ETV Bharat / state

ಸ್ಪೀಕರ್ ಆಗಿ ಮಾಡಿದ ಸಾಧನೆಗಳ ರಿಪೋರ್ಟ್‌ ಕಾರ್ಡ್ ಬಿಚ್ಚಿಟ್ಟ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ - ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ

3 ವರ್ಷ 10 ತಿಂಗಳು ಕಾಲ ವಿಧಾನಸಭೆ ಸಭಾಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸಿರುವೆ. 200 ವಿಧೇಯಕಗಳನ್ನು ಅಂಗೀಕರಿಸಿದ ಕೀರ್ತಿಗೆ ಭಾಜನರಾಗಿರುವೆ. ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಯುತಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ-ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತ

Speaker Vishweshwar Hegde Kageri
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
author img

By

Published : Mar 8, 2023, 7:52 PM IST

ಬೆಂಗಳೂರು: ಕರ್ನಾಟಕ ವಿಧಾನಮಂಡಲ ಸಂಸ್ಥೆ ಆರಂಭಿಸಲಾಗುತ್ತಿದೆ. ಇದರೊಂದಿಗೆ 77 ಸಿಬ್ಬಂದಿ ನೇರ ನೇಮಕ ಮಾಡಿಕೊಳ್ಳುವ ಸಿದ್ಧತೆ ಅಂತಿಮ ಹಂತದಲ್ಲಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆಡಳಿತ ಸುಧಾರಣೆಗೂ ಕ್ರಮ ಕೈಗೊಳ್ಳಲಾಗಿದೆ. ಉತ್ತಮವಾಗಿ ಸದನ ನಡೆಸಲು ಮುಕ್ತ ಮನಸ್ಸಿನಿಂದ ಸಹಕರಿಸಿದ್ದಾರೆ. ಅದೇ ರೀತಿ ಅಧಿಕಾರಿಗಳು, ಮಾಧ್ಯಮದವರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.

15 ನೇ ವಿಧಾನಸಭೆ ಅಧಿವೇಶನವು 15 ಬಾರಿ ಸಮಾವೇಶಗೊಂಡಿದ್ದು, ಒಟ್ಟು 167 ದಿನಗಳ ಕಾಲ ಸದನದ ಕಾರ್ಯ ಕಲಾಪಗಳು ನಡೆದಿವೆ. ತಾವು ಸಭಾಧ್ಯಕ್ಷರಾಗಿ ಅಧಿಕಾರ ವಹಿಸಿಕೊ‌ಂಡಾಗಿನಿಂದ ಇಲ್ಲಿಯವರೆಗೆ 3 ವರ್ಷ 10 ತಿಂಗಳಾಗುತ್ತಿದೆ. ಅಧಿವೇಶನದಲ್ಲಿ ಅತ್ಯಂತ ಕಡಿಮೆ ಧರಣಿ, ಸಭಾತ್ಯಾಗಗಳು ನಡೆದಿದ್ದು, ಒಂದೆರಡು ಕ್ರಿಯಾಲೋಪ ಪ್ರಸ್ತಾಪವಾಗಿದೆ. 200 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಅತಿಹೆಚ್ಚು ವಿಧೇಯಕಗಳನ್ನು ಅಂಗೀಕರಿಸಿದ ಕೀರ್ತಿಗೆ ಭಾಜನವಾಗಿದೆ ಎಂದು ಮಾಹಿತಿ ನೀಡಿದರು.

ವಿಧೇಯಕಗಳನ್ನು ಮಂಡಿಸಿ ಮುಖ್ಯ ಚರ್ಚೆಗೆ ಎಲ್ಲ ಸದಸ್ಯರಿಗೂ ಅವಕಾಶ ಮಾಡಿಕೊಡಲಾಗಿತ್ತು. ಶೂನ್ಯ ವೇಳೆಯಲ್ಲಿ 280 ವಿಷಯಗಳಿಗೆ ಅವಕಾಶ ದೊರೆತಿದ್ದು, ಗಮನ ಸೆಳೆಯುವ ಸೂಚನೆ ಬಗ್ಗೆಯೂ ಚರ್ಚೆಯಾಗಿದೆ. ಪ್ರಸ್ತಾಪಿತ ವಿಷಯಕ್ಕೆ ನ್ಯಾಯ ಸಿಗುವ ಸದನದಲ್ಲಿ ಮಾಡಲಾಗಿದೆ ಎಂದು ಒಟ್ಟು 6,000 ಚುಕ್ಕೆ ಗುರುತಿನ ಪ್ರಶ್ನೆ ಹಾಗೂ 25,988 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳನ್ನು ಸದಸ್ಯರು ಕೇಳಿ ಉತ್ತರ ಪಡೆದಿದ್ದಾರೆ.

