ETV Bharat / state

2005ರಿಂದ ರಾಜಧಾನಿಯಲ್ಲಿ ನಡೆದ ಟಿಡಿಆರ್ ಹಗರಣವೆಷ್ಟು ? ತನಿಖೆ ನಡೆಸಲಿದೆ ಎಸಿಬಿ..!

ಟಿಡಿಆರ್ ಗೆ ಸಂಬಂಧಿಸಿದಂತೆ 2005ರಿಂದ ಇದುವರೆಗೂ ಬೆಂಗಳೂರಿನ ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ದಾಖಲಾಗಿದ್ದ ದೂರುಗಳ ಬಗ್ಗೆ ಸಮರ್ಪಕ ಮಾಹಿತಿ ಕಲೆಹಾಕಿ ಬಂದಿರುವ ಎಲ್ಲಾ ದೂರುಗಳ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಎಸಿಬಿ ತನಿಖೆ ನಡೆಸಲು ಪೂರ್ವ ಸಿದ್ಧತೆ ನಡೆಸುತ್ತಿದೆ.

2005ರಿಂದ ರಾಜಧಾನಿಯಲ್ಲಿ ನಡೆದ ಟಿಡಿಆರ್ ಹಗರಣವೇಷ್ಟು ?
author img

By

Published : Aug 12, 2019, 11:18 PM IST

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆಯಲ್ಲಿ (ಟಿಡಿಆರ್) ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಗರಣ ಜಾಲ ಬೆಳಕಿಗೆ ತಂದ ಎಸಿಬಿ ತನಿಖಾಧಿಕಾರಿಗಳು ಚಾರ್ಜ್ ಶೀರ್ಟ್ ಸಲ್ಲಿಸುವ ಹಂತದಲ್ಲಿದ್ದಾರೆ. ಇನ್ನೊಂದೆಡೆ 2005ರಿಂದ ಬೆಂಗಳೂರಿನಲ್ಲಿ‌ ಈವರೆಗೂ ನಡೆದ ಒಟ್ಟಾರೆ ಟಿಡಿಆರ್ ಮೋಸದ ಜಾಲ ಭೇದಿಸಲು ಮುಂದಾಗಿದ್ದಾರೆ‌.

ಟಿಡಿಆರ್ ಗೆ ಸಂಬಂಧಿಸಿದಂತೆ 2005ರಿಂದ ಇದುವರೆಗೂ ಬೆಂಗಳೂರಿನ ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ದಾಖಲಾಗಿದ್ದ ದೂರುಗಳ ಬಗ್ಗೆ ಸಮರ್ಪಕ ಮಾಹಿತಿ ಕಲೆಹಾಕಿ ಬಂದಿರುವ ಎಲ್ಲಾ ದೂರುಗಳ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಎಸಿಬಿ ತನಿಖೆ ನಡೆಸಲು ಪೂರ್ವ ಸಿದ್ಧತೆ ನಡೆಸುತ್ತಿದೆ.

