ETV Bharat / state

MRP ದರ ಪ್ರಕಟಿಸದ ಟ್ರ್ಯಾಕ್ಟರ್ ಡೀಲರ್​ಗಳಿಗೆ ಬಿಸಿ ಮುಟ್ಟಿಸಿದ ಸಚಿವೆ ಶೋಭಾ ಕರಂದ್ಲಾಜೆ - ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಸಭೆ

ಟ್ರ್ಯಾಕ್ಟರ್ ಡೀಲರ್​​ಗಳಿಂದ ರೈತರಿಗೆ ಸಬ್ಸಿಡಿ ಯೋಜನೆಯಲ್ಲಿ ಅನ್ಯಾಯವಾಗುತ್ತಿರುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳ ಸಭೆ ನಡೆಸಿ ವೆಬ್​ಸೈಟ್​ಗಳಲ್ಲಿ ಎಂಆರ್​​ಪಿ ದರ ಘೋಷಣೆ ಮಾಡುವುದರಿಂದ ಡೀಲರ್​​ಗಳು ರೈತರಿಗೆ ಮೋಸ ಮಾಡುವುದನ್ನು ತಪ್ಪಿಸಬಹುದಾಗಿದೆ. ಅದಕ್ಕಾಗಿ ನಿಯಮಗಳನ್ನು ರೂಪಿಸಿ ಜಾರಿ ಮಾಡುವಂತೆ ನಿರ್ದೇಶನ ನೀಡಿದ್ದಾರೆ.

action-against-tractor-dealers-who-did-not-publish-mrp-rates
MRP ದರ ಪ್ರಕಟಿಸದ ಟ್ರಾಕ್ಟರ್ ಡೀಲರ್​ಗಳಿಗೆ ಬಿಸಿ ಮುಟ್ಟಿಸಿದ ಸಚಿವೆ ಶೋಭಾ ಕರಂದ್ಲಾಜೆ
author img

By

Published : Aug 8, 2021, 2:17 AM IST

Updated : Aug 8, 2021, 2:55 AM IST

ಬೆಂಗಳೂರು: ಟ್ರ್ಯಾಕ್ಟರ್ ಮಾರಾಟ ಮಾಡುವ ಡೀಲರ್​ಗಳು ಸಾರ್ವಜನಿಕವಾಗಿ ಎಂಆರ್​​ಪಿ ದರ ಪ್ರಕಟಿಸದಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಡೀಲರ್​ಗಳಿಗೆ ಶೋಕಾಸ್ ನೋಟಿಸ್ ನೀಡಿ ಬಿಸಿ ಮುಟ್ಟಿಸುತ್ತಿದೆ.

ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ ಟ್ರ್ಯಾಕ್ಟರ್​ನ ಎಂಆರ್​ಪಿ ದರವನ್ನು ವೆಬ್​​ಸೈಟ್​​ಗಳಲ್ಲಿ ಕಡ್ಡಾಯವಾಗಿ ಪ್ರದರ್ಶನ ಮಾಡಲು ಕ್ರಮ ತಗೆದುಕೊಳ್ಳಬೇಕೆಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಎಲ್ಲ ರಾಜ್ಯಗಳ ಕೃಷಿ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದು ಸೂಚನೆ ನೀಡಿದ್ದರು.

ರಾಜ್ಯದಲ್ಲಿ ಬಹುತೇಕ ಡೀಲರ್​​ಗಳು ಸಬ್ಸಿಡಿ ಯೋಜನೆಯಡಿ ಮಾರುವ ಟ್ರಾಕ್ಟರ್​​ಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕೇಂದ್ರ ಸರ್ಕಾರದ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಯ ಲಾಭ ರೈತರಿಗೆ ದೊರೆಯದಂತೆ ಮಾಡುತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ದೂರುಗಳು ಸಹ ಸಚಿವೆ ಶೋಭ ಕರಂದ್ಲಾಜೆ ಅವರ ಗಮನಕ್ಕೆ ಬಂದಿದ್ದವು.

