ETV Bharat / state

ಪೊಲೀಸರ ಮೇಲೆಯೇ ಕಾರು ಹತ್ತಿಸಲು ಮುಂದಾದ ಆರೋಪಿ ಅರೆಸ್ಟ್ - hennur police latest news

ಹಿಡಿಯಲು ಹೋಗಿದ್ದ ವೇಳೆ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದ ಆರೋಪಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

arrests
ಆರೋಪಿ ಅರೆಸ್ಟ್
author img

By

Published : Apr 5, 2021, 2:21 PM IST

ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಹಿಡಿಯಲು ಹೋದ ಪೊಲೀಸರ ಕಾರನ್ನು ಹತ್ತಿಸಿಲು ಪ್ರಯತ್ನಿಸಿದ್ದ ಆರೋಪಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

ಜಾಹನ್ಸ್ ವಿಹುಂಗೆಫ್ರಿ ಕೆನಿಗೇ ಬಂಧಿತ ಆರೋಪಿ. ಆರೋಪಿಯಿಂದ ಅಕ್ರಮವಾಗಿ ಸಂಗ್ರಹಿಸಿದ್ದ 103 ಲೀಟರ್ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ‌. ಹೊರಮಾವಿನಲ್ಲಿ ಅಫ್ರಿಕನ್ ಕಿಚನ್ ಹೆಸರಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ. ಹೊರಮಾವು ಬಳಿಯ ಅಗರ ಶೆಡ್ ಬಳಿ ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದ. ಖಚಿತ ಮಹಿತಿ ಮೇರೆಗೆ ಹೆಣ್ಣೂರು ಪೊಲೀಸ್ ಇನ್ಸ್​​ಪೆಕ್ಟರ್ ವಸಂತ್ ಕುಮಾರ್ ನೇತೃತ್ವದಲ್ಲಿ ಬಂಧಿಸಲು ಹೋದಾಗ ಆರೋಪಿ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ‌. ಬಳಿಕ ಕಾರು ಚಲಾಯಿಸಿ ಪೊಲೀಸರ ಮೇಲೆ ಹತ್ತಿಸಲು ಮುಂದಾಗಿದ್ದ‌. ಹೊಯ್ಸಳ ಮೂಲಕ ಚೇಸ್ ಮಾಡಿ ಅಡ್ಡಗಟ್ಟಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀಗಂಧ ಮರದ ತುಂಡು ಕಡಿದಿದ್ದ ಕಳ್ಳನ ಬಂಧನ:

ಮತ್ತೊಂದು ಪ್ರಕರಣದಲ್ಲಿ ಶ್ರೀಗಂಧ ಮರವನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಮಣಿ (27) ಬಂಧಿತ ಆರೋಪಿ ಮೂಲತಃ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯವನಾದ ಆರೋಪಿ ಹೊರಮಾವು ಅಗರ ಬಳಿಯ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರ ಕಡಿದಿದ್ದ. ಬಂಧಿತನಿಂದ 3.40 ಲಕ್ಷ ಮೌಲ್ಯದ 114 ಕೆಜಿ ತೂಕದ 12 ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ‌ ಎಂದು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.