ETV Bharat / state

ಬಾಣಸವಾಡಿ: ವಿದೇಶಿ ಪ್ರಜೆಗೆ ಚಾಕು ತೋರಿಸಿ ಕಾರು ದೋಚಿದ ಆರೋಪಿ ಸೆರೆ

author img

By

Published : Nov 15, 2022, 10:11 AM IST

Updated : Nov 15, 2022, 4:01 PM IST

ವಿದೇಶಿ ಪ್ರಜೆಗೆ ಚಾಕು ತೋರಿಸಿ ಹಾಡಹಗಲೇ ಕಾರನ್ನು ದೋಚಿದ್ದ ಆರೋಪಿಯನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

banaswadi theft arrest
ವಿದೇಶಿ ಪ್ರಜೆಗೆ ಚಾಕು ತೋರಿಸಿ ಕಾರು ದೋಚಿದ್ದ ಆರೋಪಿ ಬಂಧನ

ಬೆಂಗಳೂರು: ವಿದೇಶಿ ಪ್ರಜೆಗೆ ಚಾಕು ತೋರಿಸಿ ಕಾರು ದೋಚಿದ ಆರೋಪಿಯನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಸೈಯದ್ ಯಾಸೀನ್ (26) ಬಂಧಿತ ವ್ಯಕ್ತಿ. ನವೆಂಬರ್ 11ರಂದು ತನ್ನ ಗೆಳೆಯ ಮಹಮ್ಮದ್ ಮನ್ಸೂರ್ ಜತೆಗೂಡಿ ದುಷ್ಕೃತ್ಯ ಎಸಗಿದ್ದ.

ವಿದೇಶಿ ಪ್ರಜೆಗೆ ಚಾಕು ತೋರಿಸಿ ಕಾರು ದೋಚಿದ ಆರೋಪಿ ಸೆರೆ

ಸುಡಾನ್ ದೇಶದ ಪ್ರಜೆಯ ಹುಂಡೈ ವರ್ನಾ ಕಾರನ್ನು ಅಡ್ಡಗಟ್ಟಿದ್ದ ಆರೋಪಿಗಳು ಬೆದರಿಸಿ ಕದ್ದೊಯ್ದಿದ್ದರು. ಈ ಬಗ್ಗೆ ವಿದೇಶಿ ಪ್ರಜೆ ಬಾಣಸವಾಡಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ತಕ್ಷಣ ತನಿಖೆ ಚುರುಕುಗೊಳಿಸಿದ ಪೊಲೀಸರು, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ಯಾಸೀನ್‌ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. 2 ಲಕ್ಷ ಮೌಲ್ಯದ ಕಾರು ಹಾಗೂ ಒಂದು ಬೈಕ್ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ:ನಾಯಿ ಕಡಿತದಿಂದ ಆಸ್ಪತ್ರೆಗೆ ದಾಖಲಾದ ಬಾಲಕನ ಸಾವು: ಪೋಷಕರ ಆಕ್ರೋಶ

Last Updated : Nov 15, 2022, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.