ಟ್ರ್ಯಾಕ್ಟರ್ ಡೀಲರ್​​ಗಳಿಂದ ರೈತರಿಗೆ ಸಬ್ಸಿಡಿ ಯೋಜನೆಯಲ್ಲಿ ಅನ್ಯಾಯವಾಗುತ್ತಿರುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳ ಸಭೆ ನಡೆಸಿ ವೆಬ್​ಸೈಟ್​ಗಳಲ್ಲಿ ಎಂಆರ್​​ಪಿ ದರ ಘೋಷಣೆ ಮಾಡುವುದರಿಂದ ಡೀಲರ್​​ಗಳು ರೈತರಿಗೆ ಮೋಸ ಮಾಡುವುದನ್ನು ತಪ್ಪಿಸಬಹುದಾಗಿದೆ. ಅದಕ್ಕಾಗಿ ನಿಯಮಗಳನ್ನು ರೂಪಿಸಿ ಜಾರಿ ಮಾಡುವಂತೆ ನಿರ್ದೇಶನ ನೀಡಿದ್ದಾರೆ.

Action against tractor dealers who did not publish MRP rates
ನೋಟಿಸ್

ಡೀಲರ್​​ಗಳ ಮೇಲೆ ಕ್ರಮಕ್ಕೆ ಮುಂದಾದ ಕೃಷಿ ಇಲಾಖೆ:

ವೆಬ್​​ಸೈಟ್​ಗಳಲ್ಲಿ ಟ್ರ್ಯಾಕ್ಟರ್​ನ ಎಂಆರ್​ಪಿ ದರ ತೋರಿಸದ ಡೀಲರ್​ಗಳ ಮೇಲೆ ಕ್ರಮಕ್ಕೆ ರಾಜ್ಯ ಕೃಷಿ ಇಲಾಖೆ ಮುಂದಾಗಿದೆ. ರಾಜ್ಯ ಕೃಷಿ ಇಲಾಖೆ ಆಯುಕ್ತರು ಶನಿವಾರ ಪರಿಶೀಲನೆ ನಡೆಸಿದಾಗ ಹಲವಾರು ಡೀಲರ್​​ಗಳು ಸಾರ್ವ ಜನಿಕವಾಗಿ ಎಂಆರ್​ಪಿ ದರ ಪ್ರಕಟಿಸದಿರುವುದು ಪತ್ತೆಯಾಗಿದೆ.

ಎಂಆರ್​ಪಿ ದರ ನಮೂದಿಸದ ಟ್ರ್ಯಾಕ್ಟರ್ ಡೀಲರ್​​ಗಳಿಗೆ ರಾಜ್ಯ ಕೃಷಿ ಇಲಾಖೆ ಆಯುಕ್ತರು ಶೋಕಾಸ್ ನೋಟಿಸ್ ಜಾರಿ ಮಾಡಿ ಈ ತಿಂಗಳ 16ರೊಳಗೆ ವಿವರಣೆ ನೀಡುವಂತೆ ಆದೇಶ ನೀಡಿದ್ದಾರೆ. ಇಲ್ಲಿಯವರೆಗೆ ಒಟ್ಟು 21 ಡೀಲರ್​​ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮುಂದಿನ ಹಂತವಾಗಿ ರಾಜ್ಯದಲ್ಲಿರುವ ಅಧಿಕೃತ ಡೀಲರ್​ಗಳು ಸೇರಿ ಟ್ರ್ಯಾಕ್ಟರ್ ಮಾರಾಟ ಮಾಡುವ ಎಲ್ಲ ಡೀಲರ್​​ಗಳ ವೆಬ್​ಸೈಟ್ ಶೋಧನೆ ನಡೆಸಿ ಎಂಆರ್​ಪಿ ದರ ಪ್ರಕಟ ಮಾಡದಿರುವುದನ್ನು ಪತ್ತೆ ಹಚ್ಚಲಾಗುತ್ತಿದೆ.

ಇದನ್ನೂ ಓದಿ: ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ... ಮೊದಲ ಪ್ರತಿಕ್ರಿಯೆ ನೀಡಿದ್ದು ಹೀಗೆ!

Last Updated : Aug 8, 2021, 2:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.