ETV Bharat / state

ಸ್ಯಾಂಡಲ್​​ವುಡ್ ನಟನ ಎಣ್ಣೆ ಎಡವಟ್ಟು: ತಡರಾತ್ರಿ ಪೊಲೀಸರೊಂದಿಗೆ ಕಿರಿಕ್​ ಆರೋಪ

author img

By

Published : Sep 7, 2020, 8:35 AM IST

ಕುಡಿದ ಮತ್ತಿನಲ್ಲಿ ನಟ ಹರ್ಷ ಪೊಲೀಸರ ಜೊತೆ ಕಿರಿಕ್‌ ಮಾಡಿದ್ದಾರೆ ಎನ್ನಲಾಗಿದೆ.

Actor Harsha
ನಟ ಹರ್ಷ

ಬೆಂಗಳೂರು: ತಡರಾತ್ರಿ ಸ್ಯಾಂಡಲ್​ವುಡ್ ನಟನ ಎಣ್ಣೆ ಎಡವಟ್ಟು ಬೆಳಕಿಗೆ ಬಂದಿದೆ.

ರಾಜಾಹುಲಿ, ವರ್ಧನ ಸೇರಿದಂತೆ ಹಲವು ಚಿತ್ರಗಳಲ್ಲಿ ನಟನೆ ಮಾಡಿರುವ ನಟ ಹರ್ಷ ಖಾಸಗಿ ಅಪಾರ್ಟ್​ಮೆಂಟ್​​​ ಬಳಿ ಗೆಳೆಯರೊಂದಿಗೆ ಕುಡಿಯಲು ಸೇರಿದ್ದರಂತೆ.‌ ಈ ವಿಚಾರ ತಿಳಿದ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಈ ಓಪನ್ ಏರಿಯಾದಲ್ಲಿ ಹಾಗೆ ಸದ್ಯದ ಪರಿಸ್ಥಿಯಲ್ಲಿ ಕುಡಿಯದಂತೆ ತಿಳಿಸಿದ್ದಾರೆ.

ಗೆಳೆಯರ ಜೊತೆ ಕುಡಿಯುವ ವೇಳೆ ಎಂಟ್ರಿ ಕೊಟ್ಟ ಪೊಲೀಸರು ವಾರ್ನ್ ಮಾಡಿದಾಗ ಕುಡಿದ ಮತ್ತಿನಲ್ಲಿ ನಟ ಹರ್ಷ ಪೊಲೀಸರ ಜೊತೆ ಕಿರಿಕ್‌ ಮಾಡಿದ್ದಾರೆ. ಹಾಗೆಯೇ ನಟನ ಜೊತೆಗಿದ್ದ ಸ್ನೇಹಿತರರು ಪೊಲೀಸರಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ನಗರದಲ್ಲಿ‌ ಮಾದಕ ವಸ್ತು ಬಗ್ಗೆ ಅಲರ್ಟ್ ಆಗಿರುವ ಪೊಲೀಸರು, ಕೂಡಲೇ ನಟ ಹರ್ಷ ಹಾಗೂ ಆತನ ಗೆಳೆಯರನ್ನು ವಶಕ್ಕೆ ಪಡೆದು, ನಂತರ ವಾರ್ನ್ ಮಾಡಿ ಬಿಟ್ಟು ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.