗೆ ಅಳಿವು ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನಮ್ಮ ಸಂತಸ ಇಮ್ಮಡಿಗೊಳಿಸಿದೆ'' ಎಂದು ತಿಳಿಸಿದ್ದಾರೆ.

''ಬೆಂಗಳೂರಿನಲ್ಲಿ ಇರುವಂತೆಯೇ ಅಯೋಧ್ಯೆಯಲ್ಲೂ ಅದಮ್ಯ ಚೇತನ ಸಂಸ್ಥೆ ತನ್ನ ತಾತ್ಕಾಲಿಕ ಅಡುಗೆ ಮನೆಯನ್ನು ಶೂನ್ಯ ತ್ಯಾಜ್ಯ ಅಡುಗೆ ಮನೆಯಾಗಿ ನಿರ್ಮಿಸಲಿದೆ. ತರಕಾರಿಗಳ ತ್ಯಾಜ್ಯ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಕಾಂಪೋಸ್ಟ್ ಮಾಡುವ ಯೂನಿಟ್ ಅನ್ನು ಜೊತೆಗೆ ಕೊಂಡೊಯ್ಯಲಾಗಿದೆ. ಇನ್ನು ಪ್ಲೇಟ್ ಬ್ಯಾಂಕಿನಿಂದ ಪ್ಲೇಟುಗಳು ಹಾಗೂ ಚಮಚಗಳನ್ನು ಮತ್ತು ಊಟದ ನಂತರ ಅವುಗಳನ್ನು ತೊಳೆಯಲು ಡಿಶ್ ವಾಶರ್ ಕೂಡ ಇಲ್ಲಿಂದಲೇ ತಗೆದುಕೊಂಡು ಹೋಗಲಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

''ಅಗತ್ಯ ಸಾಮಗ್ರಿಗಳನ್ನು ತಗೆದುಕೊಂಡು ಹೋಗುತ್ತಿರುವ ಎರಡು ವಾಹನಗಳು ನಾಳೆ ಅಯೋಧ್ಯೆ ತಲುಪಲಿವೆ. ಒಂದು ತಂಡ ಈಗಾಗಲೇ ತಾತ್ಕಾಲಿಕ ಅಡುಗೆ ಮನೆಯನ್ನ ಸ್ಥಾಪಿಸುವ ಕೆಲಸದಲ್ಲಿ ನಿರತವಾಗಿದೆ. ಜನವರಿ 22ರ ಬೆಳಗ್ಗಿನಂದಲೇ ಅದಮ್ಯ ಚೇತನ ಅಡುಗೆ ಮನೆ ಕಾರ್ಯ ಪ್ರಾರಂಭಿಸಲಿದೆ'' ಎಂದು ಪ್ರದೀಪ್ ಓಕ್ ಹೇಳಿದ್ದಾರೆ.

ಇದನ್ನೂ ಓದಿ: ಹಾವೇರಿ: ಕೇಕ್​ನಲ್ಲಿ ಮೂಡಿಬಂದ ಅಯೋಧ್ಯೆ ರಾಮ ಮಂದಿರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.