ETV Bharat / state

ಮಾಯಾಂಗಿನಿಯನ್ನು ಮುಂದೆ ಬಿಟ್ಟು ಸ್ಕೆಚ್​: ಲೋಕಿಯನ್ನು ಸ್ಮಶಾನಕ್ಕೆ ಕಳಿಸಿದ ಆರೋಪಿಗಳು ಅಂದರ್​ - ಲೋಕೇಶ್ ಕೊಲೆ ಪ್ರಕರಣದ ಆರೋಪಿಗಳ ಬಂಧನ

ಬೆಂಗಳೂರಿನಲ್ಲಿ ರೌಡಿಶೀಟರ್ ಲೋಕೇಶ್ ಅಲಿಯಾಸ್ ಸ್ಮಶಾನ ಲೋಕಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು, ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನ
ಆರೋಪಿಗಳ ಬಂಧನ
author img

By

Published : Jan 29, 2020, 10:11 PM IST

ಬೆಂಗಳೂರು: ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಲೋಕೇಶ್ ಅಲಿಯಾಸ್ ಸ್ಮಶಾನ ಲೋಕಿ ಕೊಲೆ ಪ್ರಕರಣದ ಆರೋಪಿಗಳನ್ನು ಕೊನೆಗೂ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೇಮಂತ್, ಸಾಗರ್, ರವಿ ಬಂಧಿತ ಆರೋಪಿಗಳು. ಹಳೇ ದ್ವೇಷದ ಹಿನ್ನಲೆ ಕೊಲೆ ಮಾಡಲಾಗಿದ್ದು, ಆರೋಪಿಗಳು ಓರ್ವ ಮಹಿಳೆಯನ್ನು ಮುಂದೆ ಬಿಟ್ಟು ಕೊಲೆಗೆ ಪ್ಲಾನ್ ಮಾಡಿದ್ದರು ಅನ್ನೋ ವಿಷಯ ತಿಳಿದುಬಂದಿದೆ. ಕಳೆದ ವಾರ‌ ಮಹಿಳೆಯ ಮನೆಗೆ ಬಂದಿದ್ದ ಲೋಕಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿದ್ದ ಹೇಮಂತ್ ಮತ್ತು ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪಶ್ಚಿಮ ವಿಭಾಗ ಪೊಲೀಸರು ತನಿಖಾ ತಂಡ ರಚನೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಬಂಧನದ ಕುರಿತು ವಿವರಣೆ ನೀಡಿದ ರಮೇಶ್ ಬಾನೋತ್

ಕೊಲೆಯಾದ ಲೋಕಿ ಹಾಗು ಆರೋಪಿಗಳು ಒಂದೇ ಏರಿಯಾದವರು. ಒಂದು ಕಾಲದಲ್ಲಿ ಸೈಕಲ್ ರವಿಯ ಸಹಚರನಾಗಿದ್ದ ಲೋಕಿ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಎನ್ನಲಾಗ್ತಿದೆ. ಕೆಲವು ವಿಚಾರಕ್ಕೆ ಲೋಕಿ ಹಾಗೂ ಸಾಗರ್ ನಡುವೆ ದ್ವೇಷ ಬೆಳೆದಿತ್ತು. ಕೊಲೆಯಾದ ಲೋಕಿ ಕಳೆದ ತಿಂಗಳು ಫೇಸ್ಬುಕ್​ನಲ್ಲಿ ಆರೋಪಿ ಹೇಮಂತ್ ತಾಯಿ ಹಾಗು ತಂಗಿ ಬಗ್ಗೆ ಅವಹೇಳನಕಾರಿಯಾಗಿ ಬರೆದುಕೊಂಡಿದ್ದ. ಈ ವೇಳೆ ಕುಪಿತಗೊಂಡಿದ್ದ ಹೇಮಂತನು​ ಲೋಕಿ ಕೊಲೆಗೆ ಪ್ಲಾನ್​​ ಮಾಡಿದ್ದ.

ಓರ್ವ ಮಹಿಳೆಯನ್ನು ಮುಂದೆ ಬಿಟ್ಟಿದ್ದ ಹೇಮಂತ್ ಲೋಕಿ ಜೊತೆ ಲಿಂಕ್​ನಲ್ಲಿ ಇರುವಂತೆ ಮಾಡಿದ್ದ. ನಂತರ ಅಂದು ರಾತ್ರಿ ಮನೆಗೆ ಬರುವಂತೆ ಲೋಕಿಗೆ ಫೋನ್ ಮಾಡಿದ್ದ ಮಹಿಳೆ ನಂತರ ಹೇಮಂತ್​ಗೂ ಈ ಕುರಿತು ಮಾಹಿತಿ ನೀಡಿದ್ದಳು ಎನ್ನಲಾಗ್ತಿದೆ. ಬಳಿಕ ಮನೆ ಬಳಿ ಕಾದು ಕುಳಿತಿದ್ದ ಹೇಮಂತ್ ಹಾಗೂ ಸಹಚರರು ಲೋಕಿ ಮೇಲೆ ಏಕಾಏಕಿ ದಾಳಿ ಮಾಡಿ ಹತ್ಯೆಗೈದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಚಾಮರಾಜಪೇಟೆ ಪೊಲೀಸರು ಹೇಮಂತ್ ಹಾಗೂ ಸಹಚರರನ್ನು ಬಂಧಿಸಿದ್ದಾರೆ. ಹಾಗೆಯೇ ಮಹಿಳೆಯನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.