ETV Bharat / state

ಜೈಲು ಸಿಬ್ಬಂದಿ, ಸಹ‌ ಕೈದಿಗಳೊಂದಿಗೆ ನಟಿಮಣಿಯರ ಫ್ರೆಂಡ್​​ಶಿಪ್​​ - ಪರಪ್ಪನ ಅಗರಹಾರ ಜೈಲಿನಲ್ಲಿ ನಟಿ

ಡ್ರಗ್ಸ್​​ ಜಾಲ ಪ್ರಕರಣದಡಿ ಜೈಲು ಸೇರಿರುವ ನಟಿ ಸಂಜನಾ ಮತ್ತು ರಾಗಿಣಿ ಇದೀಗ ತಮ್ಮ ಸಹ ಕೈದಿಗಳ‌ ಜೊತೆಗೆ ಹಾಗು ಇತರೆ ಬ್ಯಾರಕ್​ನಲ್ಲಿರುವ ಕೈದಿಗಳ ಜೊತೆ ಬೆರೆತು ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ ಎನ್ನಲಾಗ್ತಿದೆ.

Actress sanjana-ragini Friendship with Prison Guards and Prisoners
ಜೈಲು ಸಿಬ್ಬಂದಿ, ಸಹ‌ ಖೈದಿಗಳೊಂದಿಗೆ ನಟಿಮಣಿಯರ ಫ್ರೆಂಡ್​​ಶಿಪ್​​
author img

By

Published : Nov 22, 2020, 1:00 PM IST

ಬೆಂಗಳೂರು: ಸ್ಯಾಂಡಲ್​​ವುಡ್​​ಗೆ ಡ್ರಗ್ಸ್​​ ನಂಟು ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿಮಣಿಯರಾದ‌ ಸಂಜನಾ ಮತ್ತು ರಾಗಿಣಿ ಇದೀಗ ತಮ್ಮ ಸಹಚರರೊಂದಿಗೆ ಮತ್ತು ಜೈಲು ಸಿಬ್ಬಂದಿಯೊಂದಿಗೆ ಫ್ರೆಂಡ್​​ಶಿಪ್​​​ ಮಾಡಿ ಪ್ರತಿದಿನ ಮಾತುಕತೆ ನಡೆಸುತ್ತಿದ್ದಾರೆನ್ನುವ ಮಾಹಿತಿ ದೊರೆತಿದೆ.

ಇಬ್ಬರು ಕೂಡ ಪ್ರತ್ಯೇಕ ಬ್ಯಾರಕ್​ನಲ್ಲಿ ಇತರೆ ಕೈದಿಗಳ ಜೊತೆ ಮಾತ್ರ ಸ್ನೇಹ ಬೆಳೆಸಿದ್ದು, ತಾವಿಬ್ಬರೂ ಯಾವುದೇ ಮಾತುಕತೆ ನಡೆಸುತ್ತಿಲ್ಲ. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿಗೆ ಇಡಿ ಅಧಿಕಾರಿಗಳು ತೆರಳಿ ವಿಚಾರಣೆ ನಡೆಸಿದ್ದರು. ವಿಚಾರಣೆ ನಂತರ ಈವರೆಗೂ ಒಬ್ಬರನ್ನೊಬ್ಬರು ಮಾತನಾಡಿಸದೆ ಎದುರುಬದುರಾದರೂ ಕೂಡ ಮೌನ ವಹಿಸಿದ್ದಾರೆಂದು ತಿಳಿದುಬಂದಿದೆ. ಸದ್ಯ ಸಂಜನಾ ಕೊಠಡಿಯಲ್ಲಿ ಇಬ್ಬರು ಸಹ ಕೈದಿಗಳು ಇದ್ದು, ರಾಗಿಣಿ ಕೊಠಡಿಯಲ್ಲಿ ಸಹ ಇಬ್ಬರು ಕೈದಿಗಳು ಇದ್ದಾರೆ.

ನ್ಯಾಯಾಲಯದಲ್ಲಿ ಇಬ್ಬರ ಜಾಮೀನು ಅರ್ಜಿ ಕೂಡ ತಿರಸ್ಕೃತವಾಗಿವೆ. ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ. ಒಟ್ಟಿನಲ್ಲಿ ಜೈಲಿನಿಂದ ಹೊರಬರುವವರೆಗೂ ಹೀಗೆ ದಿನ ಕಳೆಯಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.