ಸ್ಪೀಕರ್ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸಿರುವೆ: ಸದನದ ಕಾರ್ಯಕಲಾಪಗಳ ಜೊತೆಗೆ ಸಂವಿಧಾನದ ಮೇಲಿನ ಚರ್ಚೆ, ಒಂದು ದೇಶ ಒಂದು ಚುನಾವಣೆ ಸೇರಿದಂತೆ ಅನೇಕ ವಿಚಾರಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಲಾಗಿತ್ತು. ಸರ್ಕಾರ, ಲೋಕಸಭೆಯ ಸ್ಪೀಕರ್ ವಹಿಸಿದ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಓಂ ಬಿರ್ಲಾ ಅವರು ದೇಶದ ಉತ್ತಮ ಶಾಸನ ಸಭೆಯನ್ನು ಗುರುತಿಸಲು ಮಾನದಂಡಗಳನ್ನು ರಚಿಸಲು ನನ್ನ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಐವರು ವಿಧಾನಸಭಾಧ್ಯಕ್ಷರ ಸಮಿತಿ ರಚಿಸಿದ್ದರು. ಕಳೆದ ವಾರವಷ್ಟೇ ನಮ್ಮ ಸಮಿತಿಯು ಮಾನದಂಡಗಳನ್ನು ಸಿದ್ಧಪಡಿಸಿ ಲೋಕಸಭೆ ಸ್ಪೀಕರ್ ಅವರಿಗೆ ಸಲ್ಲಿಸಿದೆ ಎಂದು ವಿವರಿಸಿದರು.

ಒಂದು ದೇಶ- ಒಂದು ಚುನಾವಣೆ ಸಂಸದೀಯ ಮೌಲ್ಯಗಳ ಕುರಿತ ಚರ್ಚೆ ಮಾಡಲಾಯಿತು. ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಆರ್ ವಿ ದೇಶಪಾಂಡೆ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.

ಮೌಲ್ಯಗಳು ಕುಸಿಯುತ್ತಿವೆ: ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರ ಇಡೀ ವಿಶ್ವದಲ್ಲಿ ಮತ್ತೊಂದಿಲ್ಲ. ಆದರೆ, ಬರಬರುತ್ತಾ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗು ಪತ್ರಿಕಾ ರಂಗದ ಜೊತೆಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಆದರ್ಶ, ಮೌಲ್ಯಗಳು ಕುಸಿಯುತ್ತಿವೆ ಎಂದು ಸ್ಪೀಕರ್ ಬೇಸರ ವ್ಯಕ್ತಪಡಿಸಿದರು.

ಭಾರತದಂತಹ ಪ್ರಜಾಪ್ರಭುತ್ವ ಇನ್ನೊಂದಿಲ್ಲ: ವಿಧಾನಸಭೆಯ ಕಾರ್ಯ ಕಲಾಪಗಳ ಜೊತೆಗೆ ಸಭಾಧ್ಯಕ್ಷರ ಸ್ಥಾನದಲ್ಲಿ ಕೂತು ನಾನು ದೇಶದ ವಿವಿಧ ರಾಜ್ಯ ಹಾಗೂ ಕಾಮನ್‌ವೆಲ್ತ್ ಸಭೆ ಸೇರಿದಂತೆ ಬೇರೆ ಬೇರೆ ದೇಶಗಳನ್ನು ಸುತ್ತಿ ಅನೇಕ ತಜ್ಞರು, ರಾಜಕೀಯ ನಾಯಕರೊಂದಿಗೆ ಹಲವು ಸಭೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರ ಇಡೀ ವಿಶ್ವದಲ್ಲಿ ಇನ್ನೊಂದಿಲ್ಲ ಎಂದು ಹೇಳಿದರು.

ಶಾಸಕರಿಗೆ ಐದು ವರ್ಷಕ್ಕೊಮ್ಮೆ ಮೌಲ್ಯಮಾಪನ:ಆದರೆ ಇಂದು ದೇಶದ ಪ್ರಮುಖ ಅಂಗಗಳ ಜೊತೆಗೆ ಯಾವ ಕ್ಷೇತ್ರಗಳೂ ಹೊರತಾಗಿಲ್ಲದಂತೆ ಆದರ್ಶ, ಮೌಲ್ಯಗಳು ಕುಸಿದಿವೆ. ಕನಿಷ್ಠ ಪಕ್ಷ ಶಾಸಕರಿಗೆ ಐದು ವರ್ಷಕ್ಕೊಮ್ಮೆ ಜನರ ಮೌಲ್ಯಮಾಪನವಿದೆ. ಬೇರೆಯವರಿಗೆ ಅದೂ ಇಲ್ಲ ಎಂದರು.

