ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದ ಬೆನ್ನ ಹಿಂದೆ ಬಿದ್ದ ಬಳಿಕ ನಗರದಲ್ಲಿ ಪೆಡ್ಲಿಂಗ್ ಮಾಡುತ್ತಿದ್ದ ಡ್ರಗ್ ಪೆಡ್ಲರ್ಗಳ ಬಂಧನ ಮಾಡುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗ್ತಿದ್ದಾರೆ.
ರಾಜಾಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿ ಅಮಿರ್ ಅಹಮ್ಮದ್ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ.
ಇನ್ನು ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದಾಗ ಹೋಟೆಲ್ನಲ್ಲಿ ಸ್ವಾಗತಕಾರನಾಗಿ ಕೆಲಸ ಮಾಡಿಕೊಂಡಿದ್ದು, ಲಾಕ್ಡೌನ್ ಸಮಯದಲ್ಲಿ ಕೆಲಸ ತೆಗೆದು ಹಾಕಿದಾಗ ಕೆಲಸವಿಲ್ಲದೇ ಇರುವ ಸಮಯದಲ್ಲಿ ತನ್ನ ಸ್ನೇಹಿತ ಇರ್ಫಾನ್ನೊಂದಿಗೆ ಸೇರಿ ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಗಾಂಜಾ ತರುತ್ತಿದ್ದ ವಿಚಾರ ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿಯಿಂದ 20.ಕೆ.ಜಿ ಗಾಂಜಾ, 1 ದ್ವಿಚಕ್ರವಾಹನ ಹಾಗೂ ನಗದು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಯನ್ನ ತನಿಖೆಗೆ ಒಳಪಡಿಸಿದ್ದಾರೆ.