ಬೆಂಗಳೂರು: ಕನ್ನಡ ಚಿತ್ರರಂಗ ಮಾತ್ರವಲ್ಲದೇ, ಸೌಥ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಸ್ಟಾರ್ಡಮ್ ಹೊಂದಿರುವ ನಟ ಕಿಚ್ಚ ಸುದೀಪ್. ಅಭಿಮಾನಿಗಳಿಂದ 'ಅಭಿನಯ ಚಕ್ರವರ್ತಿ' ಅಂತಾ ಕರೆಯಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನ ಒಮ್ಮೆ ಭೇಟಿ ಮಾಡಿ, ಒಂದು ಫೋಟೋ ತೆಗೆಸಿಕೊಳ್ಳಬೇಕು ಅಂತಾ ಅದೆಷ್ಟೋ ಅಭಿಮಾನಿಗಳಿಗೆ ಆಸೆ ಇರುತ್ತದೆ. ಆದರೆ ಇತ್ತೀಚೆಗೆ ಕಿಚ್ಚ ಸುದೀಪ್ ಅವರನ್ನು ನೋಡಲು ಬಂದ ಅಭಿಮಾನಿಗಳ ಕಥೆ ಸ್ವಲ್ಪ ವಿಭಿನ್ನವಾಗಿದೆ.
ಸುದೀಪ್ ಮಾತನಾಡಿಸುತ್ತಿರುವ ಈ ವ್ಯಕ್ತಿಗಳು, ಕಿಚ್ಚನ ಅಭಿಮಾನಿಗಳು. ರೇಣುಕಾ, ಗೋಪಾಲ ಹಾಗೂ ಮರೇಮ್ಮ ಕಲಬುರಗಿ ಜಿಲ್ಲೆಯ, ಅವರಾದಿ ತಾಲೂಕು ಜೇವರ್ಗಿಯವರು. ನೆಚ್ಚಿನ ನಟನ ದರ್ಶನ ಪಡೆಯಲು ಈ ಅಪ್ಪಟ ಅಭಿಮಾನಿಗಳು ಎಷ್ಟೆಲ್ಲಾ ಸಾಹಸ ಪಟ್ಟಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಈ ಮುಗ್ಧ ಅಭಿಮಾನಿಗಳು ಕಲಬುರಗಿಯಿಂದ ಬರೋಬ್ಬರಿ 650 ಕಿಲೋಮೀಟರ್ ದೂರದ ಹಾದಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಇತ್ತೀಚೆಗೆ ಸುದೀಪ್ ಅವರನ್ನ ಭೇಟಿ ಮಾಡಿದ್ದಾರೆ. ಸತತ 14 ದಿನಗಳ ಕಾಲ ಕಾಲ್ನಡಿಗೆಯಲ್ಲಿ ನಡೆದುಕೊಂಡು ಬಂದು ನೆಚ್ಚಿನ ನಟನನ್ನು ನೋಡಿ ಸಂತಸ ಪಟ್ಟಿದ್ದಾರೆ.
ಈ ಮೂರು ಜನ ಅಭಿಮಾನಿಗಳು ಪ್ರತಿ ದಿನ 40 ಕಿ. ಮೀ ನಡೆದು ಜೆ.ಪಿ ನಗರದಲ್ಲಿರುವ ಸುದೀಪ್ ಮನೆಗೆ ಬಂದಿದ್ದಾರೆ. ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿಗಳನ್ನು ಕಿಚ್ಚ ಸುದೀಪ್, ತಮ್ಮ ಜೆಪಿ ನಗರದ ಮನೆಗೆ ಕರೆಸಿ ಮಾತನಾಡಿಸಿ ಅವರಿಗೆ ಊಟೋಪಚಾರ ಮಾಡಿಸಿ ಕಳುಹಿಸಿದ್ದಾರೆ. ಸದ್ಯ 'ವಿಕ್ರಾಂತ್ ರೋಣ' ಸಿನಿಮಾದ ಬಿಡುಗಡೆ ಸಿದ್ಧತೆಯಲ್ಲಿರುವ ಸುದೀಪ್, ಅಷ್ಟು ದೂರದಿಂದ ಬಂದ ಈ ಅಭಿಮಾನಿಗಳನ್ನು ಮನಸ್ಸಿಗೆ ಇಷ್ಟ ಆಗುವ ರೀತಿಯ ಉಪಚರಿಸಿರುವುದು ವಿಶೇಷ.
ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ: ವಿಕ್ರಾಂತ್ ರೋಣ ಬಿಡುಗಡೆಗೆ ಮುಹೂರ್ತ ಫಿಕ್ಸ್