ಐಕ್ಯತೆ ಕಾಪಾಡುವುದು ಸುಲಭವಲ್ಲ:ಹರಿದು ಹಂಚಿ ಹೋಗಿದ್ದ ದೇಶವನ್ನು ಒಟ್ಟುಗೂಡಿಸಿ ಸುದೀರ್ಘವಾಗಿ ಐಕ್ಯತೆ ಕಾಯ್ದುಕೊಂಡು ಬರುವುದು ಸುಲಭದ ಕೆಲಸವಲ್ಲ. ಅನೇಕ ಮಹಾನ್ ನಾಯಕರ ತ್ಯಾಗ ಬಲಿದಾನ, ನಂತರ ರಾಷ್ಟ್ರವನ್ನು ಆಳಿದ ನಾಯಕರು ಹಾಕಿದ ಭದ್ರ ಬುನಾದಿಗಳಿಂದ ಇದು ಸಾಧ್ಯವಾಗಿದೆ. ಅವರ ಆದರ್ಶ, ಮೌಲ್ಯಗಳನ್ನು ಪಾಲಿಸಿಕೊಂಡು ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಯುತಗೊಳಿಸುವ ಕೆಲಸ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬರಲ್ಲೂ ದೇಶ ಮೊದಲು ಎನ್ನುವ ಜಾಗೃತಿ ಮೂಡಬೇಕು ಎಂದು ಸಲಹೆ ನೀಡಿದರು.

ಚುನಾವಣೆ ವ್ಯವಸ್ಥೆಗಳು ಕಲುಷಿತ ಆಗ್ತಿದೆ: ಸಮಾಜದಲ್ಲಿನ ಅಸಮಾನತೆ, ಚುನಾವಣೆ ವ್ಯವಸ್ಥೆ ಕಲುಷಿತ ಆಗ್ತಿದೆ. ಪ್ರಜಾಪ್ರಭುತ್ವದ ಮೌಲ್ಯ ಕುಸಿಯುತ್ತಿದೆ. ರಾಜಕೀಯ ಪಕ್ಷಗಳ ಜವಾಬ್ದಾರಿ ದೊಡ್ಡದಿದೆ. ಚುನಾವಣೆಯ ಗೆಲುವಿನ ದೃಷ್ಟಿಕೋನದ ಪರಿಣಾಮ ಇದಾಗಿದೆ. ಕೇಡರ್ ನಿರ್ಮಾಣ, ತತ್ವ ಸಿದ್ಧಾಂತ ಉಳಿಯಬೇಕು. ಪಕ್ಷ -ಸಿದ್ಧಾಂತದ ಬಗ್ಗೆ ಆಯ್ಕೆಯಾದ ಜನಪ್ರತಿನಿಧಿಗಳು ಗಮನ ಕೊಡಬೇಕು ಎಂದು ಅಭಿಪ್ರಾಯಪಟ್ಟರು.

ಲಕ್ನೋ , ಗೌಹಾತಿಯಲ್ಲಿ, ಜೈಪುರ ,ಶಿಮ್ಲಾದಲ್ಲಿ ನಡೆದ ಸಮ್ಮೇಳನದಲ್ಲಿ ಭಾಗಿಯಾಗಿದ್ದೆನು. 64ನೇ ಸಮ್ಮೇಳನದಲ್ಲಿ ನಾನೂ ಪಾಲ್ಗೊಂಡಿದ್ದೆನು. 1.10 ಲಕ್ಷ ಸಾರ್ವಜನಿಕರು ಬಂದು ಸದನ ನೋಡಿದ್ದಾರೆ. ಸೆಡ್ಯೂಲ್ 10 ಬಗ್ಗೆ ವಿಸ್ತೃತ ಚರ್ಚೆ ಆಗಿದೆ. ಸಂಸದೀಯ ಗಣ್ಯರ ಜತೆಗೆ ಚರ್ಚೆ ಆಗಿದೆ. ವರದಿಯನ್ನು ಲೋಕಸಭೆ ಸ್ಪೀಕರ್ ಅವರಿಗೆ ನೀಡಲಾಗಿದೆ. ಅದು ಲೋಕಸಭೆಯಲ್ಲಿ ಮಂಡನೆಯಾಗಬೇಕು ಎಂದು ಹೇಳಿದರು.

ಇದನ್ನೂಓದಿ:ನಾಳೆ ಕಾಂಗ್ರೆಸ್​ ಕರೆ ನೀಡಿದ್ದ ಕರ್ನಾಟಕ ಬಂದ್​ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.