ETV Bharat / state

ನಾನು ಮುಲ್ಕಿ ಬಪ್ಪನಾಡು ದುರ್ಗಾ ದೇವಿಯ ಕೃಪೆಯಿಂದ ಬೆಳೆದವನು: ನಟ ಸುನಿಲ್ ಶೆಟ್ಟಿ - etv bharat kannada

ವಿವಾದಕ್ಕೊಳಗಾದರೆ ಮಾಧ್ಯಮಗಳು ಟಿಆರ್​​ಪಿಗಾಗಿ ಸುದ್ದಿ ಮಾಡುತ್ತಾರೆ. ನಾನೊಬ್ಬ ಉತ್ತಮ ನಟನಲ್ಲ ಎಂದು ಹಲವರು ಟೀಕಿಸಿದ್ದರು. ಬಳಿಕ ನನ್ನ ನಟನೆ ಸುಧಾರಿಸಿಕೊಂಡೆ ಎಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ಹೇಳಿದರು.

actor-sunil-shetty-talks-in-bengaluru-tech-summit
ನಮಗಾಗಿ ಕಷ್ಟಪಟ್ಟ ನನ್ನ ತಂದೆಯೇ ನನ್ನ ಹೀರೋ: ನಟ ಸುನಿಲ್ ಶೆಟ್ಟಿ
author img

By

Published : Nov 19, 2022, 7:06 AM IST

ಬೆಂಗಳೂರು: ನಾನು ವಿನಮ್ರ ಕುಟುಂಬದಿಂದ ಬಂದವನು. ಮಂಗಳೂರಿನ ಮುಲ್ಕಿಯಲ್ಲಿ ಹುಟ್ಟಿದ್ದೆ, ಬಪ್ಪನಾಡಿನ‌ ದುರ್ಗಾ ದೇವಿಯ ಕೃಪೆಯಲ್ಲಿ ಬೆಳೆದೆ ಎಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ಬಾಲ್ಯವನ್ನು ಸ್ಮರಿಸಿಕೊಂಡರು.

ಬೆಂಗಳೂರು ತಂತ್ರಜ್ಞಾನ ಸಮ್ಮೇಳನದಲ್ಲಿನ‌ ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತ, ತಂದೆಯೇ ನನ್ನ ಹೀರೋ ಆಗಿದ್ದಾರೆ. ಅವರು ತಮ್ಮ 9ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿ ಅನೇಕ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಟೇಬಲ್ ಕ್ಲೀನ್‌ ಮಾಡುತ್ತಿದ್ದರು. ಐಸ್ ಬ್ಯಾಗ್ ಮೇಲೆ‌ ಮಲಗುತ್ತಿದ್ದರು. ಅವರು ಯಾವ ರೆಸ್ಟೋರೆಂಟ್​ನಲ್ಲಿ ಕೆಲಸ‌ ಮಾಡುತ್ತಿದ್ದರೋ ಬಳಿಕ ಅದೇ ರೆಸ್ಟೋರೆಂಟ್​​ನ‌ ಮಾಲೀಕರಾದರು. ನಮ್ಮ ಹೊಟ್ಟೆ ತುಂಬಿಸಲು ಅವರು ಸಾಕಷ್ಟು ಕಷ್ಟಪಟ್ಟಿದ್ದರು‌ ಎಂದು ಸ್ಮರಿಸಿದರು.

ಸುನಿಲ್ ಶೆಟ್ಟಿ ವಿವಾದಕ್ಕೊಳಗಾದರೆ ಮಾಧ್ಯಮದವರು ಟಿಆರ್​​ಪಿಗಾಗಿ ಸುದ್ದಿ ಮಾಡುತ್ತಾರೆ. ನಾನೊಬ್ಬ ಉತ್ತಮ ನಟನಲ್ಲ ಎಂದು ಹಲವರು ಟೀಕಿಸಿದ್ದರು. ಬಳಿಕ ನನ್ನ ನಟನೆ ಸುಧಾರಿಸಿಕೊಂಡೆ. ವೃತ್ತಿ ಜೀವನದಲ್ಲಿ ಹೆಚ್ಚು ನಿಷ್ಠಾವಂತನಾಗಿದ್ದೇನೆ, ಗುರಿ ಏನೆಂಬುದು ಗೊತ್ತಿದೆ. ಆ ಗುರಿ ಸಾಧಿಸಲು‌ ನಾನು ಪರಿಶ್ರಮ ಪಡುತ್ತಿದ್ದೆ, ಯಾವತ್ತೂ ಜೀವನದಲ್ಲಿ ತೃಪ್ತನಾಗಿದ್ದೇನೆ ಎಂದರು.

ಕಂಟೆಂಟ್ ಉತ್ತಮವಾಗಿಲ್ಲವಾದರೆ ಆ ಸಿನಿಮಾ ವಿಫಲವಾಗುತ್ತದೆ. ಭಾರತೀಯ ಮಾರುಕಟ್ಟೆಗೆ, ಭಾರತೀಯರಿಗೆ ಇಷ್ಟವಾಗುವ ಕಂಟೆಂಟ್ ಕೊಡಬೇಕು. ಆದಷ್ಟು ಹೆಚ್ಚು ಭಾರತೀಯ ಕಥೆಗಳನ್ನು ಹೇಳಬೇಕು. ನಾನು ಯಾವತ್ತೂ ಪ್ರೇಕ್ಷಕರ ಜೊತೆಗೆ ಸಂಪರ್ಕ ಹೊಂದಲು ಬಯಸುತ್ತೇನೆ ಎಂದು ಸುನಿಲ್​ ಶೆಟ್ಟಿ ವಿವರಿಸಿದರು.

ಇದನ್ನೂ ಓದಿ: ಸ್ಟಾರ್ಟ್​ ಅಪ್‌ಗಳ ನೆರವಿಗೆ ಬೂಸ್ಟರ್ ಕಿಟ್‌ ಉಪಕ್ರಮ, 9 ಒಡಂಬಡಿಕೆಗೆ ಅಂಕಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.