ಬಿಬಿಎಂಪಿಯಲ್ಲಿ ಸಾರ್ವಜನಿಕ ಬಳಕೆಗಾಗಿ ಖಾಸಗಿಯವರಿಂದ ಜಾಗ ವಶಪಡಿಸಿಕೊಂಡಿದ್ದಕ್ಕೆ ಪರಿಹಾರ ರೂಪವಾಗಿ ಆಸ್ತಿ‌ ಮಾಲೀಕರಿಗೆ ಟಿಡಿಆರ್ ಹಕ್ಕು ವಿತರಣೆಯಲ್ಲಿ ಅಧಿಕಾರಿಗಳು ಕೋಟ್ಯಂತರ ಭ್ರಷ್ಟಾಚಾರ ನಡೆಸಿದ್ದಾರೆ.‌ ಇದಾದ ನಂತರ 2015ರಿಂದ ಬಿಬಿಎಂಪಿಯಿಂದ ಬಿಡಿಎಗೆ ಟಿಡಿಆರ್ ನೀಡುವ ಅಧಿಕಾರದ ಜವಾಬ್ದಾರಿ ನೀಡಿದ ಬಳಿಕ ಮತ್ತೆ ಅದೇ ಅಧಿಕಾರಿಗಳು ವರ್ಗವಾಗಿ ನಗರ ಪೂರ್ವ ವಿಭಾಗದ ಟಿ.ಸಿ.ಪಾಳ್ಯ‌ ಮುಖ್ಯರಸ್ತೆಯಿಂದ ರಾಮಮೂರ್ತಿ ಮುಖ್ಯರಸ್ತೆವರೆಗೂ ನಡೆದ ರಸ್ತೆ ಭೂಸ್ವಾಧೀನ ಪ್ರಕ್ರಿಯೆ ವೇಳೆ ನಡೆದಿದೆ ಎನ್ನಲಾದ ಟಿಡಿಆರ್ ಹಗರಣದ ಆರೋಪದಡಿ‌ ಆರೋಪಿಗಳಾದ ಬಿಡಿಎ ಸಹಾಯಕ ಅಭಿಯಂತರ ಕೃಷ್ಣಲಾಲ್, ವಾಲ್ ಮಾರ್ಕ್ ಕಂಪೆನಿ‌ ಮುಖ್ಯಸ್ಥ ರತನ್ ಲಾತ್, ಏಜೆಂಟ್​ಗಳಾದ ಅಮಿತ್ ಬೋಳಾರ, ಮುನಿರಾಜು ಹಾಗೂ ಗೌತಮ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿತ್ತು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಇದುವರೆಗೂ ಸಾವಿರಾರು ಕೋಟಿ ರೂ. ಟಿಡಿಆರ್ ಹಗರಣ ನಡೆದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ವ್ಯಕ್ತಿಯೊಬ್ಬರು ರಿಟ್ ಅರ್ಜಿ ಸಲ್ಲಿಸಿದ್ದರು‌ ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್, ನಗರದಲ್ಲಿ ಈವರೆಗೂ ಟಿಡಿಆರ್ ಹಾಗೂ ಸ್ವಾಧೀನ ಪ್ರಮಾಣಪತ್ರ (ಒಸಿ) ನೀಡಿದ ಬಗ್ಗೆ ತನಿಖೆ ನಡೆಸಬೇಕೆಂದು ಹೈಕೋರ್ಟ್ ಎಸಿಬಿಗೆ ಆದೇಶಿತ್ತು.

ಆದೇಶ ಹಿನ್ನೆಲೆಯಲ್ಲಿ ಎಸಿಬಿ‌ ಎಸ್ಪಿ ಅಬ್ದುಲ್ ಅಹದ್, ಟಿಡಿಆರ್ ಹಗರಣ ಬಗ್ಗೆ ಹೈಕೋರ್ಟ್ ಆದೇಶಿದ್ದು, ಶೀಘ್ರದಲ್ಲಿ ಪ್ರತ್ಯೇಕ ವಿಶೇಷ ತಂಡ ರಚಿಸಿ ತನಿಖೆ‌‌‌ ಕೈಗೊಳ್ಳುತ್ತೇವೆ ಎಂದು ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

Intro:nullBody:
2005ರಿಂದ ರಾಜಧಾನಿಯಲ್ಲಿ ಈವರೆಗೂ ನಡೆದ ಟಿಡಿಆರ್ ಹಗರಣ ಎಷ್ಟು ? ಈ ಬಗ್ಗೆ ತನಿಖೆ ನಡೆಸಲಿದೆ ಎಸಿಬಿ ವಿಶೇಷ ತಂಡ...!

ಬೆಂಗಳೂರು:

ಅಭಿವೃದ್ಧಿ ಹಕ್ಕು ವರ್ಗಾವಣೆಯಲ್ಲಿ (ಟಿಡಿಆರ್) ನಡೆದಿದೆ ಎನ್ನಲಾದ ಕೋಟ್ಯಂತರ ರೂ.ಹಗರಣ ಜಾಲ ಬೆಳಕಿಗೆ ತಂದ ಎಸಿಬಿ ತನಿಖಾಧಿಕಾರಿಗಳು ಚಾರ್ಜ್ ಶೀರ್ಟ್ ಸಲ್ಲಿಸುವ ಹಂತದಲ್ಲಿದ್ದಾರೆ. ಇನ್ನೊಂದೆಡೆ 2005ರಿಂದ ಬೆಂಗಳೂರಿನಲ್ಲಿ‌ ಈವರೆಗೂ ನಡೆದ ಒಟ್ಟಾರೆ ಟಿಡಿಆರ್ ಮೋಸದ ಜಾಲ ಭೇದಿಸಲು ಮುಂದಾಗಿದ್ದಾರೆ‌.

ಟಿಡಿಆರ್ ಗೆ ಸಂಬಂಧಿಸಿದಂತೆ 2005ರಿಂದ ಇದುವರೆಗೂ ಬೆಂಗಳೂರಿನ ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ದಾಖಲಾಗಿದ್ದ ದೂರುಗಳ ಬಗ್ಗೆ ಸಮರ್ಪಕ ಮಾಹಿತಿ ಕಲೆಹಾಕಿ ಬಂದಿರುವ ಎಲ್ಲಾ ದೂರುಗಳ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಎಸಿಬಿ ತನಿಖೆ ನಡೆಸಲು ಪೂರ್ವ ಸಿದ್ಧತೆ ನಡೆಸುತ್ತಿದೆ.

