ಬೆಂಗಳೂರು: ಕೋರಮಂಗಲದ ಎನ್ಜಿವಿ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಆರೋಪಿ ಎಸ್ಕೇಪ್ ಆಗಿದ್ದಾನೆ.
ಉತ್ತರ ಪ್ರದೇಶ ಮೂಲದ ರಾಜು ಖಾನ್ ಎಸ್ಕೇಪ್ ಆಗಿರುವ ಆರೋಪಿ. ಇದೇ ತಿಂಗಳು ಕೋಣನಕುಂಟೆ ಠಾಣಾ ವ್ಯಾಪ್ತಿಯ ಜಂಬುಸವಾರಿ ದಿಣ್ಣೆ ಮುಖ್ಯ ರಸ್ತೆ ಬಳಿ ದರೋಡೆಗೆ ಯತ್ನಿಸಿ ಪೊಲೀಸರ ಕೈಗೆ ಆರೋಪಿಗಳಿಬ್ಬರು ಸಿಕ್ಕಿಬಿದ್ದಿದ್ದರು. ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಇಬ್ಬರು ಆರೋಪಿಗಳನ್ನು ಸ್ವ್ಯಾಬ್ ಟೆಸ್ಟ್ಗೆ ಒಳಪಡಿಸಿದಾಗ ಕೋವಿಡ್ ಸೋಂಕಿರುವುದು ಗೊತ್ತಾಗಿದೆ.
ಈ ಸಂಬಂಧ ಜು. 17ರಿಂದ 22ರವರೆಗೆ ಕೋರಮಂಗಲದ ಎನ್ಜಿವಿ ಕೋವಿಡ್ ಕೇರ್ ಸೆಂಟರ್ನಲ್ಲಿದ್ದರು. ಈ ಪೈಕಿ ರಾಜು ಖಾನ್ ಜು. 22ರಂದು ರಾತ್ರಿ ಕ್ವಾರಂಟೈನ್ ಕೇಂದ್ರದಿಂದ ತಲೆಮರೆಸಿಕೊಂಡಿದ್ದಾನೆ. ಈ ಸಂಬಂಧ ನೋಡಲ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.