ETV Bharat / state

ಸಿಎಂ ಭೇಟಿಯಾದ ರಾಘವೇಂದ್ರ ರಾಜ್ ಕುಮಾರ್.. ಬೊಮ್ಮಾಯಿಗೆ ಶುಭ ಹಾರೈಕೆ - ಸಿಎಂ ಬಸವರಾಜ ಬೊಮ್ಮಾಯಿ

ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್ ಅವರು, ಸಿಎಂ ಬಸವರಾಜ ಬೊಮ್ಮಾಯಿವರನ್ನು ಆರ್​.ಟಿ ನಗರದ ನಿವಾಸದಲ್ಲಿ ಭೇಟಿಯಾದರು.

Ragavendara Rajkumar meets CM
ಸಿಎಂ ಬೊಮ್ಮಾಯಿ ಭೇಟಿಯಾದ ನಟ ರಾಘವೇಂದ್ರ ರಾಜ್ ಕುಮಾರ್!
author img

By

Published : Aug 7, 2021, 11:19 AM IST

ಬೆಂಗಳೂರು : ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದರು.

ಆರ್.ಟಿ.ನಗರದ ಸಿಎಂ ನಿವಾಸಕ್ಕೆ ಪುತ್ರ ಯುವರಾಜ್ ಕುಮಾರ್ ಜೊತೆ ಭೇಟಿ ನೀಡಿದ ರಾಘವೇಂದ್ರ ರಾಜ್ ಕುಮಾರ್, ಸಿಎಂಗೆ ಶುಭ ಹಾರೈಸಿದರು.

ಬಳಿಕ ಮಾತನಾಡಿದ ಅವರು, ಸಿಎಂ ಬೊಮ್ಮಾಯಿಯವರು ನಮ್ಮ ಕುಟುಂಬ ಸ್ನೇಹಿತರು. ಬೊಮ್ಮಾಯಿಯವರ ಮದುವೆಗೆ ಅಪ್ಪಾಜಿಯವರು ಹೋಗಿದ್ದರು. ಆಗಿನಿಂದಲೂ ನಮ್ಮ ಕುಟುಂಬಕ್ಕೆ ಅವರ ಪರಿಚಯವಿದೆ. ಅವರು ಸಿಎಂ ಆಗಿರುವ ಹಿನ್ನೆಲೆ ಅಭಿನಂದಿಸಲು ಬಂದಿದ್ದೆ. ನಮ್ಮ ಶಿಕ್ಷಣ ಟ್ರಸ್ಟ್​​ನಿಂದ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಕಾರ್ಯಕ್ರಮಕ್ಕೂ‌ ಸಿಎಂ ಅವರನ್ನು ಆಹ್ವಾನಿಸಿದ್ದೇವೆ ಎಂದರು.

ಓದಿ : ಯಾರೂ ಯಾವ ಖಾತೆಗೂ ಪಟ್ಟು ಹಿಡಿದಿಲ್ಲ ಎಂದ ಸಿಎಂ.. ಸಚಿವರ ಖಾತೆ ಪಟ್ಟಿ ಪ್ರಕಟಣೆಗೆ ಕ್ಷಣಗಣನೆ

ಚಿತ್ರ ಮಂದಿರಗಳಲ್ಲಿ ಶೇ.100 ರಷ್ಟು ಆಸನ ಭರ್ತಿಗೆ ಅವಕಾಶ ಕೊಡದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚಿತ್ರಮಂದಿರಗಳ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರದ ಜೊತೆ ಚರ್ಚಿಸಲಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.