ETV Bharat / state

ನಟ ಪ್ರೇಮ್ ಚಿತ್ರಕ್ಕೆ ಅಭಿನಂದನೆ ಸಲ್ಲಿಸಿದ ಸಚಿವ ಅಶ್ವತ್ಥನಾರಾಯಣ - ಪ್ರೇಮಂ ಪೂಜ್ಯಂ ಪ್ರೇಮ್​ ಮುಂದಿನ ಸಿನಿಮಾ

ಇಂಸು ನಟ ಪ್ರೇಮ್​ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿದರು. ಈ ವೇಳೆ, ಸಚಿವರು ಪ್ರೇಮ್​​ ಚಿತ್ರಕ್ಕೆ ಅಭಿನಂದಿಸಿದರು.

Minister Aswathanarayana congratulates prem
ನಟ ಪ್ರೇಮ್​ ಚಿತ್ರಕ್ಕೆ ಅಭಿನಂದಿಸಿದ ಸಚಿವ ಅಶ್ವತ್ಥನಾರಾಯಣ
author img

By

Published : Dec 2, 2021, 10:48 PM IST

ಬೆಂಗಳೂರು : ನಟ ಪ್ರೇಮ್ ವೈದ್ಯರಾಗಿ ಅಭಿನಯಿಸಿರುವ ಪ್ರೇಮಂ ಪೂಜ್ಯಂ ಸಿನಿಮಾ ಜನಪರ ಕಳಕಳಿ ಹೊಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನಟ ಪ್ರೇಮ್ ಚಿತ್ರಕ್ಕೆ ಅಭಿನಂದನೆ ಸಲ್ಲಿಸಿದ ಸಚಿವ ಅಶ್ವತ್ಥನಾರಾಯಣ

ವಿಕಾಸಸೌಧದ ಕಚೇರಿಯಲ್ಲಿ ಇಂದು ನಟ ಪ್ರೇಮ್ ಸಚಿವರನ್ನು ಭೇಟಿ ಮಾಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಪ್ರೇಮ್​ ನಮ್ಮೆಲ್ಲರ ಲವ್ಲಿ ಸ್ಟಾರ್ ಆಗಿದ್ದಾರೆ. ಪ್ರೇಮಂ ಪೂಜ್ಯಂ ಸಿನಿಮಾದಲ್ಲಿ ಜನರ ಸಂಕಷ್ಟಕ್ಕೆ ಮಿಡಿಯುವ ವೈದ್ಯರಾಗಿ, ಕೋವಿಡ್​​ ವಾರಿಯರ್​​ ಆಗಿ ನಟ ಪ್ರೇಮ್​ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ವೈದ್ಯೋ ನಾರಾಯಣೋ ಹರಿ ಎಂಬ ಹಾಡು ಚೆನ್ನಾಗಿದ್ದು, ಸರ್ಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಬಳಿಕ ನಟ ಪ್ರೇಮ್ ಮಾತನಾಡಿ, ನನಗೆ ಮೊದಲಿನಿಂದಲೂ ಸಚಿವರು ಪರಿಚಿತರು. ಅವರನ್ನು ಹಾಗೂ ಅವರ ಕುಟುಂಬದವರನ್ನು ಸಿನಿಮಾ ನೋಡುವಂತೆ ಆಹ್ವಾನಿಸಲು ಬಂದಿದೆ. ಈ ವೇಳೆ ಚಿತ್ರದಲ್ಲಿರುವ ವೈದ್ಯೋ ನಾರಾಯಣೋ ಹರಿ ಹಾಡನ್ನು ತೋರಿಸಿದೆ. ಆ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು. ವೈದ್ಯರು ಹಾಗೂ ಕೊರೊನಾ ವಾರಿಯರ್ಸ್‌ ಅವರಿಗೆ ಧನ್ಯವಾದ ಹೇಳಲು ಈ ಹಾಡು ಮಾಡಲಾಗಿದೆ. ಹಾಡಿನ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ಸಿಕ್ಕಿದೆ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯಕ್ಕೆ ಒಮಿಕ್ರೋನ್ ಎಂಟ್ರಿ: ಹೊಸ ಮಾರ್ಗಸೂಚಿ ಬಗ್ಗೆ ನಾಳೆ ಸಿಎಂ ಮಹತ್ವದ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.