ಬೆಂಗಳೂರು: ಕೆ. ಆರ್ ಮಾರ್ಕೆಟ್ ವಾರ್ಡ್ನ ಮಾಜಿ ಕಾರ್ಪೊರೇಟರ್ ನಜೀಮಾ ಪತಿ ಅಯೂಬ್ ಖಾನ್ ಹತ್ಯೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿ ಮತೀನ್ ಖಾನ್ ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟಿದ್ದಾನೆ.
ನನ್ನ ಮೇಲೆ ಹಲ್ಲೆ ಮಾಡಲು ಅವರೇ ಬಂದ್ರು. ನನ್ನ ಚಿಕ್ಕಪ್ಪ ಅಯೂಬ್ ಖಾನ್ ಹಾಗೂ ಅವರ ಮಗ ಹಲ್ಲೆಗೆ ಮುಂದಾಗಿದ್ದರು. ಜೊತೆಗೆ ಅಯೂಬ್ ಖಾನ್ ಮಗನೇ ಮೊದಲಿಗೆ ಲಾಂಗ್ನಲ್ಲಿ ಹಲ್ಲೆಗೆ ಯತ್ನಿಸಿದ್ದ. ಏರಿಯಾದಲ್ಲಿ ಇರಬೇಡ ಎಂದು ಅಯೂಬ್ ಖಾನ್ ಯಾವಾಗಲೂ ಬೈತಿದ್ರು. ಸುಖಾಸುಮ್ಮನೇ ನನ್ನ ಮೇಲೆ ಪೊಲೀಸರಿಗೆ ದೂರು ಕೊಡುತ್ತಿದ್ದರು. ಹಲವು ಬಾರಿ ಪೊಲೀಸ್ ಠಾಣೆಗೆ ಕರೆಸಿ ವಾರ್ನ್ ಮಾಡಿಸಿದ್ದಾರೆ.
ಮೊನ್ನೆ ಘಟನೆ ನಡೆದಾಗ ನಾನು ನಮಾಜ್ ಮುಗಿಸಿ ಬೇಕರಿ ಬಳಿ ನಿಂತಿದ್ದಾಗ ಅಯೂಬ್ ಖಾನ್ ಹಾಗೂ ಅವರ ಮಗ ಬಂದು ಬೈದಿದ್ದಾರೆ. ಬಳಿಕ ಅವರ ಮಗ ನನಗೆ ಹಲ್ಲೆ ಮಾಡಿದ್ದಾನೆ ಎಂದು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.
ಓದಿ: ಅಪ್ರಾಪ್ತ ಮಗನಿಗೆ ವಾಹನ ಕೊಟ್ಟ ತಾಯಿ.. 25,500 ರೂ ದಂಡ ವಿಧಿಸಿದ ನ್ಯಾಯಾಲಯ