ಬೆಂಗಳೂರು: ಅಣ್ಣಾವ್ರ ಮಗ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (47) ವಿಧಿವಶರಾಗಿದ್ದಾರೆ. ಜಿಮ್ ಮಾಡುವ ವೇಳೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಮನೆ ವೈದ್ಯರು ಪರೀಕ್ಷೆ ನಡೆಸಿದ್ದರು.
ಆ ಬಳಿಕ ಅವರನ್ನು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂರು ಗಂಟೆಗಳ ಕಾಲ ವೈದ್ಯರು ಸತತ ಚಿಕಿತ್ಸೆ ನೀಡಿ ಪುನೀತ್ ರಾಜಕುಮಾರ್ ಬದುಕಿಸಿಕೊಳ್ಳಲು ಮಾಡಿದ ಪ್ರಯತ್ನ ವ್ಯರ್ಥವಾಗಿ ಮಧ್ಯಾಹ್ನ 2:30 ರ ವೇಳೆಗೆ ಕೊನೆಯುಸಿರೆಳೆದರು. ಬಳಿಕ ಈ ವಿಷಯವನ್ನು ವಿಕ್ರಂ ಆಸ್ಪತ್ರೆ ವೈದ್ಯರು ದೃಢಪಡಿಸಿದರೂ ಕೂಡಾ.
ಅಪ್ಪು ಅಗಲಿಕೆಗೆ ಇಡೀ ಕರುನಾಡೇ ಶೋಕಸಾಗರದಲ್ಲಿ ಮುಳುಗಿದೆ.