ETV Bharat / state

ಸೊಳ್ಳೆ ಕಾಟಕ್ಕೆ ಸಂಜನಾ ರಂಪಾಟ... ಕುಟುಂಬಸ್ಥರ ಭೇಟಿ ನಿರೀಕ್ಷೆಯಲ್ಲಿ ನಟಿಮಣಿ - ನಟಿ ಸಂಜನಾ ಲೆಟೆಸ್ಟ್ ನ್ಯೂಸ್

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ​​ ಪ್ರಕರಣದಡಿ ಜೈಲು ಸೇರಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಚಿಂತಾಕ್ರಾಂತರಾಗಿ ತಮ್ಮ ಸಮಯ ಕಳೆಯುತ್ತಿದ್ದಾರೆ. ತಮ್ಮ ಕುಟಂಬಸ್ಥರ ಭೇಟಿ ನಿರೀಕ್ಷೆಯಲ್ಲಿ ಈ ನಟಿಮಣಿಯರಿದ್ದಾರೆ.

Actress ragini and sanjana is in jail
ಸೊಳ್ಳೆ ಕಾಟಕ್ಕೆ ಸಂಜನಾ ರಂಪಾಟ...ಕುಟುಂಬಸ್ಥರ ಭೇಟಿ ನೀರಿಕ್ಷೆಯಲ್ಲಿ ನಟಿಮಣಿಯರು!
author img

By

Published : Sep 17, 2020, 10:58 AM IST

ಬೆಂಗಳೂರು: ಸ್ಯಾಂಡಲ್​​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಸೊಳ್ಳೆ ಕಾಟಕ್ಕೆ ರಂಪಾಟ ನಡೆಸಿ ತನ್ನ ನೋವನ್ನು ತೋಡಿಕೊಂಡಿದ್ದಾರೆ. ಸದ್ಯ ಜೈಲಿನಲ್ಲಿ ಚಿಂತಾಕ್ರಾಂತರಾಗಿ ತನ್ನ ಕುಟಂಬಸ್ಥರ ಭೇಟಿ ನಿರೀಕ್ಷೆಯಲ್ಲಿ ನಟಿ ಸಂಜನಾ ಇದ್ದಾರೆ.

ಇಂದು ಸಂಜನಾ ಪರ ವಕೀಲರು ಜೈಲಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಆದ್ರೆ ಕೊರೊನಾ ಕಾರಣ ಕುಟುಂಬಸ್ಥರ ಭೇಟಿಗೆ ನಿಷೇಧ ಹೇರಿದ್ದು, ವಕೀಲರ ಮೂಲಕ ಮಗಳನ್ನು ಭೇಟಿ ಮಾಡಲು ನಟಿಯರ ಪೋಷಕರು ಪ್ರಯತ್ನಿಸುವ ಸಾಧ್ಯತೆ ಇದೆ.

ಮಹಿಳಾ ಸಾಂತ್ವನ ಕೇಂದ್ರದಲ್ಲಿ ಜೊತೆಗಿದ್ದ ನಟಿಮಣಿಯರು ಸದ್ಯ ಬೇರೆ-ಬೇರೆ ಕೊಠಡಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಆದ್ರೆ ಇಬ್ಬರಿಗೂ ಕೊರೊನಾ ನೆಗೆಟಿವ್ ಇರುವ ಕಾರಣ ಒಂದೇ ಬ್ಯಾರಕ್​ನಲ್ಲಿ ಇಬ್ಬರನ್ನೂ ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ. ಕಾರಣ, ಇಬ್ಬರೂ ಕೂಡಾ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಟ್ಟಿಗೆ ಇದ್ದು, ಸದ್ಯ ಇಲ್ಲಿಯೂ ಜೊತೆಯಾಗಿರುವುದಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಜೈಲಿನ ಸಿಬ್ಬಂದಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ‌. ಒಟ್ಟಾರೆ, ನಾಲ್ಕು ಗೋಡೆಗಳ ಮಧ್ಯೆಯೇ ಸಂಜನಾ, ರಾಗಿಣಿ ದಿನ ಕಳೆಯುತ್ತಿದ್ದಾರೆ.

ಮೂರು ದಿನವಾದರೂ ರಾಗಿಣಿ ತನ್ನ ಪೋಷಕರನ್ನು ನೋಡಿಲ್ಲ. ನಿನ್ನೆ ಸಹ ಮಗಳನ್ನು ಕಾಣಲು ಪೋಷಕರು ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಮ್ಮ ಮಗಳಿಗಾಗಿ ಬಟ್ಟೆಗಳನ್ನು ತಂದಿದ್ದರು. ಆದ್ರೆ ಜೈಲಿನ ಕೋವಿಡ್​​ ನಿಯಮಗಳ ಪ್ರಕಾರ, ಬಟ್ಟೆಗಳನ್ನು ಸಹ ಪ್ರತ್ಯೇಕವಾಗಿ ಇಡಲಾಗುತ್ತೆ. ಮೂರು ದಿನಗಳ ನಂತರ ಆ ಬಟ್ಟೆಗಳನ್ನು ಸಂಬಂಧಪಟ್ಟವರಿಗೆ ನೀಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.