ETV Bharat / state

ಬಿಡಿಎನಿಂದ ಅಕ್ರಮ ಜಾಗ ಹಂಚಿಕೆ.. ಮಾಜಿ ಪ್ರಧಾನಿ ಹೆಚ್​ಡಿಡಿ ಭೇಟಿ ಮಾಡಿದ ನಟ ಚೇತನ್ - ಮಾಜಿ ಪ್ರಧಾನಿ ದೇವೇಗೌಡ

ಬಿಡಿಎ ವತಿಯಿಂದ ಅಕ್ರಮವಾಗಿ ಹಂಚಿಕೆ ಮಾಡಿರುವ ಜಾಗವನ್ನು ಬಿಡಿಸಿಕೊಡಿ ಎಂದು ನಟ ಚೇತನ್, ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರನ್ನು ಭೇಟಿ ಮನವಿ ಮಾಡಿದ್ದಾರೆ.

ಮಾಜಿ ಪ್ರಧಾನಿ ಹೆಚ್​ಡಿಡಿ ಭೇಟಿ ಮಾಡಿದ ನಟ ಚೇತನ್
author img

By

Published : Aug 20, 2019, 7:10 PM IST

ಬೆಂಗಳೂರು: ಬಿಡಿಎ ವತಿಯಿಂದ ಅಕ್ರಮವಾಗಿ ಹಂಚಿಕೆ ಮಾಡಿರುವ ಜಾಗವನ್ನು ಬಿಡಿಸಿಕೊಡಿ ಎಂದು ನಟ ಚೇತನ್, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತಿದ್ದ ಸಭೆಗೆ ಆಗಮಿಸಿ, ದೇವೇಗೌಡರನ್ನು ಭೇಟಿಯಾದ ನಟ ಚೇತನ್, ನಂದಿನಿ ಲೇಔಟ್ ವ್ಯಾಪ್ತಿಯ ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನವನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದನ್ನು ಮಕ್ಕಳ ಆಟದ ಮೈದಾನಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಹೆಚ್​ಡಿಡಿ, ಸಭೆ ಇರುವುದರಿಂದ ಸಂಜೆವರೆಗೂ ಇಲ್ಲೇ ಇರುತ್ತೇನೆ. ಆ ನಂತರ ಚರ್ಚಿಸೋಣ ಎಂದು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್​ಡಿಡಿ ಭೇಟಿ ಮಾಡಿದ ನಟ ಚೇತನ್

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ನಟ ಚೇತನ್ ಮಾತನಾಡಿ, ಮಕ್ಕಳು ಆಟವಾಡುವ ಮೈದಾನವನ್ನು ಜೆಸಿಬಿ ಮೂಲಕ ಒಡೆಯುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ವ್ಯಾಪ್ತಿಯ ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನ ದಶಗಳಿಂದಲೂ ಇದೆ. ಆದರೆ, ಈಗ ಬಿಡಿಎ ಆ ಜಾಗವನ್ನು ಅಕ್ರಮವಾಗಿ ಹಂಚಿಕೆ ಮಾಡಿದೆ. ಹಲವು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜವಾಗಲಿಲ್ಲ ಎಂದು ಹೇಳಿದರು.

Intro:ಬೆಂಗಳೂರು : ಮಕ್ಕಳ ಆಟದ ಮೈದಾನದ ಜಾಗವನ್ನು ಬಿಡಿಎ ವತಿಯಿಂದ ಅಕ್ರಮವಾಗಿ ಹಂಚಿಕೆ ಮಾಡಿಕೊಂಡಿದ್ದು, ಇದನ್ನು ಉಳಿಸಲು ಸಹಾಯ ಕೋರಿ ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್ ಅವರು ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು.Body:ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತಿದ್ದ ಸಭೆಗೆ ಆಗಮಿಸಿದ ದೇವೇಗೌಡರನ್ನು ಭೇಟಿಯಾದ ನಟ ಚೇತನ್, ನಂದಿನಿಲೇಔಟ್ ವ್ಯಾಪ್ತಿಯ ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನವನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದರ ಸಹಾಯ ಮಾಡುವಂತೆ ಮನವಿ ಮಾಡಿದರು. ಆ ವೇಳೆ ದೇವೇಗೌಡರು, ಸಭೆ ಇರುವುದರಿಂದ ಸಂಜೆವರೆಗೂ ಇಲ್ಲೇ ಇರುತ್ತೇನೆ. ಆ ನಂತರ ಚರ್ಚಿಸೋಣವೆಂದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ನಟ ಚೇತನ್ ಮಾತನಾಡಿ, ಮಕ್ಕಳು ಆಟವಾಡುವ ಮೈದಾನವನ್ನು ಜೆಸಿಬಿ ಮೂಲಕ ಹೊಡೆಯುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ವ್ಯಾಪ್ತಿಯ ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನ ದಶಗಳಿಂದಲೂ ಇದೆ. ಆದರೆ, ಈಗ ಬಿಡಿಎ ಆ ಜಾಗವನ್ನು ಅಕ್ರಮವಾಗಿ ಹಂಚಿಕೆ ಮಾಡಿದೆ. ಹಲವು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜವಾಗಲಿಲ್ಲ ಎಂದು ಹೇಳಿದರು.
ಸರ್ಕಾರಗಳು ಬದಲಾವಣೆಯಾದವು. ಬಿಡಿಎ ಆಯುಕ್ತರು ಬದಲಾವಣೆ ಆಗುತ್ತಿದ್ದಾರೆ. ಆದರೆ, ಯಾರೂ ಸಹ ಸ್ಥಳೀಯರ ನೆರವಿಗೆ ಧಾವಿಸಲಿಲ್ಲ. ಮಕ್ಕಳಿಗೆ ಆಟದ ಮೈದಾನ ಹೆಚ್ಚು ಇರಬೇಕು. ಅದನ್ನು ಬಿಟ್ಟು ಶ್ರೀಮಂತರ ಪರವಾಗಿ ಸರ್ಕಾರಗಳು ನಿಂತರೆ ನಾವು ಎಲ್ಲಿಗೆ ಹೋಗಬೇಕು ಎಂದರು.
ದೇವೇಗೌಡರು ಬಡವರ ಪರವೆಂದು ಹೇಳುತ್ತಿದ್ದಾರೆ. ಹಾಗಾಗಿ, ಆಟದ ಮೈದಾನ ಉಳಿಸಲು ದೇವೇಗೌಡರ ಸಹಾಯ ಕೇಳಲು ಬಂದಿದ್ದು, ಅವರು ಸಹಾಯ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.