ಬಿಬಿಎಂಪಿಯಲ್ಲಿ ಸಾರ್ವಜನಿಕ ಬಳಕೆಗಾಗಿ ಖಾಸಗಿಯವರಿಂದ ಜಾಗ ವಶಪಡಿಸಿಕೊಂಡಿದ್ದಕ್ಕೆ ಪರಿಹಾರ ರೂಪವಾಗಿ ಆಸ್ತಿ‌ ಮಾಲೀಕರಿಗೆ ಟಿಡಿಆರ್ ಹಕ್ಕು ವಿತರಣೆಯಲ್ಲಿ ಅಧಿಕಾರಿಗಳು ಕೋಟ್ಯಂತರ ಭ್ರಷ್ಟಾಚಾರ ನಡೆಸಿದ್ದಾರೆ.‌ ಇದಾದ ನಂತರ 2015ರಿಂದ ಬಿಬಿಎಂಪಿಯಿಂದ ಬಿಡಿಎಗೆ ಟಿಡಿಆರ್ ನೀಡುವ ಅಧಿಕಾರದ ಜವಾಬ್ದಾರಿ ನೀಡಿದ ಬಳಿಕ ಮತ್ತೆ ಅದೇ ಅಧಿಕಾರಿಗಳು ವರ್ಗವಾಗಿ ನಗರ ಪೂರ್ವ ವಿಭಾಗದ ಟಿ.ಸಿ.ಪಾಳ್ಯ‌ ಮುಖ್ಯರಸ್ತೆಯಿಂದ ರಾಮಮೂರ್ತಿ ಮುಖ್ಯರಸ್ತೆವರೆಗೂ ನಡೆದ ರಸ್ತೆ ಭೂಸ್ವಾಧೀನ ಪ್ರಕ್ರಿಯೆ ವೇಳೆ ನಡೆದಿದೆ ಎನ್ನಲಾದ ಟಿಡಿಆರ್ ಹಗರಣದ ಆರೋಪದಡಿ‌ ಆರೋಪಿಗಳಾದ ಬಿಡಿಎ ಸಹಾಯಕ ಅಭಿಯಂತರ ಕೃಷ್ಣಲಾಲ್, ವಾಲ್ ಮಾರ್ಕ್ ಕಂಪೆನಿ‌ ಮುಖ್ಯಸ್ಥ ರತನ್ ಲಾತ್, ಏಜೆಂಟ್ ಗಳಾದ ಅಮಿತ್ ಬೋಳಾರ, ಮುನಿರಾಜು ಹಾಗೂ ಗೌತಮ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿತ್ತು..

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಇದುವರೆಗೂ ಸಾವಿರಾರು ಕೋಟಿ ರೂ.ಟಿಡಿಆರ್ ಹಗರಣ ನಡೆದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ವ್ಯಕ್ತಿಯೊಬ್ಬರು ರಿಟ್ ಅರ್ಜಿ ಸಲ್ಲಿಸಿದ್ದರು‌ ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್, ನಗರದಲ್ಲಿ ಈವರೆಗೂ ಟಿಡಿಆರ್ ಹಾಗೂ ಸ್ವಾಧೀನ ಪ್ರಮಾಣಪತ್ರ (ಒಸಿ) ನೀಡಿದ ಬಗ್ಗೆ ತನಿಖೆ ನಡೆಸಬೇಕೆಂದು ಹೈಕೋರ್ಟ್ ಎಸಿಬಿಗೆ ಆದೇಶಿತ್ತು.

ಆದೇಶ ಹಿನ್ನೆಲೆಯಲ್ಲಿ ಎಸಿಬಿ‌ ಎಸ್ಪಿ ಅಬ್ದುಲ್ ಅಹದ್, ಟಿಡಿಆರ್ ಹಗರಣ ಬಗ್ಗೆ ಹೈಕೋರ್ಟ್ ಆದೇಶಿದ್ದು, ಶೀಘ್ರದಲ್ಲಿ ಪ್ರತ್ಯೇಕ ವಿಶೇಷ ತಂಡ ರಚಿಸಿ ತನಿಖೆ‌‌‌ ಕೈಗೊಳ್ಳುತ್ತೇವೆ ಎಂದು ಈಟಿವಿ ಭಾರತ್ ಗೆ ತಿಳಿಸಿದ್ದಾರೆ